Homeಕರೋನಾ ತಲ್ಲಣಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!

ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!

ನಿಸ್ವಾರ್ಥವಾಗಿ ಸಹಾಯ ಮಾಡಿದ್ದಕ್ಕಾಗಿ ನಟ ಸೋನು ಸೂದ್‌ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ ದೊರೆತಿದೆ.

- Advertisement -
- Advertisement -

ಬಹುಭಾಷಾ ನಟ ಸೋನು ಸೂದ್ ಮುಂಬೈಯಲ್ಲಿ ತಮ್ಮ 8 ಆಸ್ತಿಗಳನ್ನು ಅಡವಿಟ್ಟಿದ್ದು, ಅಗತ್ಯವಿರುವವರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಮನಿ ಕಂಟ್ರೋಲ್ ರಿಪೋರ್ಟ್ ವರದಿ ಮಾಡಿದೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದವರಿಗೆ ನಟ ಸಾಕಷ್ಟು ನೆರವು ನೀಡಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಜನರಿಗೆ ನೆರವಾದ ಸೋನು ಅವರ ಮಾನವೀಯ ಕಾರ್ಯವನ್ನು ದೇಶಾದ್ಯಂತದ ಕೋಟ್ಯಾಂತರ ಜನರು ಶ್ಲಾಘಿಸಿದ್ದಾರೆ. ಜೊತೆಗೆ ಈ ನಟ ತಾವು ಮಾಡುವ ಸಹಾಯವು ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.

ಸೋನು ಸೂದ್ ಮುಂಬೈನ ಜೂಹು ಪ್ರದೇಶದಲ್ಲಿರುವ ತಮ್ಮ 8 ಸ್ವತ್ತುಗಳನ್ನು ಅಡವಿಟ್ಟು 10 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂಬ ಬಗ್ಗೆ ಮನಿ ಕಂಟ್ರೋಲ್ ವೆಬ್​​​​ಸೈಟ್​​ನಲ್ಲಿ ದಾಖಲೆಗಳು ಬಹಿರಂಗವಾಗಿದೆ. 2 ಅಂಗಡಿಗಳು ಮತ್ತು 6 ಫ್ಲಾಟ್​ಗಳನ್ನು ಅಡವಿಟ್ಟಿದ್ದಾರೆ. ನವೆಂಬರ್ 24ರಂದು ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿದ್ದ ಸ್ವತ್ತುಗಳನ್ನು ಅಡವಿಟ್ಟಿದ್ದಾರೆ. ಸೆಪ್ಟೆಂಬರ್ 15 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು ಮತ್ತು ನವೆಂಬರ್ 24 ರಂದು ಅಡವಿಟ್ಟು ನೋಂದಣಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ

“ಈ ಪ್ರೀಮಿಯಂ ಆಸ್ತಿಗಳು ನಟ ಮತ್ತು ಅವರ ಪತ್ನಿಯ ಒಡೆತನದಲ್ಲಿ ಮುಂದುವರಿಯುತ್ತದೆ. ಅವರು 10 ಕೋಟಿ ರೂ.ಗಳ ಸಾಲದ ಬಡ್ಡಿ ಮತ್ತು ಅಸಲು ಪಾವತಿಸಬೇಕಾಗುತ್ತದೆ” ಎಂದು ರೆಸಿಡೆನ್ಶಿಯಲ್ ಸರ್ವೀಸಸ್, ಜೆಎಲ್ಎಲ್ ಇಂಡಿಯಾದ ಹಿರಿಯ ನಿರ್ದೇಶಕ ರಿತೇಶ್ ಮೆಹ್ತಾ ಅವರು ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ವೆಬ್ ಉಲ್ಲೇಖಿಸಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ನಟ ಸೋನು ಸೂದ್ ಅವರಿಂದ ಯಾವುದೇ ದೃಢಿಕರಣ ಸಿಕ್ಕಿಲ್ಲ.

ಲಾಕ್‌ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾಗಿದ್ದ ವಲಸೆ ಕಾರ್ಮಿಕರಿಗೆ ಸರ್ಕಾರ ಸಹಾಯಕ್ಕೆ ಬರದಿದ್ದರೂ, ಸೋನುಸೂದ್ ಆಹಾರ ವಿತರಿಸಿದ್ದರು. ಬಸ್‌ಗಳು, ರೈಲುಗಳು ಮತ್ತು ಚಾರ್ಟರ್ಡ್ ವಿಮಾನಗಳ ಮೂಲಕ ಕಾರ್ಮಿಕರನ್ನು ತಮ್ಮ ತಮ್ಮ ಗ್ರಾಮಗಳಿಗೆ ತಲುಪಿಸಿದ್ದರು. ಇಷ್ಟೇ ಅಲ್ಲದೆ ಉತ್ತಮ ಜೀವನೋಪಾಯಕ್ಕಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ನಿಸ್ವಾರ್ಥವಾಗಿ ಸಹಾಯ ಮಾಡಿದ್ದಕ್ಕಾಗಿ ನಟ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರತಿದಿನ ಸೋನು ಸೂದ್ ಅವರಿಗೆ ಸಹಾಯ ಕೇಳುವ ನೂರಾರು ಪತ್ರಗಳು ಬರುತ್ತಿದ್ದು, ಈ ಪತ್ರಗಳ ಚಿತ್ರವನ್ನು ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Sonu Sood (@sonu_sood)

“ನಾನು ಪ್ರತಿದಿನ ಸ್ವೀಕರಿಸುವ ಮೇಲ್‌ಗಳಿಗೆ ಸಹಾಯ ಮಾಡಿ. ಎಲ್ಲರನ್ನೂ ತಲುಪಲು ನಾನು ಬಯಸುತ್ತೇನೆ, ಆದರೆ, ಅದು ಅಸಾಧ್ಯವೆಂದು ತೋರುತ್ತದೆ. ಈ ಪತ್ರಗಳ ಸಂಖ್ಯೆ ಕಡಿಮೆಯಾಗುವ ದಿನಕ್ಕಾಗಿ ಕಾಯುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: ಸೋನು ಸೂದ್ ನಮ್ಮ ಪಾಲಿಗೆ ದೇವರಿದ್ದಂತೆ: ಟ್ರಾಕ್ಟರ್ ಉಡುಗೊರೆ ಪಡೆದ ರೈತನ ಕೃತಜ್ಞತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...