Homeಮುಖಪುಟಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ: ಇಂತಹ ಪಠ್ಯದಲ್ಲಿ ನನ್ನ ಪಾಠ ಸೇರಿಸಬೇಡಿ- ಜಿ. ರಾಮಕೃಷ್ಣ

ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ: ಇಂತಹ ಪಠ್ಯದಲ್ಲಿ ನನ್ನ ಪಾಠ ಸೇರಿಸಬೇಡಿ- ಜಿ. ರಾಮಕೃಷ್ಣ

- Advertisement -
- Advertisement -

ಪಠ್ಯ ಪುನರ್ ಪರಿಷ್ಕರಣೆ ವಿವಾದದಿಂದಾಗಿ ನನ್ನ ಪಠ್ಯ ಕೈ ಬಿಡಿ ಎಂದು ದೇವನೂರ ಮಹಾದೇವರವರು ಪತ್ರ ಬರೆದ ಬೆನ್ನಲ್ಲೆ ಮತ್ತು ಹಿರಿಯ ಸಾಹಿತಿ ಜಿ.ರಾಮಕೃಷ್ಣ ಕೂಡ ಅದೇ ಹಾದಿ ತುಳಿದಿದ್ದಾರೆ. ಅವರು ಬರೆದಿರುವ ಯಾವುದೇ ಪಠ್ಯ ಸೇರಿಸಬೇಡಿ ಎಂದು ತಾಕೀತು ಮಾಡಿದ್ದಾರೆ.

ಅವರು ಭಗತ್ ಸಿಂಗ್ ಕುರಿತು ಬರೆದಿದ್ದ ಪಠ್ಯವನ್ನು ಕೈಬಿಡಲಾಗಿದೆ ಎಂಬ ಚರ್ಚೆ ನಡೆದಿತ್ತು. ನಂತರ ಅದನ್ನು ಪುನಃ ಸೇರಿಸಲಾಗಿದೆ ಎಂದು ಬಿ.ಸಿ ನಾಗೇಶ್ ಹೇಳಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಜಿ.ರಾಮಕೃಷ್ಣರವರು ಖಾರವಾಗಿ ಪ್ರತಿಕ್ರಿಯಿಸಿ ಪತ್ರ ಬರೆದಿದ್ದಾರೆ.

ಅವರು ಬರೆದ ಪತ್ರದ ಪೂರ್ಣ ಪಠ್ಯ ಇಲ್ಲಿದೆ.

ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ತಥಾಕಥಿತ ಪರಿಷ್ಕರಣೆಯು ತೀರಾ ಅಪಾಮಾರ್ಗದಲ್ಲಿ ಸಾಗುತ್ತಿರುವುದು ಜಗಜ್ಜಾಹೀರಾಗಿದೆ. ಅದು ಕೇವಲ ಅಬದ್ಧ ಮತ್ತು ಅವೈಚಾರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ. ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತವೆಂದು ಭಾವಿಸಿ ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿಕೊಂಡಿದ್ದರು ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲವೆಂಬುದನ್ನು ಖಚಿತಪಡಿಸುತ್ತಿದ್ದೇನೆ.

ಜಿ. ರಾಮಕೃಷ್ಣ
(ಡಾ| ಜಿ.. ರಾಮಕೃಷ್ಣ )

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...