Homeಕರೋನಾ ತಲ್ಲಣನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ

ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ

ನಟ ಸೋನು ಸೂದ್ ಅವರ ಮಾನವೀಯ ಪ್ರಯತ್ನಗಳಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆ  ಲಾಕ್‌ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ನೆರವಾಗಿ ನಿಜ ಜೀವನದ ನಾಯಕ ಎನಿಸಿಕೊಂಡಿದ್ದ ನಟ ಸೋನು ಸೂದ್ ಅವರ ಮಾನವೀಯ ಪ್ರಯತ್ನಗಳಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಲಾಕ್‌ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾಗಿದ್ದ ವಲಸೆ ಕಾರ್ಮಿಕರಿಗೆ ಸರ್ಕಾರ ಸಹಾಯಕ್ಕೆ ಬರದಿದ್ದರೂ, ನಟ ಸೋನುಸೂದ್ ಆಹಾರ ವಿತರಿಸಿದ್ದರು. ಬಸ್‌ಗಳು, ರೈಲುಗಳು ಮತ್ತು ಚಾರ್ಟರ್ಡ್ ವಿಮಾನಗಳ ಮೂಲಕ ಕಾರ್ಮಿಕರನ್ನು ತಮ್ಮ ತಮ್ಮ ಗ್ರಾಮಗಳಿಗೆ ತಲುಪಿಸಿದ್ದರು. ಇಷ್ಟೇ ಅಲ್ಲದೆ ಉತ್ತಮ ಜೀವನೋಪಾಯಕ್ಕಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ನಿಸ್ವಾರ್ಥವಾಗಿ ಸಹಾಯ ಮಾಡಿದ್ದಕ್ಕಾಗಿ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಲಾಕ್​ಡೌನ್​ ಆರಂಭದಿಂದ ಇಂದಿನವರೆಗೂ ನಟ ಒಂದಲ್ಲ ಒಂದು ಸಹಾಯ ಮಾಡುತ್ತಲೇ ಬರುತ್ತಿದ್ದಾರೆ.

Won't relax until the last migrant worker reaches home, says Sonu Sood | People News | Zee News

ಇದನ್ನೂ ಓದಿ: ನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

ವಿಶ್ವಸಂಸ್ಥೆಯ ಈ ಗೌರವವನ್ನು ಪಡೆದ ಪ್ರಿಯಾಂಕಾ ಚೋಪ್ರಾ, ಲಿಯೊನಾರ್ಡೊ ಡಿಕಾಪ್ರಿಯೊ, ಏಂಜಲೀನಾ ಜೋಲೀ, ಡೇವಿಡ್ ಬೆಕ್‌ಹ್ಯಾಮ್, ಎಮ್ಮಾ ವ್ಯಾಟ್ಸನ್, ಲಿಯಾಮ್ ನೀಸನ್, ಕೇಟ್ ಬ್ಲಾಂಚೆಟ್, ಆಂಟೋನಿಯೊ ಬಾಂಡೆರಾಸ್ ಮತ್ತು ನಿಕೋಲ್ ಕಿಡ್ಮನ್ ಅವರ ಸಾಲಿಗೆ ಸೋನು ಸೂದ್ ಸೇರ್ಪಡೆಗೊಂಡಿದ್ದಾರೆ.

ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡಲು ಲಾಕ್‌ಡೌನ್ ಸಮಯದಲ್ಲಿ ಟೋಲ್-ಫ್ರೀ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದ್ದರು.

ವಿಶ್ವಸಂಸ್ಥೆಯ ಪ್ರಶಸ್ತಿ ಬಂದಿರುವ ಹಿನ್ನೆಲೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಕೂಡ ಅಭಿನಂದನೆ ಸಲ್ಲಿಸಿ ಪ್ರಶಸ್ತಿಗೆ ನೀವು ಅರ್ಹರು ಎಂದಿದ್ದಾರೆ.

ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌

ಪ್ರಿಯಾಂಕಾ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೋನುಸೂದ್ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಸ್ಪೂರ್ತಿಯಿಂದ ಇದು ಸಾಧ್ಯ. ನೀವು ನಮ್ಮ ನಿಜವಾದ ಹೀರೋ ಎಂದಿದ್ದಾರೆ.

ಸದ್ಯ ನಟ ಹೈದರಾಬಾದ್‌ನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್, ಪ್ರಕಾಶ್ ರಾಜ್ ಮತ್ತು ನಲು ನಟೇಶ್ ಅವರೊಂದಿಗೆ ಅಲ್ಲುಡು ಅದುರ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸೆಟ್‌ನಲ್ಲಿ ಅವರನ್ನು ಸಹ ಕಲಾವಿದರು ಅಭಿನಂದಿಸಿದ್ದಾರೆ.

Image
PC: BRAHMAJI@Twitter

ಸೋನು ಸೂದ್ ಹಲವಾರು ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 1999 ರ ತಮಿಳು ಚಿತ್ರ ’ಕಲಹಗಾರ್‌’ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 2002ರಲ್ಲಿ ಚಲನಚಿತ್ರ ಶಹೀದ್-ಇ-ಅಜಮ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಸೋನು ಸೂದ್ ದಬಾಂಗ್, ಯುವ, ಅಥಾಡು, ಅರುಂಧತಿ, ಜೋಧಾ ಅಕ್ಬರ್, ದೂಕುಡು, ಶೂಟೌಟ್ ಅಟ್ ವಡಾಲಾ, ಹ್ಯಾಪಿ ನ್ಯೂ ಇಯರ್, ಸಿಂಬಾ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: NEET, JEE ಪರೀಕ್ಷೆಗಳನ್ನು ಮುಂದೂಡಿ: ನಟ ಸೋನು ಸೂದ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...