ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ ಮಟ್ಟವನ್ನು ಎದುರಿಸಲು ಕೃತಕ ಮಳೆಗೆ ಅನುಮತಿ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಯನ್ನು ಕೋರಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. “ಉತ್ತರ ಭಾರತವನ್ನು ಹೊಗೆಯ ಪದರಗಳು ಆವರಿಸಿವೆ. ಈ ಹೊಗೆಯನ್ನು ಹೋಗಲಾಡಿಸಲು ಕೃತಕ ಮಳೆಯೊಂದೇ ಪರಿಹಾರ. ಇದು ವೈದ್ಯಕೀಯ ತುರ್ತು ಪರಿಸ್ಥಿತಿ” ಎಂದು ಸಚಿವರು ಮಂಗಳವಾರ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ. ವಾಯು ಮಾಲಿನ್ಯ
“ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಈ ಬಗ್ಗೆ ಕಾರ್ಯನಿರ್ವಹಿಸುವುದು ಅವರ ನೈತಿಕ ಜವಾಬ್ದಾರಿಯಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರವು ಕ್ರಮಕೈಗೊಳ್ಳಬೇಕು.” ಎಂದು ಪತ್ರದಲ್ಲಿ ಸಚಿವರು ಹೇಳಿದ್ದಾರೆ. ದೆಹಲಿಯ ವಾಯು ಗುಣಮಟ್ಟವು ಗಂಭೀರವಾಗಿ ಹದಗೆಟ್ಟಿದ್ದು, ಹಲವಾರು ವಾಯು ನಿಗಾ ಕೇಂದ್ರಗಳು ಬಗ್ಗೆ ಎಚ್ಚರಿಕೆ ನೀಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈ, ಪರಿಸ್ಥಿತಿಯ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. “ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ಇಂದು ನೀಡಿದ ಪತ್ರ ಸೇರಿದಂತೆ ನಾನು ನಾಲ್ಕು ಪತ್ರಗಳನ್ನು ಕಳುಹಿಸಿದ್ದರೂ ಕೃತಕ ಮಳೆ ಕುರಿತು ಒಂದೇ ಒಂದು ಸಭೆಯನ್ನು ಕೇಂದ್ರ ಸಚಿವರು ಕರೆದಿಲ್ಲ” ಎಂದು ಹೇಳಿದ್ದಾರೆ.
“ಕೃತಕ ಮಳೆ ಕುರಿತು ಸಭೆ ಕರೆಯುವಂತೆ ಪ್ರಧಾನಿ ಮೋದಿ ತಮ್ಮ ಪರಿಸರ ಸಚಿವರನ್ನು ಕೇಳಬೇಕು. ಕೃತಕ ಮಳೆಗೆ ಪರಿಹಾರ ಅಥವಾ ಸ್ಪಷ್ಟ ಮಾರ್ಗಸೂಚಿಯನ್ನು ನೀಡಬೇಕು. ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ, ಅವರ ಸಚಿವರು ರಾಜೀನಾಮೆ ನೀಡಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.
ದೆಹಲಿಯ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಹೇಳಿದ ಸಚಿವ ರೈ, “ನಾವು BS-III ಪೆಟ್ರೋಲ್ ಇಂಧನದ ನಾಲ್ಕು ಚಕ್ರಗಳ ವಾಹನಗಳು ಮತ್ತು BS-IV ಡೀಸೆಲ್ ವಾಹನಗಳನ್ನು ನಿಷೇಧಿಸಿದ್ದೇವೆ. ಹೊರಗಿನಿಂದ ಬರುವ ಎಲ್ಲಾ ಟ್ರಕ್‌ಗಳು ಮತ್ತು ಡೀಸೆಲ್ ಬಸ್ಸುಗಳನ್ನು ನಿಷೇಧಿಸಲಾಗಿದೆ. 10 ಮತ್ತು 1 ನೇ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗಿದೆ. ಮೂರನೆಯದಾಗಿ, ಕಛೇರಿಗಳ ಸಮಯವನ್ನು ಬದಲಾಯಿಸಲಾಗಿದೆ” ಎಂದು ತಿಳಿಸಿದ್ದಾರೆ. ಸರ್ಕಾರವು ವಾಹನಗಳಿಗೆ ಬೆಸ-ಸಮ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ. ವಾಯು ಮಾಲಿನ್ಯ
ಇದನ್ನೂ ಓದಿ: ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ
ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ


