Homeಮುಖಪುಟಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಅಮಿತ್ ಶಾ ಯಾರು? ಮಮತಾ ಬ್ಯಾನರ್ಜಿ ಪ್ರಶ್ನೆ

ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಅಮಿತ್ ಶಾ ಯಾರು? ಮಮತಾ ಬ್ಯಾನರ್ಜಿ ಪ್ರಶ್ನೆ

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸುವ ಬಿಜೆಪಿ ಮುಖಂಡರ ನಡುವಿನ ಫೋನ್ ಮಾತುಕತೆ ಆಡಿಯೋವನ್ನು ಟಿಎಂಸಿ ಬಿಡುಗಡೆ ಮಾಡಿದ್ದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಈ ಆಡಿಯೋ ಚುನಾವಣಾ ಆಯೋಗಕ್ಕೆ ಮುಖಭಂಗವಾಗುವಂತಿದ್ದು ಆದರೆ ಈವರೆಗೆ ಈ ಕುರಿತು ಆಯೋಗ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಫೋನ್ ಕದ್ದಾಲಿಸಿದ್ದು ಯಾರು ಮತ್ತು ಏಕೆ ಎಂದು ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರಾದ ಶಿಶಿರ್ ಬಜೋರಿಯಾ ಮತ್ತು ಮುಕುಲ್ ರಾಯ್ ಅವರ ನಡುವಿನ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿದ್ದು ಯಾರು? ಇದು ಹೇಗೆ ಸಂಭವಿಸಿತು? ಏಕೆ ಕದ್ದಾಲಿಸಲಾಗಿದೆ. ಈ ಕುರಿತು ನಮಗೆ ಲಿಖಿತ ಉತ್ತರ ಬೇಕೆಂದು ಅಮಿತ್ ಶಾ ಆಗ್ರಹಿಸಿದ್ದಾರೆ.

ಬಿಜೆಪಿ ಮುಖಂಡ ಮುಕುಲ್ ರಾಯ್ ಅವರು ಶಿಶಿರ್ ಬಜೋರಿಯಾ ಜೊತೆ ಫೋನಿನಲ್ಲಿ ಮಾತನಾಡುತ್ತಾ, ತಮ್ಮ ಪಕ್ಷವು ಚುನಾವಣಾ ಆಯೋಗದೊಂದಿಗೆ ಚರ್ಚಿಸಬೇಕಾದ ವಿಷಯಗಳ ಪಟ್ಟಿಯಲ್ಲಿ ಮತಗಟ್ಟೆ ಏಜೆಂಟ್ ಅಥವಾ ಬೂತ್ ಏಜೆಂಟರ ಬಗ್ಗೆ ಒಂದು ನಿರ್ದಿಷ್ಟ ಆದೇಶ ನೀಡಬೇಕೆಂದು ಒತ್ತಾಯಿಸುತ್ತಾರೆ.

ಬೂತ್ ಏಜೆಂಟರು ಯಾವಾಗಲು ಅದೇ ಕ್ಷೇತ್ರದ ಮತದಾರನಾಗಿರಬೇಕು ಎಂಬ ನಿಯಮವಿದೆ. ಚುನಾವಣಾ ಆಯೋಗದೊಂದಿಗೆ ಮಾತನಾಡಿ ಅದನ್ನು ಬದಲಿಸಬೇಕು. ರಾಜ್ಯದ ಯಾವುದೇ ವ್ಯಕ್ತಿ, ಯಾವುದೇ ಬೂತ್‌ನಲ್ಲಿ ಬೇಕಾದರೂ ಏಜೆಂಟ್ ಆಗಬಹುದು ಎಂದು ಆಯೋಗ ಹೇಳುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಹಲವಾರು ಬೂತ್‌ಗಳಲ್ಲಿ ಬಿಜೆಪಿಗೆ ಬೂತ್‌ ಏಜೆಂಟರೆ ಇಲ್ಲದಂತಾಗುತ್ತದೆ ಎಂದು ಮುಕುಲ್ ರಾಯ್‌ ಹೇಳಿದ್ದು ಆಡಿಯೋದಲ್ಲಿ ಬಹಿರಂಗಗೊಂಡಿದೆ.

ಸಾಮಾನ್ಯವಾಗಿ ಯಾವುದೇ ಪಕ್ಷದ ಬೂತ್ ಏಜೆಂಟ್‌ ಆಗುವವರು ಸ್ಥಳೀಯರು ಮತ್ತು ಪರಿಚಿತರೇ ಆಗಿರುತ್ತಾರೆ. ಆದರೆ ಆಶ್ಚರ್ಯಕರ ರೀತಿಯಲ್ಲಿ ಇತ್ತೀಚೆಗೆ ಚುನಾವಣಾ ಆಯೋಗವು ರಾಜ್ಯದ ಯಾವುದೇ ವ್ಯಕ್ತಿ, ಯಾವುದೇ ಬೂತ್‌ನಲ್ಲಿ ಬೇಕಾದರೂ ಏಜೆಂಟ್ ಆಗಬಹುದು ಎಂಬ ಆದೇಶ ಜಾರಿಗೊಳಿಸಿದೆ. ಹಾಗಾಗಿ ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಟಿಎಂಸಿ ದೂರಿದೆ.

ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಗಳೆ ಇಲ್ಲ. ಹಾಗಾಗಿ 5 ಲೋಕಸಭಾ ಸದಸ್ಯರನ್ನು ಮತ್ತು ಕೇಂದ್ರ ಸಚಿವರನ್ನು ವಿಧಾನಸಭಾ ಚುನಾವಣೆಯಲ್ಲಿ ಅದು ಕಣಕ್ಕಿಳಿಸಿದೆ. ಅಲ್ಲದೇ ಅವರಿಗೆ ಬೂತ್ ಏಜೆಂಟ್‌ ಆಗಲು ಸಹ ಕಾರ್ಯಕರ್ತರಿಲ್ಲ. ಹಾಗಾಗಿ ರಾಜ್ಯದ ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಬೂತ್ ಏಜೆಂಟ್ ಆಗಬಹುದೆಂದು ಚುನಾವಣಾ ಆಯೋದಿಂದ ಆದೇಶ ಹೊರಡಿಸಿದೆ. ಇದು ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವಿನ ಅಪವಿತ್ರ ಮೈತ್ರಿಯಾಗಿದೆ ಎಂದು ಟಿಎಂಸಿ ದೂರಿದೆ.

ನಾನು ಚುನಾವಣಾ ಆಯೋಗದ ಸ್ವಾಯುತ್ತದೆ ಮತ್ತು ನಿಷ್ಪಕ್ಷಪಾತಕ್ಕೆ ಸಂಬಂಧಿಸಿದಂತೆ ಕೇಳುತ್ತಿದ್ದೇನೆ. ಚುನಾವಣಾ ಆಯೋಗವನ್ನು ಯಾರು ನಡೆಸುತ್ತಿದ್ದಾರೆ? ಅಮಿತ್ ಶಾ, ನೀವು ಅದನ್ನು ನಡೆಸುತ್ತಿದ್ದೀರಾ? ನಮಗೆ ಮುಕ್ತ ಮತ್ತು ನ್ಯಾಯಯುತ ಚುನಾವಣೆ ಬೇಕು ಆದರೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಅಮಿತ್ ಶಾ ಯಾರು? ಅವರು ಚುನಾವಣಾ ಆಯೋಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲಿ. ಚುನಾವಣಾ ಆಯೋಗವು ನಮ್ಮ ವಿರುದ್ಧ ಕೆಲಸ ಮಾಡುತ್ತಿದೆ” ಎಂದು ಮಮತಾ ಬ್ಯಾನರ್ಜಿ ಬಂಕುರಾದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲಾಗಿದೆ: ಆಡಿಯೋ ಬಿಡುಗಡೆ ಮಾಡಿದ ಟಿಎಂಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...