Homeಅಂತರಾಷ್ಟ್ರೀಯ#AllEyesOnDeck | 6ನೇ ದಿನಕ್ಕೆ ಕಾಲಿಟ್ಟ ಗಾಝಾಗೆ ಹೊರಟ ‘ಮದ್ಲೀನ್‌’ ಪ್ರಯಾಣ; ಇಸ್ರೇಲ್‌ನಿಂದ ಬಂಧನಕ್ಕೆ ಸಿದ್ಧತೆ!

#AllEyesOnDeck | 6ನೇ ದಿನಕ್ಕೆ ಕಾಲಿಟ್ಟ ಗಾಝಾಗೆ ಹೊರಟ ‘ಮದ್ಲೀನ್‌’ ಪ್ರಯಾಣ; ಇಸ್ರೇಲ್‌ನಿಂದ ಬಂಧನಕ್ಕೆ ಸಿದ್ಧತೆ!

- Advertisement -
- Advertisement -

ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿರುವ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ (FFC)’ದ ನೆರವು ಹಡಗು ‘ಮದ್ಲೀನ್’ನ ಪ್ರಯಾಣವು ಆರನೇ ದಿನಕ್ಕೆ ತಲುಪಿದೆ. ಪ್ರಸ್ತುತ ಮೆಡಿಟರೇನಿಯನ್ ಸಮುದ್ರದಲ್ಲಿರುವ ಹಡಗು ಯಾವುದೇ ಅಡೆತಡೆಗಳಿಲ್ಲದಿದ್ದರೆ ಏಳನೆ ದಿನವಾದ ಶುಕ್ರವಾರ (ನಾಳೆ) ಗಾಝಾ ತಲುಪಲಿದೆ. #AllEyesOnDeck | 6ನೇ ದಿನಕ್ಕೆ

ಮಾರ್ಚ್ 2 ರಿಂದ ಗಾಝಾ ಮೇಲೆ ವಸಾಹತುಗಾರ ಇಸ್ರೇಲ್‌ ವಿಧಿಸಿರುವ ಮುತ್ತಿಗೆಯನ್ನು ಮುರಿಯುವ ಉದ್ದೇಶ ಕೂಡಾ ಮದ್ಲೀನ್‌ಗೆ ಇದೆ. ಹಡಗಿನಲ್ಲಿರುವ 12 ಹೋರಾಟಗಾರಲ್ಲಿ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಕೂಡ ಒಬ್ಬರು. 2007 ರಿಂದ ಈ ಗಾಝಾ ಪ್ರದೇಶವನ್ನು ಇಸ್ರೇಲ್‌ ನೆಲೆ, ಜಲ ಮತ್ತು ವಾಯು ದಿಗ್ಬಂಧನಕ್ಕೆ ಒಳಗಾಗಿಸಿದೆ.

ತಿಂಗಳ ಹಿಂದೆಯಷ್ಟೆ ಗಾಝಾಗೆ ತೆರಳುತ್ತಿದ್ದ ಮತ್ತೊಂದು ಎಫ್‌ಎಫ್‌ಸಿ ನೆರವು ಹಡಗಿನ ಮೇಲೆ ಇಸ್ರೇಲ್‌ನ ಡ್ರೋನ್‌ಗಳು ಬಾಂಬ್ ದಾಳಿ ಮಾಡಿತ್ತು. ಅದಾಗಿ ಒಂದು ತಿಂಗಳ ನಂತರ ಜೂನ್ 1 ರಂದು ಮದ್ಲೀನ್‌ ಸಿಸಿಲಿಯ ಕ್ಯಾಟಾನಿಯಾ ಬಂದರಿನಿಂದ ಹೊರಟಿದೆ. ಇಸ್ರೇಲಿ ಬಾಂಬ್ ದಾಳಿಯಲ್ಲಿ 54,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

 

View this post on Instagram

 

A post shared by Thiago Ávila (@thiagoavilabrasil)

ಮದ್ಲೀನ್ ಸುಮಾರು 2,000 ಕಿಮೀ (1,250-ಮೈಲಿ) ಪ್ರಯಾಣಿಸಲಿದ್ದು ಏಳು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹಡಗಿನ ಲೈವ್ ಟ್ರ್ಯಾಕರ್ ಅನ್ನು ಫೋರೆನ್ಸಿಕ್ ಆರ್ಕಿಟೆಕ್ಚರ್ ನೇರಪ್ರಸಾರ ಮಾಡುತ್ತಿದ್ದು, ಜೊತೆಗೆ ಹಡಗಿನಲ್ಲಿರುವ ಗಾರ್ಮಿನ್ ಲೈವ್ ಟ್ರ್ಯಾಕರ್ ಅನ್ನು ಬಳಸುತ್ತಿದೆ.

ಅದಾಗ್ಯೂ, ಮದ್ಲೀನ್ ಹಡಗನ್ನು ಗಾಝಾ ತಲುಪಲು ಇಸ್ರೇಲ್ ಸೇನೆ ಅನುಮತಿಸುವುದಿಲ್ಲ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಹಡಗಿನಲ್ಲಿರುವ ಹೋರಾಟಗಾರರು ಇಸ್ರೇಲಿ ಸೈನ್ಯದ ಆದೇಶವನ್ನು ಪಾಲಿಸಲು ವಿಫಲವಾದರೆ ಅವರ ಬಂಧನ ಮತ್ತು ಅವರ ಹಡಗನ್ನು ವಶಪಡಿಸಿಕೊಳ್ಳುವ ಅಪಾಯವಿದೆ ಎಂದು ಹೇಳಿವೆ.

ಈ ನಡುವೆ, ಸುಮಾರು 6,50,706 ಜನರು ಇಸ್ರೇಲ್ ಸರ್ಕಾರಕ್ಕೆ ಆಗ್ರಹ ಪತ್ರವನ್ನು ಕಳುಹಿಸಿದ್ದು, ಹಡಗು ಯಾವುದೇ ಅಡೆತಡೆಯಿಲ್ಲದೆ ಗಾಝಾ ತಲುಪಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದೆ.

“ಹಡಗು ನಿರಾಯುಧವಾಗಿದ್ದು, ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ ಮತ್ತು ಅಂತರರಾಷ್ಟ್ರೀಯ ಕಡಲ ಕಾನೂನು ಹಾಗೂ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನಿನೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಸಂಸದರು, ಪತ್ರಕರ್ತರು, ವಕೀಲರು ಮತ್ತು ಜಾಗತಿಕ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಮಾನವ ಹಕ್ಕುಗಳ ರಕ್ಷಕರು ಸೇರಿದ್ದಾರೆ” ಎಂದು ಪತ್ರವು ಹೇಳಿದೆ.

“ಮದ್ಲೀನ್ ಅಥವಾ ಅದರ ನಾಗರಿಕ ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಯಾವುದೇ ಪ್ರತಿಬಂಧ, ದಾಳಿ, ವಿಧ್ವಂಸಕ ಕೃತ್ಯ ಅಥವಾ ಹಸ್ತಕ್ಷೇಪ ಮಾಡಿದರೆ ಅದು ನಾಗರಿಕರ ಮೇಲಿನ ಉದ್ದೇಶಪೂರ್ವಕ, ತಿಳಿದ ಮತ್ತು ಕಾನೂನುಬಾಹಿರ ದಾಳಿಯಾಗುತ್ತದೆ. ಜೊತಗೆ ಅದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ” ಎಂದು ಪತ್ರವೂ ಎಚ್ಚರಿಸಿದೆ.

“ಅಂತಹ ಕ್ರಮಗಳು ನಾಲ್ಕನೇ ಜಿನೀವಾ ಸಮಾವೇಶದ ಗಂಭೀರ ಉಲ್ಲಂಘನೆಗೆ ಸಮನಾಗಿರುತ್ತದೆ ಮತ್ತು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ರೋಮ್ ಶಾಸನದ ಅಡಿಯಲ್ಲಿನ ಯುದ್ಧ ಅಪರಾಧಗಳಾಗಿ ಪರಿಣಮಿಸಬಹುದು” ಎಂದು ಪತ್ರವೂ ಹೇಳಿದೆ.

ಅಮೆರಿಕದ ಗಾಯಕ ಮ್ಯಾಕ್ಲೆಮೋರ್‌ ಬೆಂಬಲ

ಈ ನಡುವೆ ಬುಧವಾರ ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಅಮೆರಿಕದ ಗಾಯಕ ಮ್ಯಾಕ್ಲೆಮೋರ್‌, ಪ್ಯಾಲೆಸ್ತೀನಿ ಹೋರಾಟ ಮತ್ತು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಪ್ಯಾಲೆಸ್ತೀನ್‌ ಪರ ಬೆಂಬಲಿಗ ಮ್ಯಾಕ್ಲೆಮೋರ್ ಜರ್ಮನಿಯ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಹತ್ಯಾಕಾಂಡವನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಅವರು ಗಾಝಾದ ಮೇಲೆ ಇಸ್ರೇಲ್‌ನ ಯುದ್ಧವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದರು.

ಭಾನುವಾರ ಸಿಸಿಲಿಯಿಂದ ಹೊರಟ ಮದ್ಲೀನ್, ಬೇಬಿ ಫಾರ್ಮುಲಾ, ನ್ಯಾಪ್‌ಕಿನ್, ಹಿಟ್ಟು, ಅಕ್ಕಿ, ನೈರ್ಮಲ್ಯ ಉತ್ಪನ್ನಗಳು, ನೀರಿನ ಫಿಲ್ಟರ್‌ಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ಒಳಗೊಂಡಂತೆ ಮಾನವೀಯ ಸಹಾಯವನ್ನು ಹೊತ್ತೊಯ್ಯುತ್ತಿದೆ. ಈ ಹಡಗು ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್‌ನ ನೌಕಾ ದಿಗ್ಬಂಧನವನ್ನು ಮುರಿಯಲು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಆಯೋಜಿಸಿರುವ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಪ್ರಯಾಣಿಸುತ್ತಿದೆ.

“2014 ರಲ್ಲಿ ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆಯಾದ ‘ಮದ್ಲೀನ್’ ಅವರ ಹೆಸರನ್ನು ಹಡಗಿಗೆ ಇಡಲಾಗಿದ್ದು, ಪ್ಯಾಲೆಸ್ತೀನಿ ಹೋರಾಟದ ಅವಿಶ್ರಾಂತ ಮನೋಭಾವ ಮತ್ತು ಇಸ್ರೇಲ್‌ನ ಸಾಮೂಹಿಕ ಶಿಕ್ಷೆ ಮತ್ತು ಉದ್ದೇಶಪೂರ್ವಕ ಹಸಿವು ನೀತಿಗಳ ಹೇರಿಕೆಗಳ ವಿರುದ್ಧ ಬೆಳೆಯುತ್ತಿರುವ ಜಾಗತಿಕ ಪ್ರತಿರೋಧವನ್ನು ಇದು ಸಂಕೇತಿಸುತ್ತದೆ” ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ.

ಸ್ವೀಡಿಷ್‌ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರೊಂದಿಗೆ ಜರ್ಮನಿಯ ಯಾಸೆಮಿನ್ ಅಕಾರ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಒಮರ್ ಫಯಾದ್, ರಿಮಾ ಹಸನ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಹಡಗಿನಲ್ಲಿ ಇದ್ದಾರೆ.

“ಈ ಕಾರ್ಯಾಚರಣೆ ಎಷ್ಟೇ ಅಪಾಯಕಾರಿಯಾಗಿದ್ದರೂ, ನರಮೇಧಕ್ಕೆ ಒಳಗಾಗುತ್ತಿರುವ ಜೀವಗಳ ಮುಂದೆ ಇಡೀ ಪ್ರಪಂಚದ ಮೌನದಷ್ಟು ಅಪಾಯಕಾರಿ ಅಲ್ಲ” ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು ಹೇಳಿದ್ದಾರೆ. #AllEyesOnDeck | 6ನೇ ದಿನಕ್ಕೆ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  #AllEyesOnDeck | ಗಾಝಾಗೆ ಹೊರಟ ‘ಮದ್ಲೀನ್‌’ಗೆ 4ನೇ ಬೆಳಗು; ಗ್ರೀಸ್‌ ತೀರದ ಬಳಿ ಡ್ರೋನ್ ಹಾರಾಟ!

#AllEyesOnDeck | ಗಾಝಾಗೆ ಹೊರಟ ‘ಮದ್ಲೀನ್‌’ಗೆ 4ನೇ ಬೆಳಗು; ಗ್ರೀಸ್‌ ತೀರದ ಬಳಿ ಡ್ರೋನ್ ಹಾರಾಟ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...