ನಟ ಅಮೀರ್‌ ಖಾನ್‌ ಮತ್ತು ಕಿರಣ್ ರಾವ್‌ ವಿಚ್ಛೇದನ ಘೋಷಣೆ! | Naanu gauri

ಅಮಿರ್ ಖಾನ್ ಮತ್ತು ಕಿರಣ್ ರಾವ್ ದಂಪತಿ 15 ವರ್ಷದ ದಾಂಪತ್ಯಕ್ಕೆ ನಿನ್ನೆಯಷ್ಟೆ ಕೊನೆ ಹಾಡಿದ್ದರು. ಅಮಿರ್ ಖಾನ್ ವಿಚ್ಛೇದನ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಚ್ಛೇದನದ ಬೆನ್ನಲ್ಲೇ ಅಮಿರ್‌ ಖಾನ್‌ ಮತ್ತು ಕಿರಣ್ ರಾವ್ ತಾವಿಬ್ಬರೂ ಒಂದೇ ಕುಟುಂಬವಾಗಿ ಮುಂದುವರೆಯುತ್ತೇವೆ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಪರಸ್ಪರ ಒಬ್ಬರ ಕೈ ಒಬ್ಬರು ಹಿಡಿದು ತಮ್ಮ ನಡುವೆ ದಾಂಪತ್ಯ ಕೊನೆಗೊಂಡಿರಬಹುದು ಹಾಗೆಂದ ಮಾತ್ರಕ್ಕೆ ತಮ್ಮ ನಡುವಿನ ಅನ್ಯೋನ್ಯತೆಯಲ್ಲಿ ಯಾವುದೇ ಕೊರತೆಯಾಗುವುದಿಲ್ಲವೆಂದು ಸಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಮಿರ್ ಖಾನ್ ಮತ್ತು ಕಿರಣ್‌ ರಾವ್ ಅಕ್ಕಪಕ್ಕ ಕುಳಿತಿದ್ದು ಅಭಿಮಾನಿಗಳೊಂದಿಗೆ ತಮ್ಮ ಭಾವನೆಯನ್ನು ಆಮಿರ್ ಹಂಚಿಕೊಂಡಿದ್ದಾರೆ. “ನಿಮಗೆ ಬೇಸರವಾಗಿರಬಹುದು, ಸಿಟ್ಟೂ ಬಂದಿರಬಹುದು. ಆಘಾತವಾಗಿರಬಹುದು. ಆದರೆ ನಮ್ಮ ನಿರ್ಧಾರದಿಂದ ನಾವಿಬ್ಬರೂ ಖುಷಿಯಾಗಿದ್ದೇವೆ. ಒಂದು ಕುಟುಂಬವಾಗಿ ಮುಂದುವರೆಯುತ್ತೇವೆ” ಎಂದು ವಿಡಿಯೋದಲ್ಲಿ ಅಮಿರ್ ಖಾನ್ ಹೇಳಿದ್ದಾರೆ.

ನಮ್ಮ ಸಂಬಂಧದಲ್ಲಿ ಬದಲಾವಣೆಯಾಗಿದೆ. ನಾವಿಬ್ಬರು ಒಬ್ಬರಿಗೊಬ್ಬರು ಜೊತೆಯಾಗಿದ್ದೇವೆ. ನಮ್ಮಿಬ್ಬರ ನಡುವೆ ಜಗಳ ಅಥವಾ ಅಸಮಧಾನವಿದೆಯೆಂದು ತಿಳಿಯಬೇಡಿ ಎಂದು ಅಮಿರ್‌ ಖಾನ್-ಕಿರಣ್ ರಾವ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ನಟ ಅಮೀರ್‌ ಖಾನ್‌ ಮತ್ತು ಕಿರಣ್ ರಾವ್‌ ವಿಚ್ಛೇದನ ಘೋಷಣೆ!

LEAVE A REPLY

Please enter your comment!
Please enter your name here