ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇದೀಗ ರಾಜಸ್ಥಾನವನ್ನು ದಾಟಿ ಹರಿಯಾಣವನ್ನು ಪ್ರವೇಶಿಸಿದೆ. ಸಾಕಷ್ಟು ಜನಬೆಂಬಲ ಗಳಿಸಿರುವ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಕೇಂದ್ರ ಸಚಿವರೊಬ್ಬರ ಕೈಯಿಂದ ತಮ್ಮ ಶೂ ದಾರವನ್ನು ಕಟ್ಟಿಸಿಕೊಂಡಿದ್ದಾರೆ ಹಲವಾರು ಬಿಜೆಪಿ ನಾಯಕರು ಟ್ವೀಟ್ ಮಾಡಿ ಟೀಕಿಸಿದ್ದಾರೆ. ಈ ಕುರಿತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾಡಿದ ಟ್ವೀಟ್ ಸುಳ್ಳು ಎಂದು ಟ್ವಿಟರ್ ಟ್ಯಾಗ್ ಮಾಡಿದೆ.
“ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರು ತಮಗಿಂತ ಕಿರಿಯರಾದ ರಾಹುಲ್ ಗಾಂಧಿ ಅವರ ಶೂ ಲೇಸ್ ಕಟ್ಟಿದ್ದಾರೆ. ಈ ರಾಹುಲ್ ಗಾಂಧಿ ತನ್ನ ಕೆಲಸ ತಾನು ಮಾಡಿಕೊಳ್ಳದ ದುರಂಕಾರಿ ಸಿಂಗ್ ಅವರ ತನ್ನ ಬೆನ್ನು ತಟ್ಟುತ್ತಾರೆ. ಕಾಂಗ್ರೆಸ್‌ನಲ್ಲಿ ಇಂತವರ ಕೊರತೆಯಿಲ್ಲ” ಎಂದು ಬರೆದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
Former union minister Bhanwar Jitendra Singh goes down on his knee to tie Rahul Gandhi’s shoe lace. The arrogant entitled brat instead of helping himself is seen patting his back…
इसी परिपाटी की बात कर रहे थे खड़गे जी? कांग्रेस में पिद्दियों की कमी नहीं है। pic.twitter.com/FtHCCwNTwu
— Amit Malviya (@amitmalviya) December 21, 2022
ರಾಹುಲ್ ಗಾಂಧಿ ಅವರು ಈ ಕೂಡಲೇ ಜಿತೇಂದ್ರ ಸಿಂಗ್ ಅವರಿಗೆ ಕ್ಷಮೆ ಕೋರಬೇಕು. ಇಲ್ಲದೇ ಹೋದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಒತ್ತಾಯಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿತೇಂದ್ರ ಸಿಂಗ್‌ರವರು ತಾವು ತಮ್ಮ ಸ್ವಂತ ಶೂ ಲೇಸ್ ಅನ್ನು ಕಟ್ಟುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದಾರೆ. ಮಾಳವಿಯಾ ವಿರುದ್ಧ ಕಿಡಿಕಾರಿದ ಅವರು, ನಿಮ್ಮ ಟ್ವೀಟ್ ಸಂಪೂರ್ಣ ಸುಳ್ಳಾಗಿದೆ ಹಾಗೂ ಮಾನಹಾನಿಕರವಾಗಿದೆ. ವಾಸ್ತವವಾಗಿ ನನ್ನ ಕೋರಿಕೆಯ ಮೇರೆಗೆ ರಾಹುಲ್ ಗಾಂಧಿಯವರು ಯಾತ್ರೆಯಲ್ಲಿ ನಡೆಯುತ್ತಿದ್ದುದನ್ನು ನಿಲ್ಲಿಸಿ, ನನ್ನ ಶೂ ಲೇಸ್‌ಗಳನ್ನು ಕಟ್ಟಲು ಅನುಮತಿ ನೀಡಿದ್ದರು ಎಂದು ಹೇಳಿದ್ದಾರೆ.
As incharge of ruling BJP’s National Info Dept your tweet is a complete lie and defamatory.
The fact is that after being pointed out by Rahul ji upon my request he paused briefly so that I could tie my own shoe laces.
Delete the tweet and apologise to RG or face legal action https://t.co/HDXVii09bg
— Jitendra Singh Alwar (@JitendraSAlwar) December 21, 2022
**FAKE NEWS ALERT**
Shoes laces of @JitendraSAlwar are untied and can be seen clearly in picture. He was tying his own laces. pic.twitter.com/w71fm4nvq9
— Prashant Pratap (@iPrashantSingh) December 21, 2022
ಸುಳ್ಳು ಮಾಹಿತಿಯನ್ನು ಹರಡಿರುವ ನಿಮ್ಮ ಟ್ವೀಟ್ ಅನ್ನು ಅಳಿಸಿ ಹಾಗೂ ಕ್ಷಮೆಯಾಚಿಸಿ. ಇಲ್ಲದೇ ಹೋದಲ್ಲಿ ನೀವು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿತೇಂದ್ರ ಸಿಂಗ್ ಅವರು ಮಾಳವಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರಿಂದ ತಮ್ಮ ಶೂ ಲೇಸ್ ಅನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿಯವರ ಶೂ ಲೇಸ್ ಕಟ್ಟಿಲ್ಲ ತನ್ನದೇ ಶೂ ಲೇಸ್ ಕಟ್ಟಿಕೊಂಡ ಜಿತೇಂದ್ರ ಸಿಂಗ್ ವಿಡಿಯೋವನ್ನು BJP ಐಟಿ ಸೆಲ್ ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಟ್ವಿಟರ್ ಈ ಮೀಡಿಯಾ ಸಂದರ್ಭಕ್ಕೆ ಹೊರತಾಗಿದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ವ್ಯಂಗ್ಯವಾಡಿರುವ ಖ್ಯಾತ ಫ್ಯಾಕ್ಟ್‌ಚೆಕ್ ಪತ್ರಕರ್ತ ಮೊಹಮ್ಮದ್ ಝುಬೇರ್, “ಟ್ವಿಟರ್ ನಿಮ್ಮ ವಿಡಿಯೋವನ್ನು ಸುಳ್ಳು ಸುದ್ದಿ ಎಂದು ಫ್ಲಾಗ್ ಮಾಡಿದೆ. ಟ್ವಿಟರ್‌ನಿಂದ ಈ ಗೌರವದ ಬ್ಯಾಡ್ಜ್ ಪಡೆದುದ್ದಕ್ಕಾಗಿ ಅಭಿನಂದನೆಗಳು” ಎಂದು ಛೇಡಿಸಿದ್ದಾರೆ.
Flagged. Congratulations to BJP IT cell head @amitmalviya for the badge of Honour by Twitter. pic.twitter.com/4hxkEOxPhk
— Mohammed Zubair (@zoo_bear) December 22, 2022
ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು


