ಆಂಧ್ರಪ್ರದೇಶದ ಎಸ್.ವಿ.ವೆಟರ್ನರಿ ವಿಶ್ವವಿದ್ಯಾಲಯದ ಡೈರಿ ಟೆಕ್ನಾಲಜಿ ಕಾಲೇಜಿನಲ್ಲಿ ದಲಿತ ಸಹಾಯಕ ಪ್ರಾಧ್ಯಾಪಕ ಡಾ. ರವಿ ಅವರ ಕಚೇರಿಯಿಂದ ಪ್ರಾಚಾರ್ಯರು ಕುರ್ಚಿಯನ್ನು ತೆಗೆದುಹಾಕಿದ ಘಟನೆ ವರದಿಯಾಗಿದೆ. ಇದರ ಪರಿಣಾಮವಾಗಿ ಪ್ರಾಧ್ಯಾಪಕರು ನೆಲದ ಮೇಲೆ ಕುಳಿತು ಕೆಲಸ ಮಾಡುವಂತಾಗಿದ್ದು, ಇದು ಜಾತಿ ತಾರತಮ್ಯದ ಪ್ರಕರಣ ಎಂದು ಹಲವರು ಆರೋಪಿಸಿದ್ದಾರೆ.
ಕಳೆದ ಗುರುವಾರ (ಜೂ.19) ಕಾಲೇಜಿನಿಂದ ರಜೆ ತೆಗೆದುಕೊಂಡಿದ್ದ ಡಾ.ರವಿಯವರು ಶುಕ್ರವಾರ ಕಾಲೇಜಿಗೆ ಮರಳಿ ಬಂದಾಗ ತಮ್ಮ ಕೊಠಡಿಯಲ್ಲಿ ಕುರ್ಚಿ ಇಲ್ಲದಿರುವುದು ಕಂಡುಬಂದಿತ್ತು. ಅಸೋಸಿಯೇಟ್ ಡೀನ್ ರವೀಂದ್ರ ರೆಡ್ಡಿ ಅವರು ಕೊಠಡಿಯನ್ನು ಪರೀಕ್ಷಿಸಲು ಬಂದಿದ್ದಾಗ ಡಾ.ರವಿಯವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ತೆಗೆಸಿಹಾಕಿಸಿದ್ದರು.
ವೈರಲ್ ಆಗಿರುವ ಚಿತ್ರಗಳಲ್ಲಿ ಡಾ.ರವಿ ತಮ್ಮ ಕಚೇರಿ ಅಥವಾ ಕೊಠಡಿಯೊಳಗಿನ ನೆಲದ ಮೇಲೆ ಬಿಳಿ ಬಟ್ಟೆಯೊಂದರ ಮೇಲೆ ಕುಳಿತಿರುವುದು ಕಾಣಿಸುತ್ತದೆ. ಇದು ಅವರ ಪ್ರತಿಭಟನೆಯ ಸಂಕೇತವಾಗಿದೆ. ಅವರ ಮುಂದೆ ಕಂಪ್ಯೂಟರ್ ಮಾನಿಟರ್, ಕೀಬೋರ್ಡ್ ಮತ್ತು ಸಿಪಿಯು ಇವೆ. ಕಂಪ್ಯೂಟರ್ ಗೆ ಸಂಬಂಧಿಸಿದ ವೈರ್‌ಗಳು ಸಹ ನೆಲದ ಮೇಲೆ ಹರಡಿಕೊಂಡಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಈ ಚಿತ್ರಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಅನೇಕರು ಈ ಘಟನೆಯನ್ನು “ಹಾಸ್ಯಾಸ್ಪದ” ಮತ್ತು “ಅಸಹ್ಯಕರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Humiliation of Dalit Assistant Professor at SV Veterinary University, Andhra Pradesh.
At the University’s Dairy Tech College, the principal allegedly showed caste discrimination by removing chairs from Ravi’s chamber. As a result, he is performing duties sitting on the floor. pic.twitter.com/6Jz3jOCEPf
— Pratyusha (@JournoPratyusha) June 23, 2025
ಕಾಲೇಜಿನ ಡೀನ್ ನಾಗೇಶ್ವರ ರಾವ್ ಅವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ಡಿಬಿಎಂ ವಿಭಾಗಕ್ಕೆ ಅಗತ್ಯಕ್ಕೆ ತಕ್ಕಂತೆ ಎರಡು ಕುರ್ಚಿಗಳನ್ನು ಖರೀದಿಸಲಾಗಿತ್ತು ಮತ್ತು ಅವುಗಳಲ್ಲಿ ಒಂದು ಡೈರಿ ಟೆಕ್ನಾಲಜಿ ವಿಭಾಗದಲ್ಲಿ ಕಂಡುಬಂದಿದ್ದರಿಂದ ಅದನ್ನು ಬದಲಾಯಿಸಲಾಯಿತು ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಈ ಘಟನೆ ಕುರಿತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತಗೆದುಕೊಂಡಿದೆ. ದಲಿತ ಸಹಾಯಕ ಪ್ರಾಧ್ಯಾಪಕರ ಮೇಲೆ ಇಂತಹ ಅವಮಾನ ನಡೆಯುತ್ತಿದ್ದರೂ, ಮುಖ್ಯಮಂತ್ರಿ ನಾಯ್ಡು ಅವರು ಯಾವುದೇ ಕ್ರಮ ಕೈಗೊಳ್ಳದೆ ಏಕೆ ಮೌನ ವಹಿಸಿದ್ದಾರೆ ಎಂದು ಅದು ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣದ ಅನೇಕ ಬಳಕೆದಾರರು ಈ ಘಟನೆಯನ್ನು ಖಂಡಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾತಿ ತಾರತಮ್ಯವು ಇನ್ನೂ ಆಳವಾಗಿ ಬೇರೂರಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಅದು ಹೇಳಿದೆ. ಕೆಲವು ಪಕ್ಷದವರು ಮೀಸಲಾತಿಯನ್ನು ತೆಗೆದುಹಾಕಲು ಬಯಸುತ್ತಿದ್ದರೂ, ಜಾತಿ ತಾರತಮ್ಯವನ್ನು ತೊಡೆದುಹಾಕಲು ಏನೂ ಕ್ರಮಕೈಗೊಳ್ಳುತ್ತಿಲ್ಲ ಎಂದು ವೈಎಸ್ಆರ್ ಪಕ್ಷವು ಆರೋಪಿಸಿದೆ.
ಎರಡು ಬೇಡಿಕೆ ಈಡೇರಿಸಿದ್ದೇವೆ; ದಯವಿಟ್ಟು ಹೋರಾಟ ಕೈಬಿಡಿ: ಚನ್ನರಾಯಪಟ್ಟಣ ರೈತರಿಗೆ ಸಚಿವ ಎಂ.ಬಿ. ಪಾಟೀಲ್ ವಿನಂತಿ


