ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಯಾವುದೆ ಕಾಳಜಿಯಿಲ್ಲದೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಹೇಳಿದೆ. ಡಿಸೆಂಬರ್ 23ರಂದು ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಸಂತ್ರಸ್ತೆ ಬಗ್ಗೆ ದೂರು ನೀಡಿದ್ದು, ತನ್ನ ಮೇಲೆ ಮತ್ತು ತನ್ನ ಸ್ನೇಹಿತನ ಮೇಲೆ ದಾಳಿ ನಡೆಸಲಾಗಿದ್ದು, ಹತ್ತಿರದ ಪೊದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿದ್ದರು. ಅಣ್ಣಾ ವಿಶ್ವವಿದ್ಯಾಲಯದ
ಪ್ರಕರಣದ ಬಗ್ಗೆ ತೀವ್ರ ಸಂಕಟವನ್ನು ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ. ವೇಲ್‌ಮುರುಗನ್ ಅವರು, ಇಡೀ ಸಮಾಜವು ಮಹಿಳೆಯರನ್ನು ಅಧೀನಗೊಳಿಸುವುದನ್ನು ಮತ್ತು ಅವರ ವಿರುದ್ಧ ದೌರ್ಜನ್ಯವನ್ನು ಏಕೆ ಮುಂದುವರಿಸಿದೆ ಎಂಬುದನ್ನು ಆತ್ಮಾವಲೋಕನ ಮಾಡಲು ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸುವ ಬದಲು, ಘಟನೆಯನ್ನು ಯಾವುದೆ ಕಾಳಜಿಯಿಲ್ಲದೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪರ ವಕೀಲ ಕೆ.ಬಾಲು ಅವರು ಪಕ್ಷದ ಮಹಿಳಾ ಘಟಕದ ಪ್ರತಿಭಟನೆಗೆ ರಾಜ್ಯ ಪೊಲೀಸರು ಅನುಮತಿ ನಿರಾಕರಿಸಿದ ಬಗ್ಗೆ ಪ್ರಸ್ತಾಪಿಸಿದಾಗ ನ್ಯಾಯಮೂರ್ತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿಭಟನೆಗಳು ಕೇವಲ ಮಾಧ್ಯಮಗಳ ಗಮನ ಸೆಳೆಯುವ ಗುರಿಯನ್ನು ಹೊಂದಿವೆಯೇ ಹೊರತು ನಿಜವಾದ ಕಾಳಜಿಯಿಂದ ಮಾಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ನಿವೃತ್ತ ಐಪಿಎಸ್ ಅಧಿಕಾರಿ ಪ್ರವೀಣ್ ದೀಕ್ಷಿತ್ ಸೇರಿದಂತೆ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಎರಡು ದಿನಗಳ ತನಿಖೆಯಲ್ಲಿ, ಸಮಿತಿಯು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಕುಟುಂಬಸ್ಥರನ್ನು, ಅಧಿಕಾರಿಗಳು ಮತ್ತು ಎನ್‌ಜಿಒಗಳನ್ನು ಭೇಟಿ ಮಾಡಿದ್ದು, ವಿಶ್ವವಿದ್ಯಾಲಯದ ಭದ್ರತೆ ಪರಿಶೀಲಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎನ್‌ಸಿಡಬ್ಲ್ಯೂ, “ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಎನ್‌ಸಿಡಬ್ಲ್ಯೂ ಭದ್ರತೆ ಪರಿಶೀಲಿಸಿದೆ. ಎಸ್‌ಐಟಿಯನ್ನು ಭೇಟಿ ಮಾಡಿದೆ. ಶಿಫಾರಸುಗಳೊಂದಿಗೆ ವರವಾದ ವರದಿಯನ್ನು ಸಿದ್ಧಪಡಿಸಲಾಗಿದೆ” ಎಂದು ಹೇಳಿದೆ. ಅಣ್ಣಾ ವಿಶ್ವವಿದ್ಯಾಲಯದ
ಅತ್ಯಾಚಾರ ಆರೋಪಿಯನ್ನು ಬೀದಿ ಬದಿ ವ್ಯಾಪಾರಸ್ಥ ಜ್ಞಾನಶೇಖರನ್ ಎಂದು ಗುರುತಿಸಲಾಗಿದೆ. ಆರೋಪಿ ಜ್ಞಾನಶೇಖರನ್ ಈ ಹಿಂದೆ ಕೂಡಾ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗವಹಿಸಿದ್ದ ಆರೋಪಗಳಿವೆ ಎಂದು ಹೇಳಿದ್ದಾರೆ. ತನಿಖೆಗಾಗಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶಿಸಿತ್ತು.
ಇದನ್ನೂ ಓದಿ: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ : ಮಹಿಳಾ ಅಧಿಕಾರಿಗಳ ಎಸ್‌ಐಟಿ ರಚಿಸಿದ ಮದ್ರಾಸ್ ಹೈಕೋರ್ಟ್, ₹25 ಲಕ್ಷ ಪರಿಹಾರ ನೀಡಲು ಸೂಚನೆ


