ಚಂದ್ರಬಾಬು ನಾಯ್ಡು ನೇತೃತ್ವದ ರಾಜ್ಯ ಸರ್ಕಾರವು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಗೃಹಬಂಧನದಲ್ಲಿ ಇರಿಸಿದೆ ಎಂದು ಬುಧವಾರ ಆರೋಪಿಸಿದ್ದಾರೆ. ವಿಜಯವಾಡದ ಹೊರವಲಯದಲ್ಲಿರುವ ಕೇಸರಪಲ್ಲಿಯಲ್ಲಿ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ ಮುಂಜಾನೆ ಉದ್ದಂಡರಾಯುನಿಪಾಲಂ ಗ್ರಾಮಕ್ಕೆ ಭೇಟಿ ನೀಡದಂತೆ ತಡೆಯಲು ಪೊಲೀಸ್ ಸಿಬ್ಬಂದಿಯನ್ನು ಅವರ ಮನೆಯ ಹೊರಗೆ ನಿಯೋಜಿಸಲಾಗಿತ್ತು ಎಂದು ದಿ ಹಿಂದೂ ವರದಿ ಮಾಡಿದೆ. ಅಮರಾವತಿ ರಾಜಧಾನಿ ಕಾಮಗಾರಿಗಳನ್ನು ಪುನರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
“ನಮ್ಮ ರಾಜಧಾನಿಯ ಕಾರ್ಯವಿಧಾನಗಳನ್ನು ಕೇಳಲು ನಾನು ಪಕ್ಷದ ಕಚೇರಿಗೆ ಹೋಗುತ್ತಿರುವಾಗ ನೀವು ನಿಮ್ಮ ಪೊಲೀಸರೊಂದಿಗೆ ನನ್ನನ್ನು ಏಕೆ ತಡೆಯುತ್ತಿದ್ದೀರಿ?” ಎಂದು ಶರ್ಮಿಳಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಆಂಧ್ರಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
“ನೀವು ನನ್ನನ್ನು ಏಕೆ ಗೃಹಬಂಧನದಲ್ಲಿ ಇರಿಸಿ ಹೊರಗೆ ಬರದಂತೆ ತಡೆದಿದ್ದೀರಿ..? ನನ್ನ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲು ನೀವು ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದು ಅವರು ಹೇಳಿದ್ದಾರೆ.
కాంగ్రెస్ పార్టీ 'అమరావతి క్యాపిటల్ కమిటీ' ప్రకటించి రెండు రోజులే అవుతుంది.. ఇంకా పార్టీ భవిష్యత్ కార్యాచరణ ప్రకటించకుండానే కూటమి ప్రభుత్వం భయపడుతుంది. ప్రధానమంత్రి మోడీ గారి అమరావతి పర్యటన నేపథ్యంలో మన రాజధాని కోసం ఏం అడగాలి అనే విధివిధానాలు కోసం పార్టీ కార్యాలయానికి… pic.twitter.com/UWe41DfzYQ
— YS Sharmila (@realyssharmila) April 30, 2025
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಿಳಾ, ಕಾಂಗ್ರೆಸ್ ಈ ಪ್ರದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಯೋಜನೆಗಳನ್ನು ರೂಪಿಸಲು ಅಮರಾವತಿ ರಾಜಧಾನಿ ಸಮಿತಿಯನ್ನು ರಚಿಸಿದೆ ಎಂದು ಹೇಳಿದ್ದಾರೆ.
“ಆದರೆ ಸಮ್ಮಿಶ್ರ ಸರ್ಕಾರವು ಕಾಂಗ್ರೆಸ್ ಸಮಿತಿಗೆ ಏಕೆ ಹೆದರುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ?. ಆಂಧ್ರಪ್ರದೇಶದಲ್ಲಿ ಸಭೆಗಳನ್ನು ನಡೆಸುವುದು ಮತ್ತು ಜನರ ಸಮಸ್ಯೆಗಳನ್ನು ಚರ್ಚಿಸುವುದರ ಮೇಲೆ ಯಾವುದೇ ನಿಷೇಧ” ಇದೆಯೇ” ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಕೇಳಿದ್ದಾರೆ.
2014 ರಲ್ಲಿ ರಾಜ್ಯ ವಿಭಜನೆಯಾದ ನಂತರ ಮತ್ತು ಹಳೆಯ ರಾಜಧಾನಿ ಹೈದರಾಬಾದ್ ತೆಲಂಗಾಣದ ಭಾಗವಾದ ನಂತರ ಆಂಧ್ರಪ್ರದೇಶ ಸರ್ಕಾರಕ್ಕೆ ಹೊಸ ಪ್ರಧಾನ ಕಚೇರಿಯ ಅಗತ್ಯವಿತ್ತು. ಆ ಸಮಯದಲ್ಲಿ, ಚಂದ್ರಬಾಬು ನಾಯ್ಡು ನೇತೃತ್ವದ ಹಿಂದಿನ ತೆಲುಗು ದೇಶಂ ಪಕ್ಷದ ಸರ್ಕಾರವು ಅಮರಾವತಿಯನ್ನು ಹೊಸ ರಾಜಧಾನಿಯಾಗುವುದಾಗಿ ಘೋಷಿಸಿತ್ತು.
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ 2019 ರಲ್ಲಿ ಮುಖ್ಯಮಂತ್ರಿಯಾದ ನಂತರ, ರಾಜಧಾನಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಯಿತು. ವಿಶಾಖಪಟ್ಟಣದಲ್ಲಿ ಕಾರ್ಯಾಂಗ ರಾಜಧಾನಿ, ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ ಮತ್ತು ಕರ್ನೂಲ್‌ನಲ್ಲಿ ನ್ಯಾಯಾಂಗ ರಾಜಧಾನಿಯನ್ನು ರಚಿಸಲು ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು 2020 ರಲ್ಲಿ ಪ್ರಸ್ತಾಪಿಸಲಾಯಿತು.
ಆದಾಗ್ಯೂ, ಹೊಸ ರಾಜಧಾನಿಗಾಗಿ 30,000 ಎಕರೆಗಳಿಗೂ ಹೆಚ್ಚು ಭೂಮಿಯನ್ನು ನೀಡಿದ ಅಮರಾವತಿಯ ರೈತರು ಈ ನಿರ್ಧಾರವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಮೊರೆಹೋದ ನಂತರ ರಾಜ್ಯ ಸರ್ಕಾರವು 2021 ರಲ್ಲಿ ಮಸೂದೆಯನ್ನು ಹಿಂತೆಗೆದುಕೊಂಡಿತು. ಮೂರು ರಾಜಧಾನಿ ಮಸೂದೆಯ ವಿರುದ್ಧ ಹೈಕೋರ್ಟ್‌ನಲ್ಲಿ 55 ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
2022 ರಲ್ಲಿ, ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2014 ಮತ್ತು ಭೂ ಸಂಗ್ರಹ ನಿಯಮಗಳು, 2015 ರ ನಿಬಂಧನೆಗಳ ಅಡಿಯಲ್ಲಿ ಆರು ತಿಂಗಳೊಳಗೆ ಅಮರಾವತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ರಾಜಧಾನಿ ಪ್ರದೇಶವಾಗಿ ಅಭಿವೃದ್ಧಿಪಡಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿ; ‘ಅಲ್ಲಾಹು ಅಕ್ಬರ್’ ಎಂದ ಜಿಪ್‌ಲೈನ್ ಆಪರೇಟರ್ ವಿಚಾರಣೆ ನಡೆಸಿದ ಎನ್‌ಐಎ
ಪಹಲ್ಗಾಮ್ ಭಯೋತ್ಪಾದಕ ದಾಳಿ; ‘ಅಲ್ಲಾಹು ಅಕ್ಬರ್’ ಎಂದ ಜಿಪ್‌ಲೈನ್ ಆಪರೇಟರ್ ವಿಚಾರಣೆ ನಡೆಸಿದ ಎನ್‌ಐಎ

