Homeಮುಖಪುಟನಟ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಖಡಕ್ ಎಚ್ಚರಿಕೆ ನೀಡಿದ ಸ್ಯಾಂಡಲ್‌ವುಡ್

ನಟ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಖಡಕ್ ಎಚ್ಚರಿಕೆ ನೀಡಿದ ಸ್ಯಾಂಡಲ್‌ವುಡ್

ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”- ಪುನೀತ್ ರಾಜ್‌ಕುಮಾರ್‌

- Advertisement -
- Advertisement -

ಕನ್ನಡ ಚಿತ್ರರಂಗದ ಹಿರಿಯ ನಟ, ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ಚಿತ್ರರಂಗದ ಖಳನಟ ವಿಜಯ ರಂಗರಾಜು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ರಂಗರಾಜು ಹೇಳಿಕೆಗೆ ಇಡೀ ಕನ್ನಡ ಚಿತ್ರರಂಗ, ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ತೆಲುಗು ಖಳನಟ ವಿಜಯ ರಂಗರಾಜು, ನಟ ವಿಷ್ಣುವರ್ಧನ್ ಅವರಿಗೆ ಹೆಣ್ಣಿನ ವೀಕ್‌ನೆಸ್ ಇತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸ್ಯಾಂಡಲ್‌ವುಡ್ ನಾಯಕ ನಟರಾದ ಜಗ್ಗೇಶ್, ಸುದೀಪ್, ಪುನೀತ್ ರಾಜಕುಮಾರ್‌, ಚೇತನ್, ಗಣೇಶ್,   ಅನಿರುದ್ಧ್, ನಿರ್ದೇಶಕರಾದ ರಿಷಬ್ ಶೆಟ್ಟಿ, ಪವನ್ ಒಡೆಯರ್‌ ಸೇರಿದಂತೆ ಅನೇಕ ಮಂದಿ ತೆಲುಗು ಖಳನಟ ರಂಗರಾಜು ವಿರುದ್ಧ ಕಿಡಿಕಾರಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ಕಲೆಗೆ, ಕಲಾವಿದರಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ದಿವಂಗತ ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳು ಚಲನಚಿತ್ರ ವಾಣಿಜ್ಯಮಂಡಳಿಗೆ ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಂಡಿರುವ ನಟರು, ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ಎಫೆಕ್ಟ್: ಆಹಾರಕ್ಕಾಗಿ ಸಾಲ ಮಾಡಿದ 11 ರಾಜ್ಯಗಳ 45% ಜನ!

ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟರ್‌ ಖಾತೆಯಲ್ಲಿ ರಂಗರೆಡ್ಡಿ ಅವರಿಗೆ ಕ್ಷಮೆಯಿಲ್ಲ, ನತದೃಷ್ಟ ಶಿಕಾಮಣಿ, ಇವರ ಮಾತಿನಿಂದ ದುಃಖವಾಯಿತು ಎಂದಿದ್ದಾರೆ.

“ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯು ಸಲ್ಲದವ. ಅದರಲ್ಲು ಇವ ಕಲಾವಿದನಂತೆ ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೆ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ದಟತನ ಮಾತಿಗೆ ಕ್ಷಮೆಯಿಲ್ಲಾ. ಸತ್ತವರು ದೇವರ ಸಮ. ದುಃಖವಾಯಿತು” ಎಂದಿದ್ದಾರೆ.

ಇನ್ನು ನಟ ಪುನೀತ್ ರಾಜ್‌ಕುಮಾರ್‌ ಟ್ವೀಟ್ ಮಾಡಿ, “ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಮೊದಲು ಮಾನವನಾಗು” ಎಂದು ಕಿವಿ ಹಿಂಡಿದ್ದಾರೆ.

“ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ನಟರಾದರು ಗೌರವ ಮೊದಲು” ಎಂದಿದ್ದಾರೆ.

ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್‌ಕುಮಾರ್ ಬೆಂಬಲ

ಡಾ. ವಿಷ್ಣುವರ್ಧನ್​ ಅವರ ಅಪ್ಪಟ ಅಭಿಮಾನಿಯಾದ, ನಟ ಸುದೀಪ್​ ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಒಬ್ಬ ವ್ಯಕ್ತಿ ಬದುಕಿರುವಾಗ ಮಾತಾಡಿದರೆ ಗಂಡಸ್ತನ ಇರುತ್ತದೆ ಎನ್ನುವ ನಂಬಿಕೆ ನನ್ನದು ನೀವು ಅವರಿಗೆ ವಾರ್ನ್ ಮಾಡಿದೆ ಎಂದಿದ್ದೀರಿ. ಆ ಮಟ್ಟಕ್ಕೆ ಹೋಗಬೇಡಿ ಎಂದಿದ್ದಾರೆ. ’ಕೆಲವು ಜನರ ಈ ಥರದ ಮಾತುಗಳಿಂದ ಇಂಡಸ್ಟ್ರಿಗಳ ಮಧ್ಯೆ ಮತ್ತೆ ಬಿರುಕಾಗುತ್ತದೆ. ನಿಮ್ಮ ಮಾತುಗಳನ್ನು ತೆಲುಗು ಇಂಡಸ್ಟ್ರಿಯವರು ಕೂಡ ಒಪ್ಪಲ್ಲ. ನೀವು ಆಡಿರುವ ಮಾತುಗಳನ್ನು ವಾಪಸ್ಸು ಪಡೆಯಿರಿ” ಎಂದು ವಾರ್ನಿಂಗ್ ನೀಡಿದ್ದಾರೆ.

ನಟ, ಸಾಮಾಜಿಕ ಹೋರಾಟಗಾರ ಚೇತನ್ ಕೂಡ, “ವಿಷ್ಣುವರ್ಧನ್ ವಿರುದ್ಧ ವಿಜಯ್ ರಂಗರಾಜ್ ಮಾತನಾಡಿದ ಹೇಳಿಕೆಯನ್ನು ನಾನು ನೋಡಿದೆ. ರಂಗರಾಜ್ ಅವರ ಮಾತುಗಳು ಅಸಹ್ಯ ಮತ್ತು ಸೂಕ್ತವಲ್ಲ. ಹೌದು, ಜನರು ಒಟ್ಟಿಗೆ ಕೆಲಸ ಮಾಡುವಾಗ ಪರಸ್ಪರ ಘರ್ಷಣೆಗಳು ಸಂಭವಿಸಬಹುದು. ಮತ್ತು ವೈಯಕ್ತಿಕ ಸ್ಮರಣೆಗೆ ಅನುಗುಣವಾಗಿ ಸತ್ಯವು ಭಿನ್ನವಾಗಿರುತ್ತದೆ. ಆದರೆ ನಾಲಿಗೆಯ ಸಭ್ಯತೆ ಅತ್ಯಗತ್ಯ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!

ವಿಷ್ಣುವರ್ಧನ್ ‘ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ. ವಿಷ್ಣು ದಾದಾರಂತಹ ಮೇರು ನಟರ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿರುವುದನ್ನ ನಾನು ಖಂಡಿಸುತ್ತೇನೆ. ಯಾವುದೇ ಚಿತ್ರರಂಗಕ್ಕೆ ಸಂಬಂಧ ಪಟ್ಟವನಾಗಿದ್ದರೂ, ದುರಹಂಕಾರವನ್ನು ಪಕ್ಕಕ್ಕೆ ಇಟ್ಟು, ತಕ್ಷಣವೇ ಪತ್ರಿಕಾಗೋಷ್ಠಿಯನ್ನ ನಡೆಸಿ ವಿಷ್ಣು ದಾದಾರ ಅಸಂಖ್ಯ ಅಭಿಮಾನಿಗಳಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕೆಂದು, ನಾನೂ ಒಬ್ಬ ಅಭಿಮಾನಿಯಾಗಿ ಆಗ್ರಹಿಸುತ್ತೇನೆ’ ಎಂದು ಗೋಲ್ಡನ್​ ಸ್ಟಾರ್​ ಗಣೇಶ್​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: BJP ಮತೀಯ ಭಾವನೆ ಕೆರಳಿಸುತ್ತದೆಯೆ ವಿನಃ ಗೋವಿನ ಬಗ್ಗೆ ಭಕ್ತಿ, ಕಾಳಜಿ ಇಲ್ಲ: ಸಿದ್ದರಾಮಯ್ಯ

“ತಮ್ಮ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ವಿಷ್ಣು ಸರ್ ನಡತೆ ಬಗ್ಗೆ ನಟನೊಬ್ಬ ತುಚ್ಛವಾಗಿ ಮಾತಾನಾಡಿದ್ದು ಖಂಡನೀಯ. ಆತ ಕೂಡಲೇ ತಪ್ಪೊಪ್ಪಿಕೊಂಡು ಕಲೆ, ಕಲಾವಿದರನ್ನು ಗೌರವಿಸುವುದು ಕಲಿಯಬೇಕು” ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಗ್ರಹಿಸಿದ್ದಾರೆ.

ಇನ್ನು ನಿರ್ದೇಶಕ ಪವನ್ ಒಡೆಯರ್‌ ಕೂಡ ಪುನೀತ್ ರಾಜ್‌ಕುಮಾರ್‌ ಮಾದರಿಯಲ್ಲಿ ಮೊದಲು ಮಾನವನಾಗು ಎಂದಿದ್ದಾರೆ.  “ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗವಲ್ಲದೇ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಖಳನಟನ ವಿರುದ್ಧ ದೂರು ದಾಖಲಿಸಿದ್ದು, ಅಲ್ಲದೇ ತಮ್ಮ ಖಾತೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಪೋಸ್ಟ್‌ಗಳಲ್ಲಿ #RespectArtAndArtist ಎನ್ನುವ ಹ್ಯಾಶ್‌ಟ್ಯಾಗ್ ಬಳಕೆ ಮಾಡಿದ್ದು, ಕಲಾವಿದರು ಮತ್ತು ಕಲೆಗೆ ಬೆಲೆ ನೀಡಿ ಎಂದಿದ್ದಾರೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಹೆಬ್ಬಾಗಿಲು ಪೂರ್ತಿ ತೆರೆದಿಲ್ಲ, ಕಳ್ಳಕಿಂಡಿಗಳು ಇನ್ನೂ ಮುಚ್ಚಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...