ಹದಿಹರೆಯದ ಬಾಲಕನೊಬ್ಬ ಪಾಕಿಸ್ತಾನಿ ವಿರೋಧಿ ಪೋಸ್ಟರ್ ಅನ್ನು ಹರಿದು ಹಾಕಿದ್ದಾನೆ ಎಂದು ಆರೋಪಿಸಿ ಬಲಪಂಥೀಯ ಬೆಂಬಲಿಗರು ಪಾಕಿಸ್ತಾನಿ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಆತನನ್ನು ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಅಲಿಘರ್ ನಗರದಲ್ಲಿ ಬೆಳಕಿಗೆ ಬಂದಿದೆ.
ಬಾಲಕನ ಸ್ನೇಹಿತ ತಪ್ಪಿಸಿಕೊಂಡರೂ, ಬುರ್ಹಾನ್ ನನ್ನು ಕಾಲರ್ ಹಿಡಿದ ಗುಂಪು, ಆತನನ್ನು ನಿಂದಿಸಿ, ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕ್ಷಮೆ ಯಾಚಿಸುವಾಗಲೇ ಆ ಬಾಲಕಿನಿಗೆ ಪಾಕಿಸ್ತಾನಿ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಒತ್ತಾಯಿಸಲಾಗಿದೆ.
“ನಾವು ಪಾಕಿಸ್ತಾನದ ವಿರುದ್ಧ ಪ್ರತಿಭಟಿಸುತ್ತಿದ್ದೆವು, ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದೆವು, ಅವನು ಅವುಗಳನ್ನು ಹರಿದು ಓಡಿಹೋದನು. ಇವರೆಲ್ಲರೂ ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗಳು” ಎಂದು ಬಲಪಂಥೀಯ ಸದಸ್ಯರೊಬ್ಬರು ಹೇಳಿಕೆಯನ್ನು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
“ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗಳ ಬಗ್ಗೆ ಏನಾದರೂ ಮಾಡಬೇಕೆಂದು ನಾನು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ಆ ವ್ಯಕ್ತಿ ಹೇಳಿದ್ದಾನೆ.
ಈ ಮಧ್ಯೆ, ಹದಿಹರೆಯದವನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾನೆ. ದಾಳಿಕೋರರಿಗೆ ತನ್ನನ್ನು ಬಿಡುಗಡೆ ಮಾಡುವಂತೆ ಬೇಡಿಕೊಂಡ ಅವನು, “ಜಹೇದ್ ಪೋಸ್ಟರ್‌ಗಳನ್ನು ಹರಿದು ಓಡಿಹೋದನು; ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದಾನೆ.
ದಾಳಿಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಕುತೂಹಲಕಾರಿಯಾಗಿ, ಈ ಘಟನೆ ರಸೂಲ್‌ಗಂಜ್ ಪೊಲೀಸ್ ಠಾಣೆಯ ಬಳಿ ನಡೆದಿದೆ. ಪೊಲೀಸರು ಹಾಜರಿದ್ದರೂ, ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಲಿಲ್ಲ ಎನ್ನಲಾಗಿದೆ.
ಉತ್ತರ ಪ್ರದೇಶ| ಮದುವೆ ಸಮಾರಂಭದಲ್ಲಿ ಬಾಲಕಿ ಮೇಲೆ 47 ವರ್ಷದ ವ್ಯಕ್ತಿಯಿಂದ ಅತ್ಯಾಚಾರ


