ದಲಿತ ಯುವಕ ಪುಲಿ ಸಾಗರ್ ವಿರುದ್ಧ ಆಂಧ್ರಪರ್ದೇಶದ ರಾಜಮಹೇಂದ್ರವರಂ ಪೊಲೀಸರ ದೌರ್ಜನ್ಯದ ಬಗ್ಗೆ ವೈಎಸ್‌ಆರ್ ಕಾಂಗ್ರೆಸ್ ನಿಯೋಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಸಂಸದರಾದ ಎಂ ಗುರುಮೂರ್ತಿ, ಗೊಲ್ಲ ಬಾಬು ರಾವ್, ಪಿಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಮಾಜಿ ಸಂಸದರಾದ ಮಾರ್ಗಣಿ ಭರತ್ ಮತ್ತು ಗೋರಂಟ್ಲ ಮಾಧವ್ ಸೇರಿದಂತೆ ವೈಎಸ್‌ಆರ್‌ಸಿಪಿ ನಾಯಕರ ನಿಯೋಗವು ರಾಷ್ಟ್ರೀಯ ಎಸ್‌ಸಿ ಆಯೋಗದ ಅಧ್ಯಕ್ಷ ಕಿಶೋರ್ ಮಕ್ವಾನಾ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷೆ ವಿಜಯ ಭಾರತಿ ಸಯಾನಿ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ವೈಎಸ್‌ಆರ್‌ಸಿಪಿ ನಿಯೋಗದ ಜತೆಗಿದ್ದ ದಲಿತ ಯುವಕ ಆಯೋಗಕ್ಕೆ ತಮಗಾದ ಸಂಕಷ್ಟವನ್ನು ವಿವರಿಸಿದರು. ಸಾಗರ್ ಬಿ.ಎಸ್‌ಸಿ ಮತ್ತು ಬಿ.ಎಡ್. ಪದವಿ ಪಡೆದಿದ್ದಾರೆ.
ಟಿಡಿಪಿ ಶಾಸಕ ಆದಿರೆಡ್ಡಿ ಶ್ರೀನಿವಾಸ್ ಅವರ ಪ್ರವಾಹ ಪರಿಹಾರದ ಹಕ್ಕುಗಳನ್ನು ಪ್ರಶ್ನಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಅವರನ್ನು ಪ್ರಕಾಶ್ ನಗರ ಪೊಲೀಸ್ ಠಾಣೆಗೆ ಕರೆಸಲಾಯಿತು ಎಂದು ಪುಲಿ ಕೃಪಾ ಆನಂದ್ ಸಾಗರ್ ಹೇಳಿದರು. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಬಟ್ಟೆ ಬಿಚ್ಚಿಸಿ ಮಹಿಳಾ ಕಾನ್‌ಸ್ಟೆಬಲ್‌ಗಳ ಕಾವಲಿರುವ ಸೆಲ್‌ನಲ್ಲಿ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್ ಎಸ್‌ಕೆ ಬಾಜಿ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಾಗರ್ ಹೇಳಿಕೊಂಡಿದ್ದಾರೆ.
“ಕೃಷ್ಣನಗರ, ಬ್ರದರೆನ್ ಚರ್ಚ್ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು, ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ರಾಜಾಜಿನಗರ ಶಾಸಕರು ಮಾಡಿರುವ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ನಂತರ ಪ್ರಕಾಶ್ ನಗರ ಪೊಲೀಸ್ ಠಾಣೆಗೆ ಕರೆಸಲಾಯಿತು” ಎಂದು ಸಾಗರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
“ಠಾಣೆಗೆ ಬಂದ ಮೇಲೆ, ನನಗೆ ಚಿತ್ರಹಿಂಸಡ ನೀಡಲಾಯಿತು. ಅಮಾನುಷವಾಗಿ ಥಳಿಸಿ ವಿವಸ್ತ್ರಗೊಳಿಸಲಾಯಿತು. ಈ ವೇಳೆ ಶಾಸಕ ಆದಿರೆಡ್ಡಿ ಶ್ರೀನಿವಾಸ್ ಹಿಂಬಾಲಕರು ಬಂದರು, ಪೋಲೀಸ್ ಠಾಣೆಯಲ್ಲಿ ನನ್ನನ್ನು ಅರೆಬೆತ್ತಲೆ ಭಂಗಿಯಲ್ಲಿ ನೋಡಿ, ನಗುತ್ತಾ ಠಾಣೆಯಿಂದ ಹೊರಟು ಹೋದರು. ಈ ಕ್ರಮಗಳು ಸ್ವಾತಂತ್ರ್ಯದ ಘನತೆಯ ಹಕ್ಕನ್ನು ತೀವ್ರವಾಗಿ ಉಲ್ಲಂಘಿಸುತ್ತವೆ ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.
రాజమండ్రికి చెందిన సాగర్ ను అరెస్ట్ చేసి, బండబూతులు తిట్టి, చిత్రహింసలు గురిచేసి దారుణంగా కొట్టిన CI బాజీలాల్ పై చర్యలు తీసుకోవాలి అని SC కమిషన్ మరియు NHRC కి పిర్యాదు చేయడం జరిగింది.#YSRCPLegalCell #YSRCP #AndhraPradesh https://t.co/cw6A9cfXo6 pic.twitter.com/x4Ucy5Efj5
— YSRCP Legal Cell (@YSRCPLegalCell) December 9, 2024
“ಸಿ.ಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ನನ್ನ ಜಾತಿಯನ್ನು ಗುರಿಯಾಗಿಸಿಕೊಂಡು ಅಸಂಸದೀಯ ಭಾಷೆ ಬಳಸಿ, ಎರಲಂಜಕೊಡಕ, ಭಡ್ಕೋ, ಸೇರಿದಂತೆ ಹಲವು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬೆಳಿಗ್ಗೆ 11:30 ರಿಂದ ರಾತ್ರಿ 09:18 ರವರೆಗೆ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರವಾಗಿ ಬಂಧಿಸಲಾಯಿತು. ನಾನು ಸಂಜೆ 05:00 ಗಂಟೆಯವರೆಗೆ ನನ್ನ ಬಂಧನದ ಬಗ್ಗೆ ಯಾರಿಗೂ ತಿಳಿಸಲು ಅವರು ನನಗೆ ಅವಕಾಶ ನೀಡಲಿಲ್ಲ, ಇದು ನನ್ನ ಹಕ್ಕಿನ ಉಲ್ಲಂಘನೆಯಾಗಿದೆ, ನಂತರ ನನ್ನ ವಕೀಲರು ಪೊಲೀಸ್ ಠಾಣೆಗೆ ಬಂದರು” ಎಂದು ತಮ್ಮ ದೂರಿನಲ್ಲಿ ಸಾಗರ್ ವಿವರಿಸಿದ್ದಾರೆ.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವೈಎಸ್‌ಆರ್‌ಸಿಪಿ ಮುಖಂಡರು, ಪೊಲೀಸರ ದರ್ಪವನ್ನು ಖಂಡಿಸಿದರು.
“ಜೀವಿಸುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಸಾಗರ್ ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯು ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ” ಎಂದು ವೈಎಸ್‌ಆರ್‌ಸಿಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಹಿರಿಯ ಸಾಹಿತಿ ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ – ತಮಿಳನಾಡು ಸರ್ಕಾರ ಘೋಷಣೆ


