Homeಮುಖಪುಟವಿದೇಶಿಗರ ಆಕ್ರೋಶಕ್ಕೆ ಕಾರಣವಾದ ಅಂಬಾನಿ ಮಗನ 'ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ'

ವಿದೇಶಿಗರ ಆಕ್ರೋಶಕ್ಕೆ ಕಾರಣವಾದ ಅಂಬಾನಿ ಮಗನ ‘ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ’

- Advertisement -
- Advertisement -

ಉದ್ಯಮಿ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ‘ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ’ (ವಿವಾಹ ಪೂರ್ವ ಕಾರ್ಯಕ್ರಮ) ವಿದೇಶಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜುಲೈ 12, 2024ರಂದು ಉದ್ಯಮಿ ವಿರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ವಿವಾಹ ನಡೆಯಲಿದೆ. ಅದಕ್ಕೂ ಮುನ್ನ ವಿವಿಧ ರೀತಿಯಲ್ಲಿ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.

ಮೊದಲ ವಿವಾಹ ಪೂರ್ವ ಕಾರ್ಯಕ್ರಮ ಅಂಬಾನಿ ಕುಟುಂಬದ ಮೂಲ ಸ್ಥಳ ಗುಜರಾತ್‌ನ ಜಾಮಾನಗರದಲ್ಲಿ ಅದ್ದೂರಿಯಾಗಿನ ನಡೆದಿತ್ತು. ಇದಕ್ಕಾಗಿ ಭಾರತೀಯ ವಾಯುನೆಲೆಯ ಅತಿ ಸೂಕ್ಷ್ಮ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಿ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತೇ ಇದೆ.

ವರದಿಗಳ ಪ್ರಕಾರ, ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 1,200ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು. ಬೆಜ್ವೆಲ್ಡ್ ಆನೆಗಳು ಮತ್ತು ಅಮೆರಿಕನ್ ಗಾಯಕಿ ರಿಹಾನ್ನಾ ಅವರ ಪ್ರದರ್ಶನ ಸೇರಿದಂತೆ ವಿವಿಧ ರೀತಿಯಲ್ಲಿ ಈ ಕಾರ್ಯಕ್ರಮಕ್ಕೆ ಅಂಬಾನಿ ಸುಮಾರು 150 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.

ಎರಡನೇ ಕಾರ್ಯಕ್ರಮ ‘ಕ್ರೂಸ್ ಪಾರ್ಟಿ’

ಜಾಮಾನಗರದಲ್ಲಿ ಒಂದು ವಿವಾಹ ಪೂರ್ವ ಕಾರ್ಯಕ್ರಮ ಮುಗಿಸಿದ್ದ ಅಂಬಾನಿ ಕುಟುಂಬ, ಮೆಡಿಟರೇನಿಯನ್ ಸಮುದ್ರದಲ್ಲಿ ಐಷರಾಮಿ ಕ್ರೂಸ್‌ನಲ್ಲಿ ಎರಡನೇ ಕಾರ್ಯಕ್ರಮ ಆಯೋಜಿಸಿತ್ತು. ಈ ಕ್ರೂಸ್ ವಿವಿಧ ದೇಶಗಳನ್ನು ಸುತ್ತಾಡಿದೆ.

ಇಟಲಿಯ ದ್ವೀಪ ಸಿಸಿಲಿಯ ರಾಜಧಾನಿಯಾದ ಪಲೆರ್ಮೊದಿಂದ ಫ್ರಾನ್ಸ್‌ನ ದಕ್ಷಿಣಕ್ಕೆ 4 ದಿನಗಳ ಕ್ರೂಸ್ ಪಾರ್ಟಿ ಆಯೋಜಿಸಲಾಗಿತ್ತು. ನಾಲ್ಕು ದಿನಗಳಲ್ಲಿ ರೋಮ್, ಪೋರ್ಟೊಫಿನೋ, ಜಿನೋವಾ ಮತ್ತು ಕೇನ್ಸ್‌ಗಳಲ್ಲಿ ಕ್ರೂಸ್‌ ಸಂಚರಿಸಿದೆ. ಅಲ್ಲಲ್ಲಿ ಕಡಲ ತೀರಗಳಲ್ಲಿ ಪಾರ್ಟಿ ನಡೆದಿದೆ.

ಮೇ 29ರಂದು ಪಲೆರ್ಮೊದಿಂದ ಹೊರಟ ಕ್ರೂಸ್, ಇಟಾಲಿಯನ್ ಬೇಸಿಗೆಯನ್ನು ಅನುಭವಿಸುವ ಗುರಿಯೊಂದಿಗೆ ‘ಲಾ ಡೊಲ್ಸ್ ವೀಟಾ’ ಎಂಬ ಶೀರ್ಷಿಕೆಯ ಪಾರ್ಟಿಗಾಗಿ ಜೂನ್ 1ರಂದು ಆಗ್ನೆಯ ಜಿನೋವಾದ ಪೋರ್ಟೊಫಿನೋ ಬಂದರಿಗೆ ತಲುಪಿತ್ತು.

ಪೋರ್ಟೊಫಿನೋದಲ್ಲಿ ನಡೆದ ಪಾರ್ಟಿಯ ವಿಡಿಯೋ ಎಲ್ಲೂ ಸೋರಿಕೆಯಾಗದಂತೆ ತಡೆಯಲು ಮೊಬೈಲ್ ಫೋನ್ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೂ, ಕೆಲವೊಂದು ವಿಡಿಯೋಗಳು ಸೋರಿಕೆಯಾಗಿವೆ. ಅದರ ಪ್ರಕಾರ, ಅಮೆರಿಕನ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಗಾಯಕಿ ಕೇಟಿ ಪೆರ್ರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸುಮಾರು 800 ಜನರು ಇದರಲ್ಲಿ ಪಾಲ್ಗೊಂಡಿದ್ದರು.

ಕ್ರೂಸ್ ಪಾರ್ಟಿ ವಿರುದ್ದ ಆಕ್ರೋಶಗೊಂಡ ಸ್ಥಳೀಯ ಜನರು

ಅಂಬಾನಿ ಮಗನ ವಿವಾವ ಪೂರ್ವ ಕ್ರೂಸ್ ಪಾರ್ಟಿಯ ವಿರುದ್ದ ಪೋರ್ಟೊಫಿನೋದ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕಾರಣ, ಕ್ರೂಸ್ ಪಾರ್ಟಿಯ ದಿನ ಅಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಐ‍‍‍‍‍ಷಾರಾಮಿ ಪಾರ್ಟಿಗಾಗಿ ಪೋರ್ಟೊಫಿನೋ ಬಂದರಿಗೆ ಜನರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಪೋರ್ಟೊಫಿನೋದಲ್ಲಿ ಈ ಹಿಂದೆಯೂ ಹಲವಾರು ಶ್ರೀಮಂತರ ಮದುವೆಗಳು ನಡೆದಿವೆ. ಆದರೆ, ಜನರಿಗೆ ತೊಂದರೆ ಕೊಟ್ಟಿರಲಿಲ್ಲ. ಆಸ್ಟ್ರೇಲಿಯನ್ ಗಾಯಕ ಸಿಯಾ ಮತ್ತು ರಿಯಾಲಿಟಿ ಟಿವಿ ತಾರೆ ಕೌರ್ಟ್ನಿ ಕಾರ್ಡಶಿಯಾನ್ ಇದೇ ಸ್ಥಳದಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ, ಸ್ಥಳೀಯ ಜನರಿಗೆ ಯಾವುದೇ ತೊಂದರೆಯಾಗಿರಲಿಲ್ಲ.

ವರದಿಗಳ ಪ್ರಕಾರ, ಪೋರ್ಟೊಫಿನೋದ ಕಾರ್ಯಕ್ರಮದ ಆಹಾರಕ್ಕಾಗಿ ಅಲ್ಲಿನ ಸ್ಥಳೀಯ 10ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಗೆ 7 ಸಾವಿರ ಡಾಲರ್‌ನಿಂದ 10 ಸಾವಿರ ಅಮೆರಿಕನ್ ಡಾಲರ್ ನೀಡಲಾಗಿದೆ.

ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮದ ಕುರಿತು ಪೋರ್ಟೊಫಿನೋದ ಸ್ಥಳೀಯರು ಮತ್ತು ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋರ್ಟೊಫಿನೋದಲ್ಲಿ ಇದುವರೆಗೆ ಹಲವಾರು ಸೆಲೆಬ್ರೆಟಿಗಳ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿವೆ. ಆದರೆ, ಇದುವರೆಗೆ ಯಾರೂ ಸ್ಥಳೀಯರಿಗೆ ತೊಂದರೆ ಕೊಟ್ಟಿಲ್ಲ. ಅಂಬಾನಿ ಕುಟುಂಬದ ಖಾಸಗಿ ಕಾರ್ಯಕ್ರಮಕ್ಕೆ ಇಡೀ ಪಟ್ಟಣವನ್ನು ಮುಚ್ಚಲಾಗಿತ್ತು. ಇದರಿಂದ ಜನರಿಗೆ ಬಹಳ ತೊಂದರೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಕ್ರೂಸ್ ಪಾರ್ಟಿಯಲ್ಲಿದ್ದವರು ನಡೆದುಕೊಂಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಜೂನ್ 2ರಂದು ಇಡೀ ರಾತ್ರಿ ಜೋರಾಗಿ ಮ್ಯೂಸಿಕ್ ಇಟ್ಟು, ಕುಣಿದು ಕುಪ್ಪಳಿಸುವ ಮೂಲಕ ಪಾರ್ಟಿಯಲ್ಲಿದ್ದವರು ಕಿರಿ ಕಿರಿ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

‘tadkeshwari (@ladytadkeshwari) ಎಂಬ ಎಕ್ಸ್ ಬಳಕೆದಾರರೊಬ್ಬರು ಕಾರ್ಯಕ್ರಮದ ಕುರಿತ ಪತ್ರಿಕಾ ವರದಿಯನ್ನು ಹಂಚಿಕೊಂಡು “ಹಣದಿಂದ ಶಿಷ್ಟಾಚಾರ ಮತ್ತು ಗುಣನಡತೆಯನ್ನು ಖರೀದಿಸಲು ಸಾಧ್ಯವಿಲ್ಲ! ಶೇಮ್ ಶೇಮ್ ಶೇಮ್!” ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ, ವಿಭಿನ್ನವಾಗಿ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸಿದ್ದ ಅಂಬಾನಿ ಕುಟುಂಬ, ಸ್ಥಳೀಯರಿಗೆ ತೊಂದರೆ ಕೊಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ : ಲೋಕಸಭೆ ಪ್ರವೇಶಿಸಿದ ಮುಸ್ಲಿಂ ಸಂಸದರ ಸಂಖ್ಯೆಯಲ್ಲಿ ಇಳಿಕೆ: ಈ ಭಾರಿ ಎಷ್ಟು ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ? ಡಿಟೇಲ್ಸ್…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...