ಮಧ್ಯಪ್ರದೇಶದ ಕಟ್ನಿಯಲ್ಲಿರುವ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರ ಗುಂಪು ಹದಿಹರೆಯದ ಯುವಕ ಮತ್ತು ಆತನ ಅಜ್ಜಿಯನ್ನು ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
15 ವರ್ಷದ ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಅಧಿಕಾರಿಗಳು ಥಳಿಸಿದ ವಿಡಿಯೋ ವೈರಲ್ ಆದ ಬಳಿಕ, ವಿವಾದದ ನಡುವೆಯೇ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
2023 ರ ಅಕ್ಟೋಬರ್‌ನದ್ದು ಎನ್ನಲಾದ ವಿಡಿಯೊದಲ್ಲಿ ಜಬಲ್‌ಪುರದ ಕಟ್ನಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಅವರು ಮಹಿಳೆ ಕುಸುಮ್ ವಂಸ್ಕರ್ ಮತ್ತು ಆಕೆಯ ಮೊಮ್ಮಗನನ್ನು ಕೋಲಿನಿಂದ ಹೊಡೆದು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದೆಯುವುದನ್ನು ಕಾಣಬಹುದಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಪೊಲೀಸ್ ಅಧಿಕಾರಿಗಳ ಗುಂಪು ಬಾಲಕನನ್ನು ಥಳಿಸುತ್ತಿರುವುದನ್ನು ಮತ್ತು ಒದೆಯುತ್ತಿರುವುದನ್ನು ದಾಖಲಾಗಿದೆ.
ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ವಿವಾದದ ಬೆನ್ನಲ್ಲೇ ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ.
ರಾಜ್ಯದಲ್ಲಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿದ ಕಾಂಗ್ರೆಸ್ ನಾಯಕರು, ಈ ಘಟನೆಯನ್ನು ‘ದಲಿತರ ಮೇಲಿನ ದಬ್ಬಾಳಿಕೆ’ಗೆ ಉದಾಹರಣೆ ಎಂದು ಉಲ್ಲೇಖಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ದಲಿತರ ದಬ್ಬಾಳಿಕೆಯು ಬಿಜೆಪಿಯ ದೊಡ್ಡ ಅಸ್ತ್ರವಾಗಿದೆ” ಎಂದು ಆರೋಪಿಸಿ, ರಾಜಕೀಯ ದುರುದ್ದೇಶದ ಈ ಆಟ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
#Horrific A shocking incident has emerged from Katni GRP police station in Madhya Pradesh, where a Dalit mother and her minor son were brutally beaten up by police officials inside the police station itself. Manuwadi media remains silent as usual…#DalitLivesMatter pic.twitter.com/sRoAyleKzo
— The Dalit Voice (@ambedkariteIND) August 28, 2024
ಇದನ್ನು “ಭೀಕರ ಘಟನೆ” ಎಂದು ಕರೆದ ಅವರು, “ಬಿಜೆಪಿಯ ದುರಾಡಳಿತದಲ್ಲಿ ಮಧ್ಯಪ್ರದೇಶದ ದಲಿತರು ಭೀಕರ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರೆ.
ಮಧ್ಯಪ್ರದೇಶ ಯುವ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಸರ್ಕಾರವನ್ನು ಗುರಿಯಾಗಿಸಿದೆ, ಪೊಲೀಸರು “ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಮೂಲಕ ಜನರನ್ನು ಕೊಲ್ಲುತ್ತಿದ್ದಾರೆ” ಎಂದು ಹೇಳಿದರು.
ಅಧಿಕಾರಿ ಅರುಣಾ ವಾಗನೆ ಪ್ರಕಾರ, ಕುಸುಮ್ ವಂಸ್ಕರ್ ಅವರ ಮಗ ಮತ್ತು ದೀಪಕ್ ಅವರ ತಂದೆ ದೀಪಕ್ ವಂಸ್ಕರ್ ವಿರುದ್ಧ 19 ಪ್ರಕರಣಗಳಿವೆ. ಅವರು ರೈಲ್ವೆ ಪೊಲೀಸರಿಗೆ ಬೇಕಾಗಿದ್ದಾರೆ, ಅವನನ್ನು ಸೆರೆಹಿಡಿಯಲು 10,000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಅವನ ಇಡೀ ಕುಟುಂಬವು ಕಳ್ಳತನದಲ್ಲಿ ಬೆಂಬಲ ನೀಡುತ್ತಿತ್ತು, ಆದ್ದರಿಂದ ಅವನ ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ಕರೆತರಲಾಯಿತು ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ನಂತರ, ದೀಪಕ್ ವಾಂಸ್ಕರ್ ಅವರನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.
ಆಕ್ರೋಶದ ನಂತರ, ಜಬಲ್‌ಪುರ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಆರ್‌ಪಿ) ಅವರು ಸ್ಟೇಷನ್ ಇನ್‌ಚಾರ್ಜ್ ಅನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ದೀಪಕ್ ವಂಸ್ಕರ್ ಕಳ್ಳತನ ಹಿನ್ನೆಲೆ ವ್ಯಕ್ತಿಯಾಗಿದ್ದು, 2017 ರಿಂದ ಕಣ್ಗಾವಲಿನಲ್ಲಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ದೂರು ದಾಖಲಾದರೆ ಪೊಲೀಸ್ ವಿಚಾರಣೆ ನಡೆಸಲಾಗುವುದು ಎಂದು ಕಟ್ನಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸೆಹ್ರಿಯಾ ತಿಳಿಸಿದ್ದಾರೆ.
“ವಿವಿಧ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವೀಡಿಯೊವೊಂದು ವೈರಲ್ ಆಗಿದ್ದು, ಮೇಲ್ನೋಟಕ್ಕೆ ಇದು ಜಿಆರ್‌ಪಿ ಕಟ್ನಿ ಪ್ರಕರಣವೆಂದು ತೋರುತ್ತದೆ.. ಈ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಮತ್ತು ದೂರು ದಾಖಲಿಸಿದರೆ, ತನಿಖೆ ನಡೆಸಲಾಗುವುದು” ಎಂದು ಎಎಸ್‌ಪಿ ಸೆಹ್ರಿಯಾ ಹೇಳಿದರು.
ಇದನ್ನೂ ಓದಿ; ಜಾರ್ಖಂಡ್ ಮುಕ್ತಿ ಮೋರ್ಚಾದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಮಾಜಿ ಸಿಎಂ ಚಂಪೈ ಸೊರೇನ್


