ಆಂಧ್ರಪ್ರದೇಶ ಸರ್ಕಾರವು ಹೊಸದಾಗಿ ರಚಿಸಿರುವ ಜಿಲ್ಲೆಗೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಹೆಸರು ಇಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಗುಂಪೊಂದು, ಅಮಲಾಪುರಂ ಪಟ್ಟಣದಲ್ಲಿ ರಾಜ್ಯ ಸಾರಿಗೆ ಸಚಿವ ಪಿ ವಿಶ್ವರೂಪ್ ಅವರ ಮನೆಗೆ ಬೆಂಕಿ ಹಚ್ಚಿದ್ದು ಮಂಗಳವಾರ ವರದಿಯಾಗಿದೆ.
ಹೊಸದಾಗಿ ರಚಿಸಲಾದ ಕೋನಸೀಮಾ ಜಿಲ್ಲೆಯನ್ನು ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡಲು ಸರ್ಕಾರವು ಉದ್ದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರತಿಭಟನಾಕಾರರು ಪೊಲೀಸ್ ವಾಹನ ಮತ್ತು ಶಿಕ್ಷಣ ಸಂಸ್ಥೆಯ ಬಸ್‌ಗೂ ಬೆಂಕಿ ಹಚ್ಚಿದ್ದು, ಕಲ್ಲು ತೂರಾಟದಿಂದ ಹಲವು ಪೊಲೀಸರು ಗಾಯಗೊಂಡಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಪೊಲೀಸರು ಸಚಿವರು ಮತ್ತು ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಇದನ್ನೂ ಓದಿ: ಬರಗೂರು, ದೇವನೂರರ ಅವಮಾನ ಮಾಡಿದರೆ ಸಹಿಸಲ್ಲ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ
ಘಟನೆಯಲ್ಲಿ 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದು ದುರದೃಷ್ಟಕರ. ನಾವು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ತರುತ್ತೇವೆ ಎಂದು ರಾಜ್ಯ ಗೃಹ ಸಚಿವ ತನೇಟಿ ವನಿತಾ ಹೇಳಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ಮತ್ತು ಸಮಾಜ ವಿರೋಧಿಗಳು ಬೆಂಕಿ ಹಚ್ಚಲು ಪ್ರಚೋದನೆ ನೀಡಿದ್ದಾರೆ ಎಂದು ವನಿತಾ ಆರೋಪಿಸಿದ್ದಾರೆ.
Andhra Minister's House Set On Fire Amid Violence Over Renaming District https://t.co/j5L9hEawiE pic.twitter.com/KVqHcPqmpa
— NDTV (@ndtv) May 24, 2022
ಏಪ್ರಿಲ್ 4 ರಂದು, ಹೊಸ ಕೋನಸೀಮಾ ಜಿಲ್ಲೆಯನ್ನು ಹಿಂದಿನ ಪೂರ್ವ ಗೋದಾವರಿ ಜಿಲ್ಲೆಯಿಂದ ವಿಭಜಿಸಿ ರಚಿಲಾಗಿತ್ತು. ಕಳೆದ ವಾರ ರಾಜ್ಯ ಸರ್ಕಾರವು ಕೋನಸೀಮವನ್ನು ಬಿ.ಆರ್.ಅಂಬೇಡ್ಕರ್ ಕೋನಸೀಮ ಜಿಲ್ಲೆ ಎಂದು ಮರುನಾಮಕರಣ ಮಾಡಲು ಕೋರಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತು. ಜೊತೆಗೆ ಯಾವುದೇ ಆಕ್ಷೇಪಣೆಗಳನ್ನು ಜನರಿಂದ ಆಹ್ವಾನಿಸಿತ್ತು.
ಇದನ್ನೂ ಓದಿ: ‘ಸಚಿವ ಬಿಸಿ ನಾಗೇಶ್ ತಪ್ಪು ಮಾಹಿತಿ ನೀಡಿದ್ದಾರೆ’: ಪಠ್ಯಪುಸ್ತಕದ ಬಗ್ಗೆ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ
ಕೋನಸೀಮಾ ಸಾಧನಾ ಸಮಿತಿಯು ಜಿಲ್ಲೆಯ ಮರುನಾಮಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಕೋನಸೀಮೆ ಹೆಸರನ್ನೆ ಉಳಿಸಿಕೊಳ್ಳಲು ಬಯಸಿದೆ. ಸಮಿತಿಯು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಮರುನಾಮಕರಣ ವಿರೋಧಿಸಿ ಜಿಲ್ಲಾಧಿಕಾರಿ ಹಿಮಾಂಶು ಶುಕ್ಲಾ ಅವರಿಗೆ ಮನವಿ ಸಲ್ಲಿಸಲು ಕೋರಿದೆ.



Samvidana virodhigalu
B R Ambdekar virodhigala sadantra
This is not going good for our nation India – Construction – Dr. B R Ambedkar , these three powerful words are each other don’t try to make seperat please.
Ok thanks a lot