Homeಮುಖಪುಟಅಲಾವುದ್ದೀನ್ ಮತ್ತು ಅದ್ಭುತ ದೀಪದ ’ಜಿನ್’: ಕುನಾಲ್ ಕಮ್ರಾ ಟ್ವೀಟ್‌ ವೈರಲ್!

ಅಲಾವುದ್ದೀನ್ ಮತ್ತು ಅದ್ಭುತ ದೀಪದ ’ಜಿನ್’: ಕುನಾಲ್ ಕಮ್ರಾ ಟ್ವೀಟ್‌ ವೈರಲ್!

ಈಗಾಗಲೇ ಕೇಂದ್ರ ಸರ್ಕಾರದಿಂದ ಟೀಕೆಗೆ ಗುರಿಯಾಗಿರುವ ಅವರು, ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ನ್ಯಾಯಾಲಯವು ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಲು ಅನುಮತಿ ನೀಡಿದೆ.

- Advertisement -
- Advertisement -

ಸಮಕಾಲೀನ ಭಾರತೀಯ ಸನ್ನಿವೇಶಗಳ ಕುರಿತು ವ್ಯಂಗ್ಯವಾಗಿ ಹಾಗೂ ಅಷ್ಟೇ ಪ್ರಭಾವಶಾಲಿಯಾಗಿ ನಿರೂಪಿಸಬಲ್ಲ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರ ಟ್ವೀಟ್ ವೈರಲ್ ಆಗಿದೆ. ಈ ಬಾರಿ ಕುನಾಲ್ ಅವರ ಟ್ವೀಟ್ ಚಿತ್ರದ ರೂಪದಲ್ಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಚಿತ್ರವನ್ನು ”ಮಾಲಿಕ ತನ್ನ ನೌಕರನೊಂದಿಗೆ’’ ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರಿಸಲಾಗಿದೆ.

ಅರೇಬಿಯನ್ ನೈಟ್ ಕತೆಯಲ್ಲಿ ಬರುವ ’ಅಲಾವುದ್ದೀನ್ ಮತ್ತು ಅದ್ಬುತ ದೀಪ’ದ ಕತೆಯ ಪಾತ್ರಗಳಾದ ಅಲಾವುದ್ದೀನ್ ಪಾತ್ರದಲ್ಲಿ ರಿಲಾಯನ್ಸ್ ಮಾಲಿಕ ಮುಖೇಶ್ ಅಂಬಾನಿ ಮತ್ತು ಅಲ್ಲಾವುದ್ದೀನನ ’’ಗುಮಾಮ ಭೂತ”ದ ಪಾತ್ರದಲ್ಲಿ ಪ್ರಧಾನಿ ಮೋದಿಯನ್ನು ಚಿತ್ರಿಸಲಾಗಿದೆ.

ಇದನ್ನೂ ಓದಿ: ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!

ಕುನಾಲ್ ಅವರು ಕೇಂದ್ರ ಸರ್ಕಾರದ ಕಾರ್ಪೊರೇಟ್ ನಿಷ್ಠೆಯನ್ನು ಪ್ರಶ್ನಿಸಿ ಈ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಚರ್ಚೆಯಲ್ಲಿರುವ ಕೃಷಿ ಮಸೂದೆಗಳು ಸೇರಿದಂತೆ ಪ್ರಸ್ತುತ ದೇಶದ ಎಲ್ಲಾ ಆರ್ಥಿಕ ನೀತಿಗಳು ದೇಶವನ್ನು ಏಕಸ್ವಾಮ್ಯದ ಕಡೆ ಚಲಿಸುವಂತೆ ಮಾಡುತ್ತಿದೆ ಎಂದು ಹಲವಾರು ಜನರು ಈಗಾಗಲೆ ಆರೋಪಿಸಿದ್ದಾರೆ.

ಕುನಾಲ್ ಕಮ್ರಾ ಪ್ರಸಿದ್ದ ಹಾಸ್ಯನಟರಾಗಿದ್ದು, ಅವರು ಈಗಾಗಲೇ ಕೇಂದ್ರ ಸರ್ಕಾರದಿಂದ ಟೀಕೆಗೆ ಗುರಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅವರ ಮೇಲೆ ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದೆ. ಆದರೆ ಕುನಾಲ್ ತನ್ನ ಹೇಳಿಕೆಗಳಿಗೆ ಯಾವುದೆ ಕ್ಷಮೆ ಹಾಗೂ ದಂಡ ಕಟ್ಟುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ದಂಡ ಕಟ್ಟುವುದಿಲ್ಲ: ಕಾಮಿಡಿಯನ್ ಕುನಾಲ್ ಕಮ್ರ

ಅಲ್ಲಾದೀನ್ ಮತ್ತು ಅದ್ಬುತ ದೀಪ ಸಿನಿಮಾದ ಟ್ರೈಲರ್‌ ಇಲ್ಲಿದೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...