Homeಆರೋಗ್ಯಆಂಧ್ರಪ್ರದೇಶ: ಅರ್ಧ ಯಕೃತ್ ದಾನ ಮಾಡಿ ತಂದೆ ಜೀವ ಉಳಿಸಿದ ಮಗಳು

ಆಂಧ್ರಪ್ರದೇಶ: ಅರ್ಧ ಯಕೃತ್ ದಾನ ಮಾಡಿ ತಂದೆ ಜೀವ ಉಳಿಸಿದ ಮಗಳು

- Advertisement -
- Advertisement -

ಡಿಕಂಪೆನ್ಸೇಟೆಡ್ ಸಿರೋಸಿಸ್ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಉಳಿಸಿಕೊಳ್ಳಲು, 21 ವರ್ಷದ ಯುವತಿಯೊಬ್ಬಳು ತನ್ನ ಅರ್ಧ ಯಕೃತ್ (ಲಿವರ್) ಅನ್ನು ಕಸಿ ಮಾಡಿಸಿ, ತಂದೆಗೆ ಅಳವಡಿಸಿರುವ ಮಾನವೀಯ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 

“ಅಧಿಕ ರಕ್ತದೊತ್ತಡದಿಂದಾಗಿ ನನ್ನ ತಂದೆಗೆ ಯಕೃತ್ತಿನ ವೈಫಲ್ಯವಾಗಿತ್ತು. ಅಲ್ಲದೆ, ಅವರು ಕಾಮಾಲೆ ಮತ್ತು ಹೊಟ್ಟೆಯಲ್ಲಿ ದ್ರವದ ಶೇಖರಣೆಯಿಂದ ಬಳಲುತ್ತಿದ್ದರು. ನನ್ನ ಯಕೃತ್ತನ್ನು ಕಸಿ ಮಾಡಿಸಿ ಅಳವಡಿಸುವುದರಿಂದ ನಾನು ನನ್ನ ತಂದೆಯನ್ನು ಬದುಕಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದರು. ಹಾಗೆಯೇ ಮಾಡಿದ್ದಕ್ಕೆ ನನಗೆ ಸಂಸತ ತಂದಿದೆ” ಎಂದು 21 ವರ್ಷದ ಯುವತಿ ವಾಣಿ ಹೇಳಿದ್ದಾರೆ.

52 ವರ್ಷದ ಆಕೆಯ ತಂದೆ ಎಂ ನೀಲಕಂಠೇಶ್ವರ ರಾವ್ ಅವರಿಗೆ ಒಂದು ವಾರದಲ್ಲಿ ಪ್ರತಿ ಸೆಷನ್‌ಗೆ 9 ರಿಂದ 10 ಲೀಟರ್ ದ್ರವವನ್ನು ಅವರ ಹೊಟ್ಟೆಯಿಂದ ಹೊರತೆಗೆಯಬೇಕಾಗಿತ್ತು. ಶಸ್ತ್ರಚಿಕಿತ್ಸೆಗೂ ಪೂರ್ವ ಅವಧಿಯಲ್ಲಿ 20 ರಿಂದ 25 ಸೆಷನ್‌ಗಳಲ್ಲಿ ದ್ರವನ್ನು ತೆಗೆಯಲಾಗಿತ್ತು. ಅದು ಅವರ ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಅವರಿಗೆ ಆರೋಗ್ಯಕರ ಯಕೃತ್ತನ್ನು ಒದಗಿಸುವುದು ಪರಿಹಾರವಾಗಿತ್ತು. ವಾಣಿ ತನ್ನ ತಂದೆಯನ್ನು ಉಳಿಸಲು ತನ್ನ ಅರ್ಧದಷ್ಟು ಲಿವರ್ ದಾನ ಮಾಡಿದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಡಾ ಮೊಹಮ್ಮದ್ ನಯೀಮ್, ಡಾ ರವಿಶಂಕರ್ ಕಿಂಜರಾಪು ಮತ್ತು ಡಾ ರಾಜಕುಮಾರ್ ಅವರನ್ನೊಳಗೊಂಡ ತಂಡವು ವಾಣಿಯಿಂದ ಯಕೃತ್ತನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದೆ. ಬಳಿಕ, ಅಂಗಾಂಗ ಕೊಯ್ಲು ಮತ್ತು ಕಸಿ ಮಾಡುವ 14 ಗಂಟೆಗಳ ಪ್ರಕ್ರಿಯೆಯಲ್ಲಿ ಆಕೆಯ ತಂದೆಗೆ ಯಕೃತ್‌ ಅಳವಡಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

ಆರು ದಿನಗಳ ನಂತರ ವಾಣಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಾ ನಯೀಮ್ ಹೇಳಿದ್ದಾರೆ.

“ಲೈವ್ ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಒಂದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಅದರ ಮೂಲಕ 50% ರಿಂದ 60% ಅಂಗವನ್ನು ದಾನಿಯಿಂದ ಕೊಯ್ಲು ಮಾಡಲಾಗುತ್ತದೆ ಮತ್ತು ರೋಗಿಗೆ ಅಳವಡಿಸಲಾಗುತ್ತದೆ. ರೋಗಿಯು ತೀವ್ರವಾಗಿ ಅಸ್ವಸ್ಥರಾಗಿದ್ದರಿಂದ ಶವದ ಯಕೃತ್ತಿನ ಕಸಿ ಮಾಡುವುದು ಬೇಡವೆಂದು ನಾವು ನಿರ್ಧರಿಸಿದೆವು. ಅದಕ್ಕಾಗಿ, ಬದುಕಿರುವ ವ್ಯಕ್ತಿಯಿಂದ ಯಕೃತ್‌ ಪಡೆಯಲಾಯಿತು. ವಾಣಿ ಅವರ ತಂದೆ ಆರು ವಾರಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ” ಎಂದು ವೈದ್ಯರು ಹೇಳಿದ್ದಾರೆ.

ದಾನಿ ಮತ್ತು ಸ್ವೀಕರಿಸುವವರ ಯಕೃತ್ತು ಮೂರರಿಂದ ನಾಲ್ಕು ವಾರಗಳಲ್ಲಿ ಸಾಮಾನ್ಯ ಗಾತ್ರದ 90% ಕ್ಕೆ ಬೆಳೆಯುತ್ತದೆ. “ಶಸ್ತ್ರಚಿಕಿತ್ಸಕರ ಪರಿಣಿತ ತಂಡಗಳು, ಸುಧಾರಿತ ತಂತ್ರಜ್ಞಾನ ಮತ್ತು ಪೆರಿಆಪರೇಟಿವ್ ಅವಧಿಯಲ್ಲಿ ಉತ್ತಮ ಆರೈಕೆ ಮಾಡುವುದರಿಂದ, ದಾನಿಗಳಿಗೆ ಅಪಾಯವು ಕಡಿಮೆಯಾಗಿದೆ” ಎಂದು ಡಾ ಕಿಂಜರಾಪು ಹೇಳಿದ್ದಾರೆ.

ಸರಾಸರಿ 1,00,000 ಭಾರತೀಯರು ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ತಡವಾದ ರೋಗನಿರ್ಣಯವು 15% ರಿಂದ 20% ರಷ್ಟು ಸಾವಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 


ಇದನ್ನೂ ಓದಿ: ಚಳವಳಿ ವೇಳೆ ಪೊಲೀಸರು ಜರುಗಿಸಿದ ಕ್ರಮಗಳಿಂದ ರೈತರು ಸತ್ತಿಲ್ಲ: ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಪ್ರಚಾರಕ್ಕೆ ಸಿಂಗಾಪುರದ ರೈಲ್ವೆ ನಿಲ್ದಾಣದ ಫೋಟೋ ಬಳಸಿದ ಬಿಜೆಪಿ

0
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರು ಚಿತ್ರವಿರುವ ಈ ಪೋಸ್ಟರ್‌...