Homeಮುಖಪುಟಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ - ಒಂದು...

ಅಂಬೇಡ್ಕರ್ ನಗರ: ನಿವೃತ್ತ ಮುಸ್ಲಿಂ ಶಿಕ್ಷಕರ 3 ಅಂತಸ್ತಿನ ಮನೆ ನೆಲಸಮ – ಒಂದು ಕುಟುಂಬದ ನೋವಿನ ಕಥೆ

- Advertisement -
- Advertisement -

ನವದೆಹಲಿ: ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಗುರುವಾರ, 55 ವರ್ಷದ ನಿವೃತ್ತ ಶಿಕ್ಷಕ ನಬಿ ಅಹ್ಮದ್ ಅವರ ಮೂರು ಅಂತಸ್ತಿನ ಕನಸಿನ ಮನೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ನೆಲಸಮಗೊಳಿಸಲಾಯಿತು. ಬಸ್ಖಾರಿ ರಸ್ತೆಯಲ್ಲಿ ನಡೆದ ಈ ಘಟನೆ, ಜೀವನದುದ್ದಕ್ಕೂ ಕಟ್ಟಿಕೊಂಡ ಕನಸುಗಳು ಮತ್ತು ದುಡಿದ ಹಣದಿಂದ ನಿರ್ಮಿಸಿದ ಮನೆಯು ಕಣ್ಮುಂದೆಯೇ ಕೆಡವಲ್ಪಟ್ಟಿತ್ತು. “ಅಕ್ರಮ ಒತ್ತುವರಿ” ನೆಪದಲ್ಲಿ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿಕೊಂಡು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅಭಿಯಾನಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಲೋಕೋಪಯೋಗಿ ಇಲಾಖೆಯು (PWD) ಈ ನೆಲಸಮ ಕಾರ್ಯವನ್ನು ಹೈಕೋರ್ಟ್ ಆದೇಶದಂತೆ ನಡೆಸಲಾಗಿದೆ ಎಂದು ಹೇಳಿದೆ. ಸರ್ಕಾರಿ ಭೂಮಿ ಎಂದು ಘೋಷಿಸಿದ ನಂತರವೇ ಈ ಮನೆಗೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಜಲಾಲ್‌ಪುರ್ ಕೊತ್ವಾಲ್ ಸಂತೋಷ್ ಕುಮಾರ್ ಸಿಂಗ್ ಸಹ, “ಈ ಕಟ್ಟಡವು ಸರ್ಕಾರಿ ಭೂಮಿಯಲ್ಲಿದ್ದು, ಕಾನೂನುಬದ್ಧ ಅನುಮೋದನೆ ಇರಲಿಲ್ಲ. ನಾವು ಅಹ್ಮದ್‌ಗೆ ಪೂರ್ವ ಸೂಚನೆ ಸೇರಿದಂತೆ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ,” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

“ನನ್ನ ಇಡೀ ಜೀವನವನ್ನು ಈ ಮನೆಯನ್ನು ಕಟ್ಟಲು ಕಳೆದಿದ್ದೇನೆ. ಈಗ ನನ್ನ ಬ್ಯಾಗ್‌ನಲ್ಲಿರುವ ಬಟ್ಟೆಗಳನ್ನು ಹೊರತುಪಡಿಸಿ ನನಗೇನೂ ಇಲ್ಲ. ಇಲ್ಲಿ ಯಾವುದೇ ಹಿಂದೂ ಮನೆಗಳನ್ನು ಮುಟ್ಟಿಲ್ಲ; ನಮ್ಮನ್ನು ಮಾತ್ರ ಗುರಿಪಡಿಸಲಾಗುತ್ತಿದೆ,” ಎಂದು ನಬಿ ಅಹ್ಮದ್ ಅವರ ದನಿ ನೋವಿನಿಂದ ನಡುಗಿತು. ಇದು ಕೇವಲ ನಬಿ ಅಹ್ಮದ್ ಅವರೊಬ್ಬರ ಆರ್ತನಾದವಾಗಿರಲಿಲ್ಲ. ಸ್ಥಳೀಯ ಅಂಗಡಿ ಮಾಲೀಕ ಫೈಜಾನ್ ಅಲಿ ಇದೇ ಆತಂಕವನ್ನು ಪ್ರತಿಧ್ವನಿಸುತ್ತಾ, “ಈ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮನೆಗಳು ಸರ್ಕಾರಿ ಜಾಗದಲ್ಲಿಯೇ ಇವೆ, ಆದರೆ ಮುಸ್ಲಿಮರ ಮನೆಗಳನ್ನು ಮಾತ್ರ ಏಕೆ ಕೆಡವಲಾಗುತ್ತಿದೆ?” ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ (PWD) 53 ಇತರ ಕುಟುಂಬಗಳಿಗೆ ನೋಟಿಸ್ ನೀಡಿದ್ದು, ಈ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳಿವೆ ಎಂದು ಅವರು ದೂರುತ್ತಾರೆ.

ಈ ಕ್ರಮಗಳ ಕುರಿತು ಲಕ್ನೋ ಮೂಲದ ಮಾನವ ಹಕ್ಕುಗಳ ವಕೀಲ ಅಡ್ವೊಕೇಟ್ ಫಿರೋಜ್ ಖಾನ್, “ನ್ಯಾಯಾಲಯಗಳು ಆದೇಶಗಳನ್ನು ನೀಡಬಹುದು, ಆದರೆ ಆಡಳಿತದ ಕೆಲಸ ನ್ಯಾಯಯುತವಾಗಿ ವರ್ತಿಸುವುದು. ಮುಸ್ಲಿಂ ಮನೆಗಳನ್ನು ಮಾತ್ರ ಗುರಿಪಡಿಸುವುದು ಏನನ್ನು ಸೂಚಿಸುತ್ತದೆ,” ಎಂದು ನೇರವಾಗಿ ಪ್ರಶ್ನಿಸುತ್ತಾರೆ.

ಬುಲ್ಡೋಜರ್ ಕ್ರಮಗಳನ್ನು ಹಲವರು ಮುಸ್ಲಿಂ ಸಮುದಾಯದ ಮೇಲಿನ ನೇರ ಆಕ್ರಮಣ ಎಂದು ಪರಿಗಣಿಸಿದ್ದಾರೆ. ನಬಿ ಅಹ್ಮದ್ ಅವರ ಪುತ್ರ ಇಮ್ರಾನ್ ಅವರ ನೋವಿನ ನುಡಿಗಳು ಇದಕ್ಕೆ ಸಾಕ್ಷಿಯಾಗಿವೆ: “ನನ್ನ ಮಗಳ ಮದುವೆ ಮುಂದಿನ ತಿಂಗಳು ಇದೆ. ಅವಳ ವರದಕ್ಷಿಣೆ ವಸ್ತುಗಳು ಮನೆಯಲ್ಲಿದ್ದವು – ಈಗ ಎಲ್ಲವೂ ನಾಶವಾಗಿವೆ. ನಮ್ಮ ವಸ್ತುಗಳನ್ನು ತೆಗೆದುಹಾಕಲು ಸಹ ಅವರು ನಮಗೆ ಅವಕಾಶ ನೀಡಲಿಲ್ಲ.ಸರ್ಕಾರ ನಮಗೆ ಏನು ಸಂದೇಶ ಕಳುಹಿಸುತ್ತಿದೆ? ನಾವು ನಮ್ಮ ಸ್ವಂತ ದೇಶಕ್ಕೆ ಸೇರಿಲ್ಲವೇ? ಎಂದು ಕೇಳುತ್ತಾರೆ.

ನಾಗರಿಕ ಸಮಾಜ ಗುಂಪುಗಳು ಮತ್ತು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಎ-ಮುಶಾವರತ್‌ನಂತಹ ಸಂಘಟನೆಗಳು ಈ ಬುಲ್ಡೋಜರ್ ಕ್ರಮಗಳನ್ನು “ನ್ಯಾಯಯುತ ವಿಚಾರಣೆಗಳಿಲ್ಲದ ಸಾಮೂಹಿಕ ಶಿಕ್ಷೆ” ಎಂದು ಬಲವಾಗಿ ಖಂಡಿಸಿವೆ.

ಅಂಬೇಡ್ಕರ್ ನಗರದ ಮುಸ್ಲಿಂ ನಿವಾಸಿಗಳು ನಿರಂತರ ಭಯದಲ್ಲಿ ದಿನ ದೂಡುತ್ತಿದ್ದಾರೆ. ನಿವಾಸಿ ಶಂಶಾದ್ ಆಲಮ್ ಅವರ ಮಾತುಗಳಲ್ಲಿ ಈ ಆತಂಕ ಸ್ಪಷ್ಟವಾಗಿದೆ: “ನಮ್ಮ ಮಕ್ಕಳು ಕೂಡ ಈಗ ಬುಲ್ಡೋಜರ್‌ಗಳಿಗೆ ಹೆದರುತ್ತಾರೆ. ಅವರು ಇದನ್ನು ಮುಸ್ಲಿಮರನ್ನು ನಾಶಮಾಡಲು ತಯಾರಿಸಿದ ಯಂತ್ರ ಎಂದು ಭಾವಿಸುತ್ತಾರೆ’’ ಎಂದಿದ್ದಾರೆ.

ನಬಿ ಅಹ್ಮದ್ ಮತ್ತು ಅವರಂತೆಯೇ ಅನ್ಯಾಯಕ್ಕೊಳಗಾದವರು ಈಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಪರಿಹಾರ ಮತ್ತು ಮುಂದಿನ ನೆಲಸಮಗಳಿಗೆ ತಡೆಯಾಜ್ಞೆ ಕೋರಿ ಅವರು ಕಾನೂನು ಹೋರಾಟ ನಡೆಸಲಿದ್ದಾರೆ. ನಮ್ಮ ಸಂವಿಧಾನವು ನಮಗೆ ಆಶ್ರಯ, ಕೇಳುವ ಮತ್ತು ಘನತೆಯ ಹಕ್ಕನ್ನು ನೀಡುತ್ತದೆ. ನಮಗೆ ಇವೆಲ್ಲವನ್ನೂ ಏಕೆ ನಿರಾಕರಿಸಲಾಗುತ್ತಿದೆ?” ಎಂದು ಅಡ್ವೊಕೇಟ್ ಶಕೀಲ್ ಅಹ್ಮದ್ ಅವರ ನೋವಿನ ಪ್ರಶ್ನೆಯಾಗಿದೆ.

ಏರ್ ಇಂಡಿಯಾ ಅಪಘಾತದ ಕುರಿತು ವರದಿ: ವಾಲ್‌ ಸ್ಟ್ರೀಟ್ ಜರ್ನಲ್‌, ರಾಯಿಟರ್ಸ್‌ಗೆ ಲೀಗಲ್ ನೋಟಿಸ್ ನೀಡಿದ ಪೈಲಟ್‌ಗಳ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...