Homeಕರ್ನಾಟಕಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

ಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

- Advertisement -
- Advertisement -

ಜಿ. ಮಾದೇಗೌಡರು ಗಾಂಧಿವಾದಿ. ಕೆಲವರಿಗೆ ’ಇವನ್ಯಾವ ಸೀಮೆ ಗಾಂಧಿವಾದಿ’ ಅನ್ನಿಸುತ್ತಿದ್ದುದೂ ಉಂಟು. ಯಾಕೆಂದರೆ ಅವರ ಅಸಹನೆಯ ಸಿಟ್ಟಿನ ಮುಖ, ತೀಕ್ಷ್ಣವಾದ ಕಣ್ಣುಗಳು ಮತ್ತು ಈ ರೂಪಕ್ಕೆ ಮೆರಗು ಕೊಟ್ಟಂತಹ ಅವರ ನಿಷ್ಠುರವಾದ ಮಾತುಗಳು ಹಾಗೂ ಆ ಮಾತಿನಲ್ಲಿ ಅಡಗಿದ್ದ ಸತ್ಯ ಸಂಗತಿಗಳು. ಹೀಗೆ, ಗಾಂಧಿವಾದಿಗಳು ಹೀಗೂ ಇರಬಲ್ಲರು ಎಂದು ತೋರಿಸಿಕೊಟ್ಟವರು ಮಾದೇಗೌಡರು. ಮಂಡ್ಯದ ಮಣ್ಣು ರೂಪಿಸಿದ ಅಪರೂಪದ ರಾಜಕಾರಣಿಗಳ ಪೈಕಿ ಮಾದೇಗೌಡರ ವರಸೆಯೇ ಬೇರೆ. ಇತರರನ್ನು ಮೆಚ್ಚಿಸುವುದಕ್ಕಾಗಿ ಎಂದೂ ಮಾತನಾಡಿದವರಲ್ಲ. ಹಾಸ್ಯ ಅವರಿಗೆ ಹಿಡಿಸುತ್ತಿರಲಿಲ್ಲ. ಆದರೆ ಅವರ ಕೆಲವು ಮಾತುಗಳು ಹಾಸ್ಯವಾಗಿ ಪರಿವರ್ತನೆಯಾಗುತ್ತಿದ್ದವು. ಉದಾಹರಣೆಗೆ ಅವರೇ ಹೇಳಿದಂತೆ, ’ಈ ಎಸ್.ಎಂ. ಕೃಷ್ಣ ಮತ್ತೆ ಅಂಬರೀಶ್ ರಾಜಕಾರಣದಲ್ಲಿ ಯಾವ ಗೇಮೆಯನ್ನು ಮಾಡದವರು. ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಇಂತಹ ದೈಹಿಕ ಶ್ರಮದಿಂದ ದೂರವುಳಿದವರು. ಆದರೂ ಅವುರು ರಾಜಕಾರಣದಲ್ಲಿ ಏನೇನೊ ಆದ್ರು. ಒಬ್ಬ ಮೋಜುಗಾರ ಇನ್ನೊಬ್ಬ ಸೊಗಸುಗಾರ. ಈ ಹಾಳುಡುಗ್ರು ಅವುರು ಬಂದಾಗ ನ್ವಣ ಮುತ್ತಿದಂಗೆ ಮುತ್ತಿಗತವೆ. ಇದಕೇನೇಳನ’ ಎಂದಿದ್ದರು.

ಕಾವೇರಿ ವಿಷಯ ಅವರ ಜೀವನಾಡಿಯಾಗಿತ್ತು. ಕಾವೇರಿ ಸಮಸ್ಯೆ ಭುಗಿಲೇಳುವುದಕ್ಕೂ ಮೊದಲೆ ಹಾಜರಾಗಿ ಚಳವಳಿಯನ್ನ ನಿಯಂತ್ರಿಸುತ್ತಿದ್ದರು. ಅದೂ ಗಾಂಧಿ ಮಾರ್ಗದಲ್ಲಿ. ಒಮ್ಮೆ ಈ ಚಳವಳಿಯೊಳಕ್ಕೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜಿನಾಮೆಯಿತ್ತು ಬಂದು ಸೇರಿಕೊಂಡರು. ಇದು ಮಾದೇಗೌಡರಿಗೆ
ಸಿಟ್ಟು ತರಿಸಿ ಗದರಿಸಿ ಕಳಿಸಿದ್ದರು. ಇಷ್ಟಾದರೂ ಅಂಬಿ ಮತ್ತು ಮಾದೇಗೌಡರ ನಡುವೆ ಒಳ್ಳೆ ಸಂಬಂಧವಿತ್ತು. ಒಮ್ಮೆ ಗೌಡರು ಅಂಬರೀಶ್‌ರನ್ನು ಕುರಿತು “ಲೇ ಅಂಬರೀಶ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು” ಅಂದರು. ಅದಕ್ಕೆ ಅಂಬಿ “ಲೇ ಮುದುಕ ಮ್ಯಟ್ರೆ ಹಿಸಿಗಿ ಸಾಯಿಸಿಬುಡ್ತಿನಿ ಸುಮ್ಮನಿರು” ಎಂದರು. ಎಲ್ಲರ ಸ್ಥಾನಮಾನ ಸೊಕ್ಕನ್ನು ಮುರಿದು ತನ್ನ ವ್ಯಕ್ತಿತ್ವಕ್ಕೆ ಒಗ್ಗಿಸಿಕೊಳ್ಳುವ ಅಂಬರೀಶ್ ತನ್ನ ಇಂತಹ ಗುಣಕ್ಕೆ ಒಗ್ಗಿಕೊಳ್ಳದವರ ಬಳಿ ಸುಳಿಯುತ್ತಿರಲಿಲ್ಲ. ಉದಾಹರಣೆ ದೇವೇಗೌಡರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇಂತಹವರ ಬಳಿ ಐದು ನಿಮಿಷವೂ ಇರುತ್ತಿರಲಿಲ್ಲ. ಆದರೆ ಇಂತವರ ಸಾಲಿನ ಮಾದೇಗೌಡರನ್ನ ಪಳಗಿಸಿದ್ದರು. ಕಾವೇರಿ ವಿಷಯದಲ್ಲಿ ಇಬ್ಬರ ಅಭಿಪ್ರಾಯಗಳು ಅವರ ಮನೋಗತಕ್ಕೆ ತಕ್ಕಂತಿದ್ದವು. ಕೆರೆಕಟ್ಟೆಯ ವಿಷಯದಲ್ಲಿ ವಾಟರ್ ಪಾಲಿಸಿ ಎಂಬುದೊಂದಿದೆ. ಅಚ್ಚುಕಟ್ಟಿನ ಕಟ್ಟಕಡೆ ರೈತನಿಗೂ ನೀರು ತಲುಪಬೇಕು.

ಆದರೆ ಮಾದೇಗೌಡರು “ಡ್ಯಾಂ ನಮ್ಮದು, ಅದರ ಗೇಟಿನ ಕೀ ನನ್ನ ಬಳಿ ಇರಬೇಕು. ಬೇಕಾದ್ರೆ ನೀರು ಕೊಟ್ಟೆ ಇಲ್ದಿದ್ರೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದರು. ಅದೇ ಅಂಬರೀಶ್ “ನನ್ನ ಬಕೀಟಲ್ಲಿ ನೀರಿದ್ರೆ ಯರಡು ಲೋಟ ಕೊಡ್ತಿನಪ್ಪ ನೀರೆ ಇಲ್ದಿದ್ರೆ ಎಲ್ಲಿಕೊಡ್ಲಿ” ಎನ್ನುತ್ತಿದ್ದರು.

ಮಾದೇಗೌಡರ ಚಳವಳಿ ಕಾವೇರಿಗೆ ಮಾತ್ರ ಸೀಮಿತವಾಗಿತ್ತು. ಒಂದು ಬಾರಿ ಕಾವೇರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗಕ್ಕೆ ಬಂದರು. ಈಗಾಗಲೇ ಪ್ರತಿಭಟಿಸುತ್ತಿದ್ದ ರೈತರು “ಅಯ್ಯವ್ ಏಳಯ್ಯ ಮ್ಯಾಕೆ ನಡಿಯಯ್ಯ ಈಗ ಬಂದುಬಿಟ್ಟ. ಅಲ್ಲೋಗಿ ಸಿ.ಎಂ ಅತ್ರ ಏನೇನೊ ಕ್ಯಲಸ ಮಾಡಿಸಿಕೊಳದು ಇಲ್ಲಿ ಬಂದು ಚಳವಳಿ ಮಾಡದು” ಎಂದು ಮೂದಲಿಸಿಬಿಟ್ಟರು. ಚಳವಳಿಗೆ ನನ್ನಂಥವರ ಅಗತ್ಯವಿಲ್ಲವೇನೊ ಅಂತ ಒಂದುಕ್ಷಣ ಮಾದೇಗೌಡರಿಗೆ ಅನ್ನಿಸಿಬಿಟ್ಟಿತು. ಆದರೆ, ಗಾಂಧಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಅವರು ತಮ್ಮ ಹೋರಾಟಗಳನ್ನು ಕೈಬಿಟ್ಟವರಲ್ಲ. ಅವರ ಬದುಕಿನ ಬಹುದೊಡ್ಡ ಸಾಧನೆಯಾದ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡ ಮೇಲೆ ಅದರ ಮುಂದೆ ಕುಳಿತು, ಹಾಳಾಗುತ್ತಿರುವ ಯುವಜನತೆ, ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಯೋಚಿಸುತ್ತ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಸಮಕಾಲೀನ ರಾಜಕಾರಣಿಯಾದ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಮಯದಲ್ಲಿ ಮಾತನಾಡಿಸಲು ಹೋಗಿದ್ದೆ. ಗಾಂಧಿ ಭವನದ ವರಾಂಡದಲ್ಲಿ ಕುಳಿತಿದ್ದ ಅವರ ಪಕ್ಕ ಕುಳಿತ ನಾನು “ಸಾರ್ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರತಾಯಿದ್ದಿವಿ, ಅವರು ನಿಮ್ಮ ಸಮಕಾಲೀನರು ಮತ್ತು ಒಡನಾಡಿಯಾಗಿದ್ರು. ಅವುರ ಬಗ್ಗೆ ಹೇಳಿ ಸಾರ್” ಎಂದೆ. ಮಾದೇಗೌಡರು ಒಳಗಣ್ಣಾಗಿ “ಕೃಷ್ಣಪ್ಪ ನಾನು ತಾಲೂಕ್ ಬೋರ್ಡ್ ಚುನಾವಣೆ ಮುಖಾಂತರ ರಾಜಕೀಯಕ್ಕೆ ಬಂದೊ.. ಅವುರು ಇಲ್ಲೇ ಲಾಯರಾಗಿದ್ರು. ನಾಟಕದಲ್ಲಿ ಪಾರ್ಟು ಮಾಡತಿದ್ರು. ಪದ ಹೇಳತಿದ್ರು. ಮಾತ್ರ ವಳ್ಳೆ ಮನ್ಸ” ಎಂದವರು ತಿರುಗಿ ಮಾತನಾಡಲಿಲ್ಲ. ಈ ರೀತಿ ಕೇಳಲು ಬಂದವನು ಯಾವೂರ ದಾಸಯ್ಯ ಎಂದೂ ನೋಡಲಿಲ್ಲ. ’ಗಾಂಧಿ ಭವನ ಚನ್ನಾಗ್ಯದೆ ಸಾರ್’ ಎಂದೆ. “ಇನ್ನ ಚನ್ನಾಗಿರದು. ಇರೊ ಜಾಗದಲ್ಯಲ್ಲ. ಕಟ್ಟಿದ್ರೆ ಹೊರಗಡೆ ಜಾಗದಲ್ಲಿ ಗಾಡಿಗಳು ನಿಂತಗಳವು. ಆ ಡಿ.ಕೆ ಶಿವಕುಮಾರ ವಸಿ ಜಾಗ ವಡಕಂಡು ಅದೇನೊ ಕಟ್ಟಿಗಂಡ. ಬರಿ ಇಂತ ಕ್ಯಲಸಗಳಯ ಅವುರವು” ಎಂದು ಸಿಟ್ಟಾದರು. ಎದ್ದು ಬಂದೆ ಆ ನಂತರ ಹೆಚ್.ಟಿ ಕೃಷ್ಣಪ್ಪನವರ ಬಳಿ ಬಂದು “ಸಾರ್ ಮಾದೇಗೌಡ್ರು ಅದ್ಭುತ ಸಾರ್. ನಿಮ್ಮ ಇಡೀ ಜೀವನನ ಐದು ಪದದಲ್ಲಿ ಹೇಳಿ ಮುಗಿಸಿದ್ರು” ಅಂದೆ. ನಗಾಡಿದ ಅವರು “ಆಯ್ತು ಅಷ್ಟನೆ ಹಾಕಿ” ಎಂದರು. ಹಾಗೇ ಮಾಡಿದೆ. ಮಾದೇಗೌಡರ ಬಳಿ ಅನವಶ್ಯಕ ಪುಲಾರಕ್ಕೆ ಅವಕಾಶವಿರಲಿಲ್ಲ.

ವಯಸ್ಸಾದ ವ್ಯಕ್ತಿಯ ಮಾತಿನಲ್ಲಿ ಮೊದಲಿನ ನಿಷ್ಠುರತೆ ಸಿಟ್ಟು ಸೆಡವುಗಳಿರುವುದಿಲ್ಲ ಎನ್ನುತ್ತಾರೆ. ಆದರೆ ಮಾದೇಗೌಡರ ವಿಷಯದಲ್ಲಿ ಇವು ಸುಳ್ಳಾಗಿದ್ದವು. ಬದುಕಿನ ಕಟ್ಟಕಡೆಯವರೆಗೂ ಅವರು ಕಡುಪಾಗೇ ಇದ್ದರು. ಜಿಲ್ಲಾಧಿಕಾರಿಯಿಂದ ಹಿಡಿದು ಯಾರಿಗೂ ಕೇರ್ ಮಾಡದ ಮಾದೇಗೌಡರು, ಮೈಗಳ್ಳ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದರು. ಕಲೆ, ಸಾಹಿತ್ಯ ಸಂಗೀತದ ಅಭಿರುಚಿಯಿಂದ ಕೆ.ವಿ ಶಂಕರೇಗೌಡರು ಜಿಲ್ಲೆಗೆ ಕೀರ್ತಿ ತಂದರೆ ಮಾದೇಗೌಡರು ತಮ್ಮ ವಿಶಿಷ್ಟ ರೀತಿಯ ರಾಜಕಾರಣದ ವರಸೆಯಿಂದ ಮಂಡ್ಯ ಜಿಲ್ಲೆಗೆ ಹೆಸರು ತಂದಿದ್ದರು. ತುಂಬ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಮಗನಿಗೆ ವಹಿಸಿದ್ದರು. ಮಗ ಚಿರಂಜೀವಿ ಸಿಂಗ್ ತರದ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಮಗ ರಾಜಕಾರಣಕ್ಕೆ ಬಂದಾಗ ಅವರು ಸಿಡಿಮಿಡಿಗೊಂಡು “ವಳ್ಳೆ ಅಧಿಕಾರಿಯಾಗು ಅಂದ್ರೆ ಈ ಬಡೆತದ್ದು ರಾಜಕೀಯಕ್ಕೆ ಬತ್ತಲ್ಲ ಹೇಳು” ಎಂದಿದ್ದರು.

ಒಮ್ಮೆ ಲಂಕೇಶ್ ಎದುರು ಕುಳಿತಿದ್ದ ಹೆಚ್.ಎಲ್. ಕೇಶವಮೂರ್ತಿಯವರು ಮಾದೇಗೌಡರ ಆರೋಗ್ಯದ ಬಗ್ಗೆ ಮಾತನಾಡುತ್ತ “ತುಂಬಾ ಕುಡಿತರೆ ಸಾರ್ ಎದುರಿಗಿದ್ದ ಬಾಟ್ಳಿ ಖಾಲಿ ಮಾಡಿದ ಮ್ಯಾಲೆ ಮೇಕ್ಕೇಳದು” ಎಂದರು. ತುಂಬಾ ಒಳ್ಳೆದು, ಮಾದೇಗೌಡ್ರು ಈ ವಯಸ್ಸಲ್ಲಿ ಅಷ್ಟು ಕುಡಿತರೆ ಅಂದ್ರೆ ಹೆಮ್ಮೆ ಪಡಬೇಕು ನಾವು ಎಂದು ನಕ್ಕರು. ಆದರೆ, ಮಾದೇಗೌಡರು ತುಂಬು ಜೀವನ ನಡೆಸಿ ಶಿಕ್ಷಣ ಸಂಸ್ಥೆ, ಗಾಂಧಿ ಭವನ ಮತ್ತು ಚಳವಳಿಯನ್ನು ಬಿಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಂಡ್ಯದಲ್ಲಿ ಅವರ ಜಾಗ ತುಂಬುವವರು ಯಾರೂ ಇಲ್ಲ. ಒಂದು ಇತಿಹಾಸ ಕೊನೆಗೊಂಡಿದೆ.

  • ಬಿ ಚಂದ್ರೇಗೌಡ

ಇದನ್ನೂ ಓದಿ: ಕೊಪ್ಪಳ: ಹಿರಿಯ ಸಾಹಿತಿ, ಜನಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...