Homeಮುಖಪುಟರಷ್ಯಾ ಮಾನವೀಯ ಕಾರಿಡಾರ್‌ ಘೋಷಿಸಿದರೂ ಕೈಗೆ ಸಿಕ್ಕ ವಾಹನಗಳಲ್ಲಿ ಸ್ಥಳಾಂತರಗೊಳ್ಳಿ ಎಂದ ಮೋದಿ ನೇತೃತ್ವದ BJP...

ರಷ್ಯಾ ಮಾನವೀಯ ಕಾರಿಡಾರ್‌ ಘೋಷಿಸಿದರೂ ಕೈಗೆ ಸಿಕ್ಕ ವಾಹನಗಳಲ್ಲಿ ಸ್ಥಳಾಂತರಗೊಳ್ಳಿ ಎಂದ ಮೋದಿ ನೇತೃತ್ವದ BJP ಸರ್ಕಾರ!

- Advertisement -
- Advertisement -

ಭುಗಿಲೆದ್ದಿರುವ ಯುದ್ದದ ನಡುವೆ ರಷ್ಯಾವು ಉಕ್ರೇನ್‌‌ನ ವಿವಿಧ ಭಾಗಗಳಲ್ಲಿ ಮಾನವೀಯ ಕಾರಿಡಾರ್‌ ಅನ್ನು ಮಂಗಳವಾರ ಘೋಷಿಸಿದೆ. ಆದರೂ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಉಕ್ರೇನ್‌‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ, ಲಭ್ಯವಿರುವ ಯಾವುದೆ ಸಾರಿಗೆ ವ್ಯವಸ್ಥೆಗಳನನ್ನು ಬಳಸಿಕೊಂಡು ಸ್ಥಳಾಂತರಗೊಳ್ಳುವಂತೆ ತಿಳಿಸಿದೆ. ಯುದ್ದ ವಿರಾಮ ಘೋಷಿಸಿದರೂ ಭಾರತದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಯುದ್ದ ಪೀಡಿತ ದೇಶದಲ್ಲಿರುವ ಭಾರತೀಯರಿಗೆ ಇಂದು ಸಂಜೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ, “ಜನರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ಉಕ್ರೇನ್‌ನ ವಿವಿಧ ಭಾಗಗಳಲ್ಲಿ 8 ಮಾರ್ಚ್ 2022 ರಂದು ಘೋಷಿಸಲಾಗಿದೆ. ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ, ಮುಂದೆ ಮಾನವೀಯ ಕಾರಿಡಾರ್ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ” ಎಂದು ಹೇಳಿದೆ.

“ಎಲ್ಲಾ ಭಾರತೀಯ ಪ್ರಜೆಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಸುರಕ್ಷತೆಯನ್ನು ಪರಿಗಣನೆಗೆ ತೆಗೆದುಕೊಂಡು ರೈಲುಗಳು ಹಾಗೂ ವಾಹನಗಳು ಅಥವಾ ಲಭ್ಯವಿರುವ ಯಾವುದೇ ಸಾರಿಗೆ ವಿಧಾನಗಳನ್ನು ಬಳಸಿ ಸ್ಥಳಾಂತರವಾಗಬೇಕು” ಎಂದು ರಾಯಭಾರ ಕಚೇರಿ ಹೇಳಿದೆ.

 

ಯುದ್ಧ ಪ್ರಾರಂಭವಾದ ನಂತರ ಅಲ್ಲಿರುವು ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ನಾಲ್ಕು ಸಚಿವರನ್ನು ನೇಮಿಸಿದ್ದು, ಅವರು ಉಕ್ರೇನ್‌‌ನ ಗಡಿ ದೇಶಗಳಲ್ಲಿ ಇದ್ದು ಅಲ್ಲಿಂದ ಭಾರತೀಯರನ್ನು ವಾಪಾಸು ಕಳಿಸುತ್ತಿದ್ದಾರೆ. ಆದರೆ, ಅಲ್ಲಿಂದ ವಾಪಾಸು ಬಂದ ಹಲವಾರು ವಿದ್ಯಾರ್ಥಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಯುದ್ದ ಪೀಡಿತ ಪ್ರದೇಶದಿಂದ ಗಡಿಗಳವರೆಗೆ ತಲುಪಲು ಸಹಾಯ ಮಾಡಿ ಎಂದು ಹೇಳಿದ್ದಾರೆ.

ಯುದ್ಧ ಪ್ರಾರಂಭವಾದ ನಂತರ 20 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ಹೈ ಕಮಿಷನರ್ ಫಾರ್ ರೆಫ್ಯೂಜೀಸ್ (UNHCR) ಫಿಲಿಪ್ಪೊ ಗ್ರಾಂಡಿ ಟ್ವೀಟ್ ಹೇಳಿದ್ದಾರೆ. “ಇಂದು ಉಕ್ರೇನ್‌ನಿಂದ ವಲಸೆ ಹೊರಟ ನಿರಾಶ್ರಿತರ ಸಂಖ್ಯೆ ಇಪ್ಪತ್ತು ಲಕ್ಷ ತಲುಪಿದೆ” ಎಂದು ಅವರು ಹೇಳಿದ್ದಾರೆ. ಫೆಬ್ರವರಿ 24 ರಿಂದ 20,11,312 ಜನರು ಯುದ್ಧ ಪೀಡಿತ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ನಿರಾಶ್ರಿತರ ಸಂಸ್ಥೆ UNHCR ಹೇಳಿದೆ.

ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳ ಆತಂಕದ ನಡುವೆ ಸ್ಥಳಾಂತರಕ್ಕಾಗಿ ‘ಮಾನವೀಯ ಕಾರಿಡಾರ್‌’ಗಳನ್ನು ತೆರೆದ ರಷ್ಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...