Homeಕರ್ನಾಟಕಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ: ಪ್ರಿಯಾಂಕ್‌ ಖರ್ಗೆ ಆಕ್ರೋಶ

ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ: ಪ್ರಿಯಾಂಕ್‌ ಖರ್ಗೆ ಆಕ್ರೋಶ

- Advertisement -
- Advertisement -

ಬಲಪಂಥೀಯ ಟ್ರೋಲರ್‌ ರೋಹಿತ್‌ ಚಕ್ರತೀರ್ಥ ಅವರ ಮುಖಾಂತರ ಶಾಲಾ ಪಠ್ಯ ಪುಸ್ತಕವನ್ನು ಪರಿಷ್ಕರಿಸಿರುವ ಸರ್ಕಾರ ನಿರ್ಧಾರದ ವಿರುದ್ಧದ ಪ್ರತಿಭಟನೆ ಇನ್ನಷ್ಟು ಭುಗಿಲೆದ್ದಿದೆ. ಈ ಬಗ್ಗೆ ಬುಧವಾರ ಆಕ್ರೊಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್‌‌ ಖರ್ಗೆ, ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರವು ಶಾಲೆಗಳನ್ನು ಮತ್ತು ಮಕ್ಕಳ ಮನಸನ್ನು ರಾಜಕೀಯ ಪ್ರಯೋಗ ಶಾಲೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಮೂಲಭೂತವಾಗಿ ಬೇಕಾಗಿರುವ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಸೂಚಿಸಿರುವ ಅವರು, ಹಲವು ವಿಷಯಗಳನ್ನು ಪಟ್ಟಿಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಶಾಲೆ ಶುರುವಾದರೂ ಮಕ್ಕಳಿಗೆ ಸಮವಸ್ತ್ರವಿಲ್ಲ. ಸೈಕಲ್ ವಿತರಣೆ ಇಲ್ಲ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ. ಪಠ್ಯಪುಸ್ತಕ ಸಂಪೂರ್ಣ ವಿತರಣೆ ಇಲ್ಲ. ಶಾಲೆಗಳಿಗೆ ಮೂಲಸೌಕರ್ಯವಿಲ್ಲ. ಶಿಕ್ಷಕರ ಕೊರತೆ ನೀಗಿಸಲಿಲ್ಲ. ಕಲಿಕಾ ಸಾಮಗ್ರಿಗಳಿಲ್ಲ” ಎಂಬ ಅಂಶಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ: ಇಂತಹ ಪಠ್ಯದಲ್ಲಿ ನನ್ನ ಪಾಠ ಸೇರಿಸಬೇಡಿ- ಜಿ. ರಾಮಕೃಷ್ಣ

“ಗ್ರಾಮಗಳು ಶಿಕ್ಷಿತವಾದರೆ ರಾಜ್ಯ ಶಿಕ್ಷಿತವಾಗುತ್ತದೆ, ರಾಜ್ಯ ಶಿಕ್ಷಿತವಾದರೆ ದೇಶ ಸುಶಿಕ್ಷಿತವಾಗುತ್ತದೆ. ಆದರೆ ಶೈಕ್ಷಣಿಕ ಸೌಕರ್ಯ ಒದಗಿಸುವ ಬದಲು ಸಂಘದ ಸೂಚನೆಯಂತೆ ರಾಜಕೀಯ ಸಿದ್ದಾಂತ ತುಂಬಿಸಲು ಸರ್ಕಾರ ಹವಣಿಸುತ್ತಿದೆ. ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...