ಅಂಡಮಾನ್ ನಿಕೋಬಾರ್‌ನ ಉತ್ತರ ಸೆಂಟಿನೆಲ್ ದ್ವೀಪದ ನಿರ್ಬಂಧಿತ ಬುಡಕಟ್ಟು ಮೀಸಲು ಪ್ರದೇಶವನ್ನು ಪ್ರವೇಶಿಸಿದ ಆರೋಪದ ಮೇಲೆ ಅಮೆರಿಕದ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪಿಟಿಐ ಬುಧವಾರ ವರದಿ ಮಾಡಿದೆ. ಆರೋಪಿಯನ್ನು 24 ವರ್ಷದ ಮೈಖೈಲೊ ವಿಕ್ಟೋರೊವಿಚ್ ಪಾಲಿಯಕೋವ್ ಎಂದು ಗುರುತಿಸಲಾಗಿದೆ.
ಆರೋಪಿಯು ಸೋಮವಾರ ಅಪರಾಧ ತನಿಖಾ ಇಲಾಖೆಯು ಅನುಮತಿಯಿಲ್ಲದೆ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿ ತಿಳಿಸಿದೆ.
ಉತ್ತರ ಸೆಂಟಿನೆಲ್ ದ್ವೀಪಕ್ಕೆ ಪರವಾನಗಿ ಇಲ್ಲದೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಸೆಂಟಿನೆಲೀಸ್ ಬುಡಕಟ್ಟು ಜನಾಂಗದ ಈ ಸಮುದಾಯದ ಜನಸಂಖ್ಯೆ 2011 ರಲ್ಲಿ ಸುಮಾರು 40 ರಷ್ಟು ಇತ್ತು. ಈ ಸಮುದಾಯವು ಹೊರಗಿನವರೊಂದಿಗೆ ಸಂಪರ್ಕವನ್ನು ವಿರೋಧಿಸುತ್ತಾರೆ.
ಆರೋಪಿ ಪಾಲಿಯಕೋವ್ ಮಾರ್ಚ್ 26 ರಂದು ಪೋರ್ಟ್ ಬ್ಲೇರ್‌ಗೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅವರು ಶನಿವಾರ ಬೆಳಿಗ್ಗೆ 1 ಗಂಟೆ ಸುಮಾರಿಗೆ ಕುರ್ಮದೇರಾ ಬೀಚ್‌ನಿಂದ ಕೊಬ್ಬರಿ ಮತ್ತು ಕೋಕಾ-ಕೋಲಾ ಪಾನೀಯದ ಡಬ್ಬಿಯನ್ನು ತೆಗೆದುಕೊಂಡು “ಸೆಂಟಿನೆಲೀಸ್‌ಗೆ ಅರ್ಪಣೆ” ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೋಲಿಯಕೋವ್ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಉತ್ತರ ಸೆಂಟಿನೆಲ್ ದ್ವೀಪದ ಈಶಾನ್ಯ ತೀರವನ್ನು ತಲುಪಿ ಒಂದು ಗಂಟೆ ಕಡಲಾಚೆಯಲ್ಲಿಯೇ ಇದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲಿ ಅವರು ತಿರುಗಾಡಿ ಶಿಳ್ಳೆ ಹೊಡೆದರೂ ಯಾರೊಬ್ಬರನ್ನೂ ನೋಡಲಿಲ್ಲ ಎಂದು ಅವರು ಹೇಳಿದ್ದಾರೆ.
ಇದರ ನಂತರ, ಪೋಲಿಯಕೋವ್ ಸುಮಾರು ಐದು ನಿಮಿಷಗಳ ಕಾಲ ದಡಕ್ಕೆ ಇಳಿದು ತನ್ನೊಂದಿಗೆ ತಂದಿದ್ದ ಕಾಣಿಕೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಅವರು ಮರಳಿನ ಮಾದರಿಗಳನ್ನು ಸಂಗ್ರಹಿಸಿ ವೀಡಿಯೊ ರೆಕಾರ್ಡ್ ಮಾಡಿ ತಮ್ಮ ದೋಣಿಗೆ ಹಿಂತಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಕುರ್ಮದೇರಾ ಬೀಚ್‌ಗೆ ಹಿಂತಿರುಗುವ ಪ್ರಯಾಣವನ್ನು ಪ್ರಾರಂಭಿಸಿದ್ದ ಅವರು ಸಂಜೆ 7 ಗಂಟೆಗೆ ತಲುಪಿದ್ದರು. ಈ ವೇಳೆ ಮೀನುಗಾರರು ಅವರನ್ನು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೋಲಿಯಕೋವ್ ಶನಿವಾರ ಕುರ್ಮದೇರಾ ಬೀಚ್ ಬಳಿ ಸಣ್ಣ ಎಂಜಿನ್ ಹೊಂದಿದ ಗಾಳಿ ತುಂಬಬಹುದಾದ ಏಕ ಆಸನದ ದೋಣಿಯೊಂದಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಅವರ ಬಗ್ಗೆ ಮತ್ತು ಮೀಸಲು ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡುವ ಅವರ ಉದ್ದೇಶದ ಬಗ್ಗೆ ನಮಗೆ ಹೆಚ್ಚಿನ ವಿವರಗಳು ಸಿಗುತ್ತಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅವರು ತಂಗಿದ್ದಾಗ ಅವರು ಬೇರೆ ಎಲ್ಲಿಗೆ ಭೇಟಿ ನೀಡಿದ್ದರು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ.” ಎಂದು ಪೊಲೀಸ್ ಮಹಾನಿರ್ದೇಶಕ ಎಚ್‌ಎಸ್ ಧಲಿವಾಲ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ಪೋರ್ಟ್ ಬ್ಲೇರ್‌ನಲ್ಲಿರುವ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಧಲಿವಾಲ್ ಹೇಳಿದ್ದಾರೆ. ಪಾಲಿಯಕೋವ್ ಅವರ ಬಳಿ ದೊರೆತ ಕ್ಯಾಮೆರಾ ದೃಶ್ಯಾವಳಿಗಳು ಅವರು ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಇಳಿದಿರುವುದನ್ನು ತೋರಿಸುತ್ತವೆ ಎಂದು ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೂಲನಿವಾಸಿ ಬುಡಕಟ್ಟುಗಳ ರಕ್ಷಣೆ ತಿದ್ದುಪಡಿ ನಿಯಂತ್ರಣ, 2012 ರ ವಿಭಾಗಗಳೊಂದಿಗೆ ವಿದೇಶಿಯರ ಕಾಯ್ದೆ, 1946 ರ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತಿರೂರ್‌ನ ಬುಡಕಟ್ಟು ಕಲ್ಯಾಣ ಅಧಿಕಾರಿ ಪ್ರೋಣಬ್ ಸಿರ್ಕಾರ್ ಅವರು ಓಗ್ರಬ್ರಾಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಂಡಮಾನ್ ನಿಕೋಬಾರ್‌ನ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗಾಜಾದ ‘ವಿಶಾಲ ಪ್ರದೇಶಗಳ’ ವಶಕ್ಕೆ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ನಿವಾಸಿಗಳು ಹೊರಹೋಗಲು ಆದೇಶಿಸಿದ ಇಸ್ರೇಲ್
ಗಾಜಾದ ‘ವಿಶಾಲ ಪ್ರದೇಶಗಳ’ ವಶಕ್ಕೆ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ನಿವಾಸಿಗಳು ಹೊರಹೋಗಲು ಆದೇಶಿಸಿದ ಇಸ್ರೇಲ್

