Homeಕರ್ನಾಟಕಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

ಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

- Advertisement -
- Advertisement -

ಕಾರವಾರದ ವಾಣಿಜ್ಯ ಬಂದರು ವಿಸ್ತರಿಸುವ “ಸಂಕಷ್ಟ ಮಾಲಾ” ಯೋಜನೆ ತಮ್ಮ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆಂಬ ಆತಂಕದಲ್ಲಿ ಸ್ಥಳೀಯರೆಲ್ಲಾ ಒಂದಾಗಿ ಬೀದಿಗಿಳಿದಿದ್ದಾರೆ! ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೆಸರಿನ ಚಂದದ ಕಡಲ ತೀರ, ಬಡ ಬೆಸ್ತರ ತುತ್ತಿನಾಧಾರವಾಗಿದ್ದ ಕಸಬು ಮತ್ತು ಕಾರವಾರದ ನೆಮ್ಮದಿ-ಸ್ವಾಸ್ಥ್ಯ ಎಲ್ಲವನ್ನು ಒಂದೇ ಬಾರಿಗೆ ಆಪೋಷನ ಪಡೆಯುವ ಈ ಯೋಜನೆ ಬೇಡವೇ ಬೇಡವೆಂದು ಆಗ್ರಹಿಸಿ ಮೊನ್ನೆ (16-01-2020) ಹತ್ತಾರು ಸಾವಿರ ಮಂದಿ ಸೇರಿ ಕಾರವಾರ ಬಂದ್ ಮಾಡಿ ಆಳುವ ಖೂಳರಿಗೆ “ಸಣ್ಣ” ಎಚ್ಚರಿಕೆ ರವಾನಿಸಿದ್ದಾರೆ!! ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಶೋ ಮ್ಯಾಮ್ ಶಾಸಕಿ ರೂಪಾಲಿ ನಾಯ್ಕ್ ಒಣ ಪ್ರತಿಷ್ಠೆಯ ಸದ್ರಿ ಕಾಮಗಾರಿ ಕಾರವಾರ ತಾಲ್ಲೂಕಿನ ಅಷ್ಟೂ ಮೀನುಗಾರರನ್ನು ಜೀವನ್ಮರಣದ ಜಂಜಾಟವಾಗಿ ಕಾಡುತ್ತಿದೆ…

ಬರೋಬ್ಬರಿ 125 ಕೋಟಿ ರೂಪಾಯಿಗಳ ಈ ಪ್ರಾಜೆಕ್ಟ್ ಮೋದಿ ಮಾಮ ತನ್ನ ಪರಮಾಪ್ತ ಬಂದರು ದಂಧೆದಾರ ಆದಾನಿಗಾಗಿಯೇ ಕೈಗೆತ್ತಿಕೊಂಡಿರುವ “ಅಭಿವೃದ್ಧಿ” ಕಾಮಗಾರಿ. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಿಸಿದ್ದು ಅಂದಿನ ಕಾಂಗ್ರೆಸ್ ಎಮ್ಮೆಲ್ಲೆ ಸತೀಶ್ ಸೈಲ್, ಪಕ್ಕಾ ಪಾಯ್ದೆಕೋರ ಉದ್ಯಮಿಯಾದ ಈ ಅದಿರು ಕಳ್ಳಸಾಗಾಣಿಕೆದಾರ ಅಂದು ಅದ್ಯಾವ ಕನಸು ಕಂಡಿದ್ದನೋ ಏನೋ? ಬಂದರು ಕಾಮಗಾರಿಯ ಅಲೆ ತಡೆಗೋಡೆಗೆ ಬೇಕಾದ ದೊಡ್ಡಗಾತ್ರದ ಶಿಲೆಕಲ್ಲು ಪೂರೈಕೆಯ ರಹಸ್ಯ ಬೇನಾಮಿ ಒಪ್ಪಂದ ಸೈಲ್ ಮಾಡಿಕೊಂಡಿದ್ದ. ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್‍ಸ್ ಪ್ರೈ.ಲಿ. ಕೆಲಸ ಶುರುಹಚ್ಚಿಕೊಂಡ ಎರಡೇ ದಿನದಲ್ಲಿ ನೂರಾರು ಲೋಡ್ ಕಲ್ಲು ಬೀಚ್‍ಗೆ ಬಂದು ಬಿದ್ದಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರಂಭಿಸಿದ ಕಾಮಗಾರಿ ಹೇಗಿತ್ತೆಂದರೆ, ಮೀನುಗಾರರು ಶಾಶ್ವತವಾಗಿ ಹೊಟ್ಟೆಪಾಡಿನ ಸಮುದ್ರ ಕೃಷಿ ಮಾಡಲಾಗದಂತಿತ್ತು!!

ಕಾರವಾರದಲ್ಲಿ ಮೀನುಗಾರ ಸಂಕುಲ ರಾಜಕೀಯವಾಗಿ ನಿರ್ಣಾಯಕ. ಎಡವಟ್ಟು ಕಾಮಗಾರಿ ಕಂಡದ್ದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಸ್ತರೆಲ್ಲಾ ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದರು. ಪೇಚಿಗೆ ಸಿಲುಕಿದ ಮಾಜಿ ಶಾಸಕ ಸೈಲ್ ತಕ್ಷಣ ಬಣ್ಣ ಬದಲಿಸಿಬಿಟ್ಟ. ಊರವರ ಹಿತೈಷಿ ಎಂಬಂತೆ ಪೋಸು ಕೊಡುತ್ತಾ ಬಂದರು ಕಾಮಗಾರಿ ವಿರುದ್ಧ ಹೇಳಿಕೆ ಒಗಾಯಿಸತೊಡಗಿದೆ. ಪ್ರತಿಭಟನಾಕಾರರ ಮಧ್ಯೆ ಸಾವಕಾಶವಾಗಿ ತೂರಿಕೊಂಡು ಬೀಚನ್ನು ಬೆಳಗ್ಗೆಯ ವಾಕಿಂಗ್, ಸಂಜೆಯ ವಿಹಾರ, ನೆಮ್ಮದಿಗಾಗಿ ಬಳಸುತ್ತಿದ್ದ ಜನರೂ ಮೀನುಗಾರರ ಜತೆ ಸೇರಿಕೊಂಡು ಪ್ರತಿಭಟನೆ ಬಿರುಸುಗೊಳಿಸಿದರು. ಬಂದರು ವಿರೋಧಿ ಹೋರಾಟಗಾರರ ಆಕ್ರೋಶ ತಮ್ಮ ನೋವಿಗೆ ಸ್ಪಂದಿಸದ ಸಂಸದ ಅನಂತ್ಮಾಣಿ ಮತ್ತು ಶಾಸಕಿ ರೂಪಾಲಿ ಮೇಲೆ ಕೇಂದ್ರೀಕೃತವಾಗಿತ್ತು. ಈ ಇಬ್ಬರು ನಾಲಾಯಕ್ ಜನಪ್ರತಿನಿಧಿಗಳ ಫೋಟೋಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರಹಾಕಿ, ಸಗಣಿ ಮೆತ್ತಿ ಸಹಜ ಸಿಟ್ಟು ವ್ಯಕ್ತಡಿಸಿದ್ದರು.

ಮೀನುಗಾರರ ಹುಡುಗ-ಹೊನ್ನಾವರದ ಪರೇಶ್ ಮೇಸ್ತನ ಸಂಶಯಾಸ್ಪದ ಸಾವನ್ನು ಸಾಬರಿಂದಾದ ಕೊಲೆ ಎಂದು ಬಿಂಬಿಸಿದ ಬಿಜೆಪಿಯ ಕೋಮು ರಾಜಕಾರಣದ ಫಲಾನುಭವಿಯಾದ ರೂಪಾಲಿಗೆ ಮೀನುಗಾರರ ತಿರುಗಿಬಿದ್ದದ್ದು ನಿದ್ದೆಗೆಡಿಸಿಬಿಟ್ಟಿತ್ತು. ಕಾರವಾರ ಬಂದ್ ದಿನ ರೂಪಾಲಿಗೆ ಕ್ಷೇತ್ರದಲ್ಲಿರುವ ಧೈರ್ಯವೇ ಇರಲಿಲ್ಲ. ಹಾಗಾಗಿ ಆಕೆ ರಾತ್ರೋರಾತ್ರಿ ಬೆಂಗಳೂರಿಗೆ ಓಡಿದ್ದಾರೆ. ಇತ್ತ ಜನರು ಪ್ರತಿಭಟನಾ ರ್ಯಾಲಿ ಹೊರಟಿದ್ದರೆ, ಅತ್ತ ಬೆಂಗಳೂರಲ್ಲಿ ರೂಪಾಲಿ ಮೇಡಮ್ಮು ಮೀನುಗಾರರ ಮಂತ್ರಿ ಶ್ರೀನಿವಾಸ ಪೂಜಾರಿ ಜತೆ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಬಂದರ ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ, ಬೀಚ್ ಬಂದರಿಗೆ ಬಳಕೆಯಾಗುವುದಿಲ್ಲ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರಾದ ಸೈಲ್ ಮತ್ತ ಅಸ್ನೋಟಿಕರ್ ದಾರಿ ತಪ್ಪಿಸುತ್ತಿದ್ದಾರೆಂದು ಪೂಜಾರಿ-ರೂಪಾಲಿ ಒಂದೇ ಸ್ವರದಲ್ಲಿ ಯುಗಳ ಆಲಾಪ ಮಾಡಿದ್ದಾರೆ. ಸುಳ್ಳು ಹೇಳಿ ತಮ್ಮ ಜನದ್ರೋಹ ಮುಚ್ಚಿಡಲು ಹವಣಿಸಿದ್ದಾರೆ.

ವಾಸ್ತವವೆಂದರೆ, ಬಂದರು ವಿರೋಧಿಗಳು ಸೈಲ್-ಅಸ್ನೋಟಿಕರ್‍ನನ್ನೂ ನಂಬುತ್ತಿಲ್ಲ. ಈ ಇಬ್ಬರು ಸಮಯಸಾಧಕರನ್ನು ಹೊರಗಿಟ್ಟೇ ಜನರು ಕಟ್ಟಿದ ಅಖಂಡ ಹೋರಾಟವಿದು. ಸೈಲ್-ಅಸ್ನೋಟಿಕರ್ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆದರೆ ಜನರು ಮಾತ್ರ ಈ ಮಾಜಿದ್ವಯರಿಗೆ ಸಭೆಗಳಲ್ಲಿ ಭಾಷಣ ಮಾಡಲಿಕ್ಕೂ ಬಿಡುತ್ತಿಲ್ಲ. ಕಾರವಾರಕ್ಕೆ ಬಂದು ಜನರಿಗೆ ಮುಖ ತೋರಿಸುವ ನೈತಿಕ ಧೈರ್ಯವೂ ಇಲ್ಲದೆ ಚಡಪಡಿಸುತ್ತಿರುವ ಶಾಸಕಿಯಮ್ಮ ಒಂದೆಡೆಯಾದರೆ, ಮತ್ತೊಂದೆಡೆ ಹಲ್ಲೆಕೋರ ಮನಸ್ಥಿತಿಯ ಸಂಸದ ಅನಂತ್ಮಾಣಿ ಬಂದರು ವಿರೋಧಿಗಳನ್ನು ಆರಂಭಿದಲ್ಲೇ ಹೊಸಕಿ ಹಾಕಬೇಕು….. ನಂಗೆ ಮತ್ತೆ ಎಂಪಿ ಆಗೋ ಆಸೆಯಿಲ್ಲ….. ಬಂದರು ಕಟ್ಟಿಯೇ ತೀರುತ್ತೇನೆ….” ಎಂದೆಲ್ಲಾ ಅಭಿವೃದ್ಧಿ ಆಟಾಟೋಪ ಪ್ರದರ್ಶಿಸುತ್ತಿದ್ದಾನೆ.

ಮೀನುಗಾರರು ವಾರದಿಂದ ಮೀನುಗಾರಿಕೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹೂಡುತ್ತಲೇ ಇದ್ದಾರೆ. ಶಾಸಕಿ ರೂಪಾಲಿ, ಸಂಸದ ಮಾಣಿಯ ಮಳ್ಳು ಮಾತುಗಾರಿಕೆಗೆ ನಗುತ್ತಿದ್ದಾರೆ. ಹೋರಾಟಗಾರರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದ ಮಂತ್ರಿ, ಸಂಸದ, ಶಾಸಕಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ಜನರ ಮುಂದೆ ಹೇಳೋದೇ ಒಂದು ಮಾಡೋದು ಮಾತ್ರ ಮತ್ತೊಂದು. ಬಂದರು ಅಧಿಕಾರಿಗಳು ತಾತ್ಕಾಲಿಕ ಮೀನು ಮಾರುಕಟ್ಟೆ ಹಿಂದಿನಿಂದ ಕಾಮಗಾರಿ ಮಾಡಲಾಗುತ್ತದೆ ಎಂದಿದ್ದರು. ಆದರೆ ಕೆಲಸ ಆಗುತ್ತಿರುವುದು ಬೀಚ್‍ನ ದಕ್ಷಿಣಕ್ಕಿರುವ ಪ್ಯಾರಾಗೋಲಾದ ಕಡೆಯಿಂದ. ಉತ್ತರ ಬದಿಯನ್ನು ಹೊಟೇಲು, ಗಾರ್ಡನ್ ಎಂದೆಲ್ಲಾ ಹಂಚಲಾಗಿದೆ. ಹೀಗಾಗಿ ಉಳಿದಿರುವುದು ಬರೀ 1 ಕಿ.ಮೀ ಬೀಚಷ್ಟೇ. ಇದರಲ್ಲಿ ಅರ್ಧ ಅಡೆಗೋಡೆಗೆ ಬಳಿಸಿದರೆ ಬಡ ಬೆಸ್ತರಿಗೆ ಮೀನುಗಾರಿಕೆಗೆ ಅವಕಾಶವಿಲ್ಲ; ವಾಕಿಂಗ್, ವಿಹಾರ ಸಾಧ್ಯವೂ ಇಲ್ಲ.

ಬಂದರು ಕಾಮಕಾರಿ ಏಕಪಕ್ಷೀಯವಾಗಿ ದಾದಾಗಿರಿಯಿಂದ ಆಡಳಿತಗಾರರು ನಡೆಸಿದ್ದಾರೆ. ಬಂದರಿನಿಂದಾಗುವ ಅರ್ಥಿಕ, ಸಾಮಾಜಿಕ ಪರಿಸರ ಪರಿಣಾಮಗಳ ಅಧ್ಯಯನವೇ ನಡೆಸಲಾಗಿಲ್ಲ. ಸಾರ್ವಜನಿಕರಿಗೆ ಉದ್ದೇಶಿತ ಬಂದರಿನ ಮಾಹಿತಿ ನೀಡಲಾಗುತ್ತಿಲ್ಲ. ಮಹತ್ವದ ಸಂಗತಿಯೆಂದರೆ, ಈ ಯೋಜನೆಗೆ ಸಿಆರ್‍ಜೆಡ್ ಸಮಿತಿಯ ಅನುಮತಿಯೇ ಸಿಕ್ಕಿಲ್ಲ. ಮರುಪರಿಶೀಲನೆಗೆ ಸಮಿತಿ ಬಂದರು ಇಲಾಖೆಗೆ ಸೂಚಿಸಿತ್ತು. ಬಂದರು ವಿಸ್ತರಣೆ ಎಂದರೆ, ದೇಶ-ವಿದೇಶದ ಬೃಹತ್ ಸರಕು ಸಾಗಾಣಿಕಾ ಹಡಗುಗಳು ಬಂದು-ಹೋಗುವ ತಾಣ. ಇಂಥ ವಾಣಿಜ್ಯ ಬಂದರಿನ ಮಗ್ಗುಲಲ್ಲಿ ಮೀನುಗಾರಿಕರ ಜೆಟ್ಟಿ ಇರಲು ಸಾಧ್ಯವೇ ಇಲ್ಲ. ವಾಣಿಜ್ಯ ಬಂದರಿನ ಸುತ್ತ ಮಜಬೂತಾದ ಆವರಣ ಗೋಡೆ, ಅದರ ಮೇಲೆ ತಂತಿ ಮುಳ್ಳಿನ ಬೇಲಿ ಹಾಕಲಾಗುತ್ತದೆ. ಸಾರ್ವಜನಿಕರ ಚಲನವಲನ. ಮೀನುಗಾರಿಕೆ ಸುತ್ತಲಿನ ಪ್ರದೇಶದಲ್ಲಿ ನಿಶೇಧಿಸಲಾಗುತ್ತದೆ. ಕಾರವಾರದ ಬಂದರು ವಿಸ್ತರಣೆಯಾದರೆ, ಬೈತ್ಕೋಲ್ ಮೀನುಗಾರಿಕಾ ಬಂದರಿಗೆ ಗಂಡಾಂತರ ಖಂಡಿತಾ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಕಾರವಾರದ 43 ಕಿ.ಮೀ ಉದ್ದದ ಕಡಲತೀರದಲ್ಲಿ ನಿರ್ಧಿಷ್ಟ ಭಾಗಗಳಷ್ಟೇ ಮೀನುಗಾರಿಕೆ ಮತ್ತು ಮೀನುಗಾರಿಕ ವಾಸ್ತವ್ಯಕ್ಕೆ ಯೋಗ್ಯವಾದವುಗಳು. ಇದರಲ್ಲಿ 33 ಕಿ.ಮೀ ತೀರಪ್ರದೇಶ ನೌಕಾನೆಲೆಗೆ ಕೊಡುವಾಗ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಈಗಿರುವ ವಾಣಿಜ್ಯ ಬಂದರಿಗಾಗಿ 1.5 ಕಿ.ಮೀ ಕಳೆದುಕೊಳ್ಳಲಾಗಿದೆ. ಇನ್ನೊಂದು ಕಿ.ಮೀ ಕಬಳಿಸಲು ಹೊಸ ಯೋಜನೆ ಬಾಯ್ತೆರೆದು ನಿಂತಿದೆ. ಪ್ರವಾಸೋದ್ಯಮದ ನೆಪದಲ್ಲಿ ಮುನ್ಸಿಪಾಲಿಟಿ ಗಾರ್ಡನ್, ರಾಕ್-ಗಾರ್ಡನ್, ಸಾಲುಮರದ ತಿಮ್ಮಕ್ಕ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ತಿಳಮಾತಿ ಬೀಚ್, ಹೋಟೆಲ್, ರೆಸಾರ್ಟ್ ಲಾಬಿಗೆ ಹಂಚಿ ಮೀನುಗಾರರ ಆಶ್ರಯ-ಕಸಬು ತಪ್ಪಿಸಲಾಗಿದೆ. ಉಳಿದಿರುವ 3.5 ಕಿ.ಮೀ ತೀರ ಪ್ರದೇಶವನ್ನು 14,500 ಮೀನುಗಾರರ ಕುಟುಂಬಗಳು ಹಂಚಿಕೊಳ್ಳಬೇಕಿದೆ. ಅಲಿಗದ್ದಾ ತೀರದಲ್ಲಿ ದೋಣಿಗಳಿಡಲಿಕ್ಕೆ ಜಾಗವಿಲ್ಲ. ಭಾರತೀಯ ಕೋಸ್ಟ್ ಗಾರ್ಡ್, ಇಂಡಿಯನ್ ಆಯಿಲ್ ಕಂಪನಿಗಳು ಕಾರವಾರ ತೀರಕ್ಕೆ ಬರುವ ಯೋಜನೆಗಳ ಸರದಿಯಲ್ಲಿವೆ. ಬೆಸ್ತರ ಪಾಲಿಗೆ ಆಪದ್ಬಾಂಧವನಂತಿದ್ದ ಕಾರವಾರ ತೀರ ಪ್ರದೇಶವನ್ನೂ ವಾಣಿಜ್ಯ ಬಂದರು ವಿಸ್ತರಣೆಗೆ ಬಲಿಗೊಟ್ಟರೆ ಸ್ಥಳೀಯ ಮೀನುಗಾರರ ಪಾಡೇನು?

ಇದೆಲ್ಲ ಶಾಸಕಿ ರೂಪಾಲಿಯಮ್ಮ, ಅನಂತ್ಮಾಣಿಯ ಮತಾಂಧ ತಲೆಬುರುಡೆಗೆ ಅರ್ಥವಾಗುತ್ತಲ್ಲ. ಅಗತ್ಯವಿರುವ ಯಾವ ಸರ್ಕಾರಿ ಏಜೆನ್ಸಿಗಳ ಅನುಮತಿಯೂ ಇಲ್ಲದೆ ಅವಸರದಲ್ಲಿ ಶುರುವಾಗಿರುವ ಬಂದರು ಯೋಜನೆಯಿಂದ ಕಾರವಾರಿಗರಿಗೆ ಯಾವ ಲಾಭವೂ ಇಲ್ಲ. ಬಿಜೆಪಿಯ ಅಭಿವೃದ್ಧಿ ಪಂಡಿತರು ಉದ್ಯೋಗಾವಕಾಶವಿದೆ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಎಷ್ಟು ಉದ್ಯೋಗ? ಯಾವ ಉದ್ಯೋಗ? ಇದಕ್ಕೆಲ್ಲ ಉತ್ತರವಿಲ್ಲ. ಅಬ್ಬಬ್ಬಾ ಎಂದರೆ ಅಮಾಯಕರನ್ನು ಶೋಷಿಸುವ ಕೂಲಿ ಕೆಲಸ ಸಿಗಬಹುದು. ಬೃಹತ್ ಬಂದರಿನಲ್ಲಿ ಮಂಗಳೂರು-ಮುಂಬೈ ಬಂದರಿನಲ್ಲಾಗುವಂಥ ಭೂಗತ ಬಾನ್ಗಡಿ ಆಗಬಹುದು. ಸಣ್ಣ ಬಂದರಿರುವಾಗಲೇ ಅಂದಿನ ಶಾಸಕ ವಸಂತ ಅಸ್ನೋಟಿಕರ್ ಮತ್ತು ಭೂಗತ ದೊರೆ ದಿಲೀಪ್ ನಾಯ್ಕ್ ಆಮದನಿಗಾಗಿ ಹೊಡೆದಾಡಿ ಹತ್ಯೆಯಾಗಿದ್ದು ನೆನಪಿದೆಯಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...