HomeಮುಖಪುಟAir India Air Craft Crash | ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ವಿಮಾನ ಅಫಘಾತ

Air India Air Craft Crash | ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ವಿಮಾನ ಅಫಘಾತ

- Advertisement -
- Advertisement -

ದುಬಾಯಿಯಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನವೊಂದು ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದೆ. ವಿಮಾನದಲ್ಲಿ 174 ಪ್ರಯಾಣಿಕರು ಸೇರಿದಂತೆ ಒಟ್ಟು 191 ಮಂದಿ ಇದ್ದರು ಎನ್ನಲಾಗಿದ್ದು ಕನಿಷ್ಠ 3 ಜನರು ಮೃತಪಟ್ಟಿದ್ದು, 80 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದುಬೈ- ಕೊಯಿಕೋಡ್ ವಿಮಾನ X1344 ಬೋಯಿಂಗ್ 737 ವಿಮಾನವು ಇಂದು ಸಂಜೆ 7;41ರಲ್ಲಿ ಲ್ಯಾಂಡ್ ಆಗಿದ್ದು, ರನ್‌ವೆಯಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ವಂದೇ ಭಾರತ್‌ ಮಿಷನ್ ಅಡಿಯಲ್ಲಿ ವಿಮಾನವು ದುಬೈಯಿಂದ ಕೇರಳಕ್ಕೆ ಹೊರಟಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್  “ಕರಿಪುರದ ಕೋಯಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಲಾಗಿದೆ. ಪಾರುಗಾಣಿಕಾ ಮತ್ತು ವೈದ್ಯಕೀಯ ನೆರವುಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.” ಎಂದು ಹೇಳಿದ್ದಾರೆ.

ಈ ಬಗ್ಗೆ ದುಬೈ ರಾಯಭಾರಿ ಕಚೇರಿ, ದುಬೈನಿಂದ ಕ್ಯಾಲಿಕಟ್‌ಗೆ ಹೋಗುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಸಂಖ್ಯೆ ಐಎಕ್ಸ್ 1344 ರನ್‌ವೇಯಿಂದ ಹೊರಬಿದ್ದಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. 056 546 3903, 0543090572, 0543090572, 0543090575 ಎಂದು ಸಹಾಯವಾಣಿಗಳ ಸಂಖ್ಯೆ ನೀಡಿದೆ.


ಓದಿ: ಕೇರಳದಲ್ಲಿ ಭೂಕುಸಿತ; 12 ಮಂದಿ ಸಾವು, ಸಂಕಷ್ಟದಲ್ಲಿ 60 ಮಂದಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...