ಮುಸ್ಲಿಮರು ಮತ್ತು ಇಸ್ಲಾಂ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಹರಿಯಾಣ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅರುಣ್ ಯಾದವ್ ಅವರನ್ನು ಪಕ್ಷವು ಗುರುವಾರ ಕೈಬಿಟ್ಟಿದೆ. ಅವರನ್ನು ಬಂಧಿಸುವಂತೆ ಒತ್ತಡಗಳು ಹೆಚ್ಚುತ್ತಿವೆ. 2018 ರ ಟ್ವೀಟ್‌ಗಾಗಿ ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ಅರುಣ್ ಯಾದವ್ ಅವರನ್ನು ಕೂಡಾ ಟ್ವೀಟ್ ಆಧಾರದಲ್ಲಿ ಬಂಧಿಸಬೇಕು ಎಂದು ಅವರ ವಿರೋಧಿಗಳು ಅವರ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
#ArrestArunYadav ಎಂಬ ಹ್ಯಾಶ್ ಟ್ಯಾಗ್ ಗುರುವಾರ ಟ್ವಿಟರ್‌ನಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಒಂದಾಗಿತ್ತು. 2017 ಮತ್ತು ಈ ವರ್ಷದ ಮೇ ತಿಂಗಳ ನಡುವೆ ಪೋಸ್ಟ್ ಮಾಡಲಾಗಿರುವ ಅವರ ಟ್ವೀಟ್‌ಗಳನ್ನು ಸಾವಿರಾರು ಬಾರಿ ಜನರು ಹಂಚಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅರುಣ್ ಯಾದವ್ ವಿರುದ್ಧ ಇನ್ನೂ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಹರಿಯಾಣ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಬಿಜೆಪಿ ಅವರನ್ನು ಇನ್ನೂ ಪಕ್ಷದಿಂದ ತೆಗೆದುಹಾಕಿಲ್ಲ.
“ಬಿಜೆಪಿಯು ಮತ್ತೊಂದು ‘ಫ್ರಿಂಜ್ ಎಲಿಮೆಂಟ್’ ಅನ್ನು ವಜಾಗೊಳಿಸಿದೆ. ಆದರೆ ಈ ಕಣ್ಣಿಗೆ ಮಣ್ಣೆರೆಚುವ ಬದಲು, ಈ ‘ದ್ವೇಷದ ಗುಲಾಮರನ್ನು’ ಬಂಧನಕ್ಕೆ ಒಳಗಾಗುತ್ತಾರೆಯೆ?” ಎಂದು ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ: ಬಿಜೆಪಿ ಬೆಂಬಲಿತ ಸಂಘಟನೆ ಹೆಚ್‌ಜೆವಿ ರಾಜ್ಯ ಸಂಚಾಲಕ ಕೇಶವ ಮೂರ್ತಿ ವಿರುದ್ಧ ಎಫ್‌ಐಆರ್
“ಹಲೋ ಹರಿಯಾಣ DGP, ದೆಹಲಿ ಪೊಲೀಸ್. 2018 ರ ಟ್ವೀಟ್‌ಗಾಗಿ ಜುಬೈರ್ ಅವರನ್ನು ಬಂಧಿಸಬಹುದಾದರೆ, ಅರುಣ್ ಯಾದವ್ ಯಾಕೆ ಬಂಧಿಸಬಾರದು” ಎಂದು ಟಿಪ್ಪು ಸುಲ್ತಾನ್ ಪಕ್ಷದ ಅಧ್ಯಕ್ಷ ಶೇಖ್ ಸಾದಿಕ್ ಟ್ವೀಟ್ ಮಾಡಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಲಾಗಿದ್ದ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಯನ್ನು ಎತ್ತಿ ತೋರಿಸಿದ ನಂತರ ಜೂನ್ 27 ರಂದು ಜುಬೈರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಯಿತು.
ಜುಲೈ 2 ರಂದು, ಪೋಲೀಸರು ಜುಬೇರ್ ವಿರುದ್ಧ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಹೆಚ್ಚುವರಿ ಆರೋಪವನ್ನು ಸೇರಿಸಿದ್ದು, 14 ದಿನಗಳವರೆಗೆ ಕಸ್ಟಡಿಯಲ್ಲಿ ಇರಿಸಲಾಗಿದೆ. ಜುಲೈ 4 ರಂದು, ದ್ವೇಷದ ಆರೋಪ ಹೊತ್ತಿರುವ ಮೂವರು ಹಿಂದೂ ಕಟ್ಟರ್‌ವಾದಿಗಳನ್ನು “ಹೇಟ್ ಮೋಂಗರ್‌ಗಳು” ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಯಿತು.
ಇದನ್ನೂ ಓದಿ: ಪ್ರವಾದಿ ನಿಂದನೆ: ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಕೋಲ್ಕತ್ತಾ ಪೊಲೀಸರ ಸಮನ್ಸ್
ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿ ಜುಬೇರ್ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಕಳೆದ ವಾರ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಆಕೆಯನ್ನು ಏಕೆ ಬಂಧಿಸಿಲ್ಲ ಮತ್ತು ‘ದೇಶದಾದ್ಯಂತ ಗಲಭೆ ಹೊತ್ತಿ ಉರಿಯಲು’ ಆಕೆಯೆ ಹೊಣೆ ಎಂದು ಹೇಳಿತ್ತು.


