ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ “ದೇಶ ವಿರೋಧಿ” ಹೇಳಿಕೆ ನೀಡಿದ ಆರೋಪದ ಮೇಲೆ ಒಡಿಶಾದ ಜಾರ್ಸುಗುಡ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಜಾರ್ಸುಗುಡ ಜಿಲ್ಲೆಯ ಬಿಜೆಪಿ, ಯುವ ಮೋರ್ಚಾ, ಆರ್‌ಎಸ್‌ಎಸ್, ಬಜರಂಗ ದಳದ ಸದಸ್ಯರು ಫೆಬ್ರವರಿ 5 ರಂದು ರಾಹುಲ್ ಗಾಂಧಿ ವಿರುದ್ಧ ಉತ್ತರ ವಲಯದ ಐಜಿಪಿ ಹಿಮಾಂಶು ಲಾಲ್ ಅವರಿಗೆ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರ ವಿರೋಧಿ ಹೇಳಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರ್ಸುಗುಡ ಪೊಲೀಸ್ ಠಾಣೆಯಲ್ಲಿ (ಪ್ರಕರಣ ಸಂಖ್ಯೆ 31) ಸೆಕ್ಷನ್ 152 (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವ ಕೃತ್ಯಗಳನ್ನು ಅಪರಾಧೀಕರಿಸುತ್ತದೆ), 197(1) (ಡಿ) ಭಾರತದ ಏಕತೆ, ಸಾರ್ವಭೌಮತ್ವ, ಸಮಗ್ರತೆ ಅಥವಾ ಭದ್ರತೆಗೆ ಬೆದರಿಕೆ ಹಾಕುವ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಬಿಎನ್‌ಎಸ್‌ನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಉದ್ದೇಶಪೂರ್ವಕವಾಗಿ ಪ್ರತಿಯೊಬ್ಬ ಭಾರತೀಯ ವ್ಯಕ್ತಿಗೆ ನೋವುಂಟುಮಾಡುವ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಐಜಿಪಿ ದೂರನ್ನು ವಿಚಾರಣೆ ಮತ್ತು ಅಗತ್ಯ ಕಾನೂನು ಕ್ರಮಕ್ಕಾಗಿ ಜಾರ್ಸುಗುಡ ಎಸ್ಪಿ ಪರ್ಮಾರ್ ಸ್ಮಿತ್ ಪರ್ಶೋತ್ತಮ್‌ದಾಸ್ ಅವರಿಗೆ ರವಾನಿಸಿದ್ದಾರೆ.
ಎಸ್ಪಿ ನಿರ್ದೇಶನದಂತೆ ರಾಹುಲ್ ಗಾಂಧಿ ವಿರುದ್ಧ ಜಾರ್ಸುಗುಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ (ಪ್ರಕರಣ ಸಂಖ್ಯೆ 31) ಎಂದು ವರದಿಯಾಗಿದೆ. ರಾಷ್ಟ್ರ ವಿರೋಧಿ ಹೇಳಿಕೆ
“ರಾಹುಲ್ ಗಾಂಧಿ ವಿರುದ್ಧದ ಆರೋಪದ ಸ್ವರೂಪ ನನಗೆ ತಿಳಿದಿಲ್ಲ. ಮೊದಲು ನಾನು ಅದನ್ನು ನೋಡುತ್ತೇನೆ. ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತದ ವಿರುದ್ಧ ಹೋರಾಡುತ್ತಿದೆ” ಎಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜೆನಾ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂಓದಿ: Delhi Election Results 2025 | ಎಎಪಿ ಘಟಾನುಘಟಿಗಳ ಹೀನಾಯ ಸೋಲು; ಅತಿಶಿ ಗೆಲುವು!
Delhi Election Results 2025 | ಎಎಪಿ ಘಟಾನುಘಟಿಗಳ ಹೀನಾಯ ಸೋಲು; ಅತಿಶಿ ಗೆಲುವು!


