ದುಬಾಯಿಯಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದೆ. ವಿಮಾನದಲ್ಲಿ 174 ಪ್ರಯಾಣಿಕರು ಸೇರಿದಂತೆ ಒಟ್ಟು 191 ಮಂದಿ ಇದ್ದರು ಎನ್ನಲಾಗಿದ್ದು ಕನಿಷ್ಠ 3 ಜನರು ಮೃತಪಟ್ಟಿದ್ದು, 80 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದುಬೈ- ಕೊಯಿಕೋಡ್ ವಿಮಾನ X1344 ಬೋಯಿಂಗ್ 737 ವಿಮಾನವು ಇಂದು ಸಂಜೆ 7;41ರಲ್ಲಿ ಲ್ಯಾಂಡ್ ಆಗಿದ್ದು, ರನ್‌ವೆಯಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
Heartbreaking scenes from Karipur. A red day for Kerala! #KaripurAccident #AirIndia @Onmanorama pic.twitter.com/XWtMbmXUQm
— Ronnie (@kxronne) August 7, 2020
ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನವು ದುಬೈಯಿಂದ ಕೇರಳಕ್ಕೆ ಹೊರಟಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಕರಿಪುರದ ಕೋಯಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಲಾಗಿದೆ. ಪಾರುಗಾಣಿಕಾ ಮತ್ತು ವೈದ್ಯಕೀಯ ನೆರವುಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.” ಎಂದು ಹೇಳಿದ್ದಾರೆ.
Have instructed Police and Fire Force to take urgent action in the wake of the plane crash at the Kozhikode International airport (CCJ) in Karipur. Have also directed the officials to make necessary arrangements for rescue and medical support.
— Pinarayi Vijayan (@vijayanpinarayi) August 7, 2020
ಈ ಬಗ್ಗೆ ದುಬೈ ರಾಯಭಾರಿ ಕಚೇರಿ, ದುಬೈನಿಂದ ಕ್ಯಾಲಿಕಟ್‌ಗೆ ಹೋಗುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಸಂಖ್ಯೆ ಐಎಕ್ಸ್ 1344 ರನ್‌ವೇಯಿಂದ ಹೊರಬಿದ್ದಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. 056 546 3903, 0543090572, 0543090572, 0543090575 ಎಂದು ಸಹಾಯವಾಣಿಗಳ ಸಂಖ್ಯೆ ನೀಡಿದೆ.
Air India Express Flight No IX 1344 from Dubai to Calicut skidded off the runway.We pray for well being of passengers and crew and will keep you updated as and when we receive further updates.Our helplines 056 546 3903, 0543090572, 0543090572, 0543090575 @MOS_MEA @IndembAbuDhabi
— India in Dubai (@cgidubai) August 7, 2020
ಓದಿ: ಕೇರಳದಲ್ಲಿ ಭೂಕುಸಿತ; 12 ಮಂದಿ ಸಾವು, ಸಂಕಷ್ಟದಲ್ಲಿ 60 ಮಂದಿ


