Homeಮುಖಪುಟಮಹಾರಾಷ್ಟ್ರ: ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

ಮಹಾರಾಷ್ಟ್ರ: ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

’ಇದು ಕೇವಲ ಮನವಿಯಾಗಿದೆ. ಟ್ರಸ್ಟ್ ಭಕ್ತರ ಮೇಲೆ ಯಾವುದೇ ಡ್ರೆಸ್ ಕೋಡ್ ಹೇರಿಲ್ಲ’ ಎಂದು ಟ್ರಸ್ಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

- Advertisement -
- Advertisement -

ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಅಳವಡಿಸಿದ್ದ ವಿವಾದಿತ ಫಲಕ ತೆಗೆದುಹಾಕುವುದಾಗಿ ಶಿರಡಿಗೆ ಹೊರಟ್ಟಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಮತ್ತು ಅವರ ಸಂಘದ ಕೆಲವು ಸದಸ್ಯರನ್ನು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಬಂಧಿಸಲಾಗಿದೆ.

ಸಾಯಿಬಾಬಾ ದೇವಸ್ಥಾನದ ಹೊರಗೆ ಹಾಕಿರುವ ಫಲಕದಲ್ಲಿ ಭಕ್ತರು “ಸುಸಂಸ್ಕೃತ” ರೀತಿಯಲ್ಲಿ ಬಟ್ಟೆ ಧರಿಸುವಂತೆ ಬರೆಯಲಾಗಿದೆ. ಈ ಫಲಕವನ್ನು ವಿರೋಧಿಸಿ, ಫಲಕ ತೆರವುಗೊಳಿಸಲು, ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರು ಶಿರಡಿಗೆ ತೆರಳುತ್ತಿದ್ದರು.

ಸಾಯಿಬಾಬಾ ಮಂದಿರದಲ್ಲಿ ಅಳವಡಿಸಲಾಗಿರುವ ಸಂದೇಶದ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ಇಲ್ಲದಿದ್ದರೇ ಡಿಸೆಂಬರ್‌ 10ರಂದು ‍ಸದಸ್ಯರೊಂದಿಗೆ ತೆರಳಿ ಆ ಫಲಕ ತೆರವು ಮಾಡುವುದಾಗಿ ತೃಪ್ತಿ ದೇಸಾಯಿ ಈ ಮೊದಲು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ರೈತರ ಹೋರಾಟದ ಹಿಂದೆ ಪಾಕ್, ಚೀನಾದ ಕೈವಾಡ: ಬಿಜೆಪಿ ಸಚಿವನ ಹೇಳಿಕೆಗೆ ಭಾರೀ ಆಕ್ರೋಶ

ತೃಪ್ತಿ ದೇಸಾಯಿಯವರ ಬಂಧನವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಆಕೆಯ ಬಂಧನವನ್ನು  ಸಂಭ್ರಮಿಸಿದ್ದಾರೆ.

ಸಾಯಿಬಾಬಾ ದೇವಸ್ಥಾನದಲ್ಲಿರುವ ಟ್ರಸ್ಟ್, ಸ್ಥಳೀಯರು ಮತ್ತು ಇತರ ಭಕ್ತರ ದೂರುಗಳನ್ನು ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಪವಿತ್ರ ಸ್ಥಳಕ್ಕೆ ಬಂದಾಗ “ಸುಸಂಸ್ಕೃತ” ರೀತಿಯಲ್ಲಿ ಅಥವಾ “ಭಾರತೀಯ ಸಂಸ್ಕೃತಿಯ” ಪ್ರಕಾರ ಬಟ್ಟೆ ಧರಿಸುವಂತೆ ಭಕ್ತಾದಿಗಳಲ್ಲಿ ಮನವಿ ಮಾಡಿ ಫಲಕ ಹಾಕಿದೆ.

ಈ ಕುರಿತು ಸ್ಪಷ್ಟಪಡಿಸಿರುವ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್ ಬಾಗಾಟೆ, “ಇದು ಕೇವಲ ಮನವಿಯಾಗಿದೆ. ಟ್ರಸ್ಟ್ ಭಕ್ತರ ಮೇಲೆ ಯಾವುದೇ ಡ್ರೆಸ್ ಕೋಡ್ ಹೇರಿಲ್ಲ” ಎಂದಿದ್ದಾರೆ.

ಮಂಗಳವಾರ ಉಪವಿಭಾಗದ ಮ್ಯಾಜಿಸ್ಟ್ರೇಟ್ ಗೋವಿಂದ್ ಶಿಂಧೆ, ತೃಪ್ತಿ ದೇಸಾಯಿ ಅವರಿಗೆ ನೋಟಿಸ್ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11 ಮಧ್ಯರಾತ್ರಿಯವರೆಗೆ ಅಹ್ಮದ್‌ನಗರ ಜಿಲ್ಲೆಯ ಶಿರಡಿಗೆ ಪ್ರವೇಶಿಸದಂತೆ ಸೂಚಿಸಿದ್ದರು.

ಆದರೆ, ದೇಸಾಯಿ ನೋಟಿಸ್ ಅನ್ನು ಧಿಕ್ಕರಿಸಿ ಅಲ್ಲಿನ ಸಾಯಿಬಾಬಾ ದೇವಸ್ಥಾನದಲ್ಲಿ ಫಲಕಗಳನ್ನು ತೆಗೆದುಹಾಕಲು ತನ್ನ 15ಕ್ಕೂ ಹೆಚ್ಚು ‘ಭೂಮಾತಾ ಬ್ರಿಗೇಡ್ ಸದಸ್ಯರ ಜೊತೆಗೆ ಶಿರಡಿಗೆ ತೆರಳುತ್ತಿದ್ದರು.

ದೇಸಾಯಿ ಸೇರಿದಂತೆ ಸುಮಾರು 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಹ್ಮದ್‌ನಗರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಪಾಟೀಲ್ ತಿಳಿಸಿದ್ದಾರೆ. ಬಾಂಬೆ ಪೊಲೀಸ್ ಕಾಯ್ದೆಯ ಸೆಕ್ಷನ್ 68 ರ ಅಡಿಯಲ್ಲಿ ದೇಸಾಯಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಭೂ ಸುಧಾರಣೆ ತಿದ್ದುಪಡಿ ಅಂಗೀಕಾರ: ಜೆಡಿಎಸ್ ನಡೆಯನ್ನು ಸಮರ್ಥಿಸಿದ ಕುಮಾರಸ್ವಾಮಿ- ಸರಣಿ ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...