Homeಚಳವಳಿಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ಸಹ ಹೋರಾಟಗಾರರು ಅವರನ್ನು ’ಉದ್ಯಮಾಲ ಉಪಾಧ್ಯಾಯುಡು’ (ಹೋರಾಟಗಳ ಶಿಕ್ಷಕ) ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

- Advertisement -
- Advertisement -

ಯುಸಾ ಎಂದೇ ಜನಪ್ರಿಯವಾಗಿರುವ ಪ್ರಮುಖ ಜಾತಿ ವಿರೋಧಿ ಸಾಮಾಜಿಕ ಕಾರ್ಯಕರ್ತ ವಿಚಾರವಾದಿ ಯು. ಸಾಂಬಶಿವ ರಾವ್ (70) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ತಮ್ಮ ಜೀವನವನ್ನೇ ಜಾತಿ ದಲಿತರ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಮೀಸಲಿಟ್ಟ ಅವರು ಪುತ್ರಿ ಹಿಮಾ ಬಿಂದು ಹಾಗೂ ಅಪಾರ ಬೆಂಬಲಿಗ ವರ್ಗವರನ್ನು ಅಗಲಿದ್ದಾರೆ.

ವಾರದಿಂದ ಅತಿಸಾರದಿಂದ ಬಳಲುತ್ತಿದ್ದ ಸಾಂಬಶಿವ ರಾವ್ ಹೈದರಾಬಾದ್‌ನ ಬರ್ಕತ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅತಿಸಾರಕ ಕೂಡಾ ಕೊರೊನಾ ಸೋಂಕಿನ ಲಕ್ಷಣವಾಗಿದೆ. ನಂತರ ನಡೆದ ಕೊರೊನಾ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಸೋಂಕಿರುವುದು ದೃಡಪಟ್ಟಿತ್ತು.

ಸಾಂಬಶಿವ ರಾವ್ ದಲಿತ ಮಹಾ ಸಬಾ (ಕಾರಂಚೇಡು ಹತ್ಯಾಕಾಂಡದ ನಂತರ ರೂಪುಗೊಂಡ ಒಂದು ಚಳುವಳಿ), ಮಾದಿಗ ದಂಡೋರಾ ಚಳುವಳಿ (ಪರಿಶಿಷ್ಟ ಜಾತಿಯನ್ನು ವರ್ಗೀಕರಿಸುವ ಬೇಡಿಕೆ) ಮತ್ತು ರೋಹಿತ್ ವೇಮುಲಾ ಚಳವಳಿಯಂತಹ ಹಲವಾರು ಐತಿಹಾಸಿಕ ದಲಿತ ಹೋರಾಟಗಳ ಭಾಗವಾಗಿದ್ದರು.


ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.


ಹೋರಾಟದ ಸಹ ಕಾರ್ಯಕರ್ತರಿಂದ ಉದಯಮಲ ಉಪಾಧ್ಯಾಡು (ಹೋರಾಟಗಳ ಶಿಕ್ಷಕ) ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಹಿಂದೆ ಯುನಿಟಿ ಸೆಂಟರ್ ಆಫ್ ಕಮ್ಯುನಿಸ್ಟ್ ರೆವಲ್ಯೂಷನರೀಸ್ ಆಫ್ ಇಂಡಿಯಾ ಮಾಕ್ಸ್‌ವಾದಿ-ಲೆನಿನಿಸ್ಟ್(ಯುಸಿಸಿಆರ್-ಎಂಎಲ್) ನ ಹಿರಿಯ ಸದಸ್ಯರಾಗಿದ್ದರು. ಯುಸಿಸಿಆರ್-ಎಂಎಲ್‌ನಲ್ಲಿದ್ದ ವರ್ಷಗಳಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಬುಡಕಟ್ಟು ಜಮೀನುಗಳಿಗಾಗಿ ಹೋರಾಟ ಮಾಡಿದ್ದರು.

ಅಲ್ಲದೆ ಅಲ್ಲಿ ಒಂದು ದಶಕಗಳ ಕಾಲ ಆದಿವಾಸಿಗಳೊಂದಿಗೆ ಕೆಲಸ ಮಾಡಿದರು. 1980 ರಲ್ಲಿ ತೆಲಂಗಾಣ ಬರಗಾಲದಿಂದ ಬಳಲುತ್ತಿದ್ದಾಗ ಹೈದರಾಬಾದ್‌ಗೆ ಸ್ಥಳಾಂತರಗೊಂಡು ನಲ್ಗೊಂಡದಲ್ಲಿ ಮಾಥ್‌ಕೂರ್‌ನ ರೈತರನ್ನು ಸಂಘಟಿಸಿದರು.

ಆದರೆ ಜಾತಿ ಹೋರಾಟದ ಬಗೆಗಿನ ಭಿನ್ನಾಭಿಪ್ರಾಯಕ್ಕಾಗಿ ಪಕ್ಷದಿಮದ ರಾವ್ ಅವರನ್ನು ಹೊರಹಾಕಲಾಗಿತ್ತು. 1950 ರಲ್ಲಿ ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದ ಅವರು ಮಂಗಲಿ ಸಮುದಾಯಕ್ಕೆ ಸೇರಿದವರಾಗಿದ್ದರು (ಕ್ಷೌರಿಕ ಸಮುದಾಯ) ಇದನ್ನು ಅಲ್ಲಿ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ.

ತೆಲಂಗಾಣದ ಪ್ರತ್ಯೇಕ ರಾಜ್ಯದ ಹೋರಾಟವನ್ನು ಬೆಂಬಲಿಸಿದ ಆಂಧ್ರಪ್ರದೇಶದ ಕೆಲವೇ ಕೆಲವು ಸಾಮಾಜಿಕ ಕಾರ್ಯಕರ್ತರಲ್ಲಿ ರಾವ್ ಕೂಡ ಇದ್ದರು. ಅವರು ಮತ್ತೊಂದು ಮಾರ್ಕ್ಸ್‌ವಾದಿ-ಲೆನಿನಿಸ್ಟ್ ಗುಂಪಿನವರಾದ ದಲಿತ ಕ್ರಾಂತಿಕಾರಿ ಪೀಪಲ್ಸ್ ವಾರ್ ಗ್ರೂಪ್ನ(ಪಿಡಬ್ಲ್ಯುಜಿ) ಸಹ-ಸಂಸ್ಥಾಪಕ ಕೆ.ಜಿ.ಸತ್ಯಮೂರ್ತಿಯೊಂದಿಗೆ ಕೆಲಸ ಮಾಡಿದ್ದರು. ಜಾತಿ ಆಧಾರಿತ ತಾರತಮ್ಯ ಆರೋಪಿಸಿ ಸತ್ಯಮೂರ್ತಿ ಪಿಡಬ್ಲ್ಯುಜಿಯಿಂದ ಹೊರಬಂದರು. ರಾವ್ ಅವರು ಸತ್ಯಮೂರ್ತಿ ಸ್ಥಾಪಿಸಿದ ‘ಎಧುರೀಥ’ ಸಂಪಾದಕರಾಗಿದ್ದರು.

“1985 ರಲ್ಲಿ ಕಾರಂಚೇಡು ಚಳವಳಿಯ ಸಮಯದಲ್ಲಿ, ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿ ದಲಿತ ಚಳವಳಿಯನ್ನು ಬೆಂಬಲಿಸಿದರು, ಅದಕ್ಕಾಗಿ ನಾನು ಮತ್ತು ಅವರು ಯುಸಿಸಿಆರ್‌ಐ-ಎಂಎಲ್ ಪಕ್ಷದಿಂದ ಹೊರಹಾಕಲ್ಪಟ್ಟೆವು.” ಎಂದು ಅವರ ಸಂಗಾತಿ ಇಲಯ್ಯ ನೆನಪಿಸಿಕೊಂಡಿದ್ದಾರೆ.

ರಾವ್‌ಗೆ ಗೌರವ ಸಲ್ಲಿಸುತ್ತಾ, “ಶ್ರೇಷ್ಠ ಗಾಯಕ, ಶ್ರೇಷ್ಠ ಬರಹಗಾರ ಮತ್ತು ಬದ್ದತೆಯ ವ್ಯಕ್ತಿ” ಎಂದು ಇಲಯ್ಯ ಬಣ್ಣಿಸಿದ್ದಾರೆ.

ಯುಸಿಸಿಆರ್ಐ-ಎಂಎಲ್ ನೊಂದಿಗೆ ಸಂಬಂಧಗಳನ್ನು ಕಡಿದುಕೊಂಡ ನಂತರ, ರಾವ್ ತಳ ಸಮುದಾಯಗಳ ಉನ್ನತಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದರು. ದಲಿತ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನಾಯಕರಾಗಿ ಹೊರಹೊಮ್ಮಿದರು.

“ದಲಿತರ ವಿರುದ್ಧ ಯಾವುದೇ ದೌರ್ಜನ್ಯ ನಡೆದರೂ ಅವರು ಅಲ್ಲಿಗೆ ಹೋಗುತ್ತಿದ್ದರು. 2012 ರಲ್ಲಿ ಶ್ರೀಕಾಕುಲಂನಲ್ಲಿ ಲಕ್ಷ್ಮಿಪುರಂ ಹಿಂಸಾಚಾರ ನಡೆದಾಗ. ದಲಿತರಲ್ಲಿ ವಿಶ್ವಾಸ ಮೂಡಿಸಲು ಅವರು ಅಲ್ಲೇ ಸ್ವಲ್ಪ ಕಾಲ ಇದ್ದರು. ತಮ್ಮ ಜೀವನವನ್ನು ದಲಿತರಿಗೆ ಅರ್ಪಿಸಿದ ಮಹಾನ್ ನಾಯಕನನ್ನು ದಲಿತ ಹಾಗು ಬಹುಜನರು ಕಳೆದುಕೊಂಡಿದ್ದಾರೆ” ಎಂದು ಇಲಯ್ಯ ಹೇಳಿದ್ದಾರೆ.


ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...