ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಭಾಗವಹಿಸುವುದನ್ನು ವಿರೋಧಿಸಿ ಅವರನ್ನು ಸುತ್ತುವರೆದು ಅವರ ಮೇಲೆ ದಾಳಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಶನಿವಾರ ಮುಜಫರ್‌ನಗರದಲ್ಲಿ ತುರ್ತು ‘ಕಿಸಾನ್ ಪಂಚಾಯತ್’ಗೆ ಕರೆ ನೀಡಿದೆ. ಭಯೋತ್ಪಾದನಾ ವಿರೋಧಿ
ಘಟನೆಯ ಕುರಿತು ಚರ್ಚಿಸಲು ಮುಜಫರ್‌ನಗರದ ಜಿಐಸಿ ಮೈದಾನದಲ್ಲಿ ಪಂಚಾಯತ್ ನಡೆಸಲಾಗುವುದು ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಘೋಷಿಸಿದ್ದಾರೆ. ‘ಆಕ್ರೋಶ್ ರ‍್ಯಾಲಿ’ಯಲ್ಲಿ ನಡೆದ ಘಟನೆಯು ರೈತರ ಚಳುವಳಿಯನ್ನು ದುರ್ಬಲಗೊಳಿಸಲು “ರಾಜಕೀಯ ಪಕ್ಷ” ಆಯೋಜಿಸಿದ ಪಿತೂರಿಯ ಭಾಗವಾಗಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ, ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಲು ಬಲಪಂಥೀಯ ಗುಂಪುಗಳು ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಕೇಶ್ ಟಿಕಾಯತ್ ಅವರನ್ನು ಸುತ್ತುವರೆದು ಅವರ ಮೇಲೆ ದಾಳಿ ಮಾಡಲಾಗಿದೆ. ಜೊತೆಗೆ ಸಭೆಯಿಂದ ಹಿಂತಿರುಗುವಂತೆ ಅವರನ್ನು ಕೇಳಲಾಯಿತು ಎಂದು ಆರೋಪಿಸಲಾಗಿದೆ. ಈ ದಾಳಿಯ ವೇಳೆ ಅವರ ಪೇಟ ಕೂಡ ಕೆಳಗೆ ಬಿದ್ದಿದ್ದು, ಘಟನೆಯ ವೀಡಿಯೊಗಳು ವ್ಯಾಪಕ ವೈರಲಾಗಿದೆ.
“ಈ ಘಟನೆ ಸ್ವಯಂಪ್ರೇರಿತವಾಗಿರಲಿಲ್ಲ. ಇದು ಪೂರ್ವ ಯೋಜಿತ ಮತ್ತು ರಾಜಕೀಯ ಉದ್ದೇಶಗಳಿಂದ ನಡೆಸಲ್ಪಟ್ಟಿದೆ” ಎಂದು ನರೇಶ್ ಟಿಕಾಯತ್ ಹೇಳಿದ್ದಾರೆ. ಮಧ್ಯಾಹ್ನ ಪ್ರಾರಂಭವಾಗಲಿರುವ ಪಂಚಾಯತ್‌ಗೆ ಮುಂಚಿತವಾಗಿ ಪ್ರದೇಶದಾದ್ಯಂತ ರೈತರು ಸಿಸೌಲಿ ಮತ್ತು ಮುಜಫರ್‌ನಗರದಲ್ಲಿ ಸೇರಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಶುಕ್ರವಾರದ “ಗದ್ದಲ” ವನ್ನು ರಾಕೇಶ್ ಟಿಕಾಯತಗ್ ಖಂಡಿಸಿದ್ದು, ಇದು ರಾಜಕೀಯ ವಿಧ್ವಂಸಕ ಕೃತ್ಯ ಎಂದು ತಾನು ಭಾವಿಸಿದ್ದಾಗಿ ಪುನರುಚ್ಚರಿಸಿದ್ದಾರೆ. ತಮ್ಮ ವಿರುದ್ಧ ಘೋಷಣೆಗಳನ್ನು ಕೂಗಿದವರು ಮದ್ಯದ ಅಮಲಿನ ಪ್ರಭಾವದಲ್ಲಿರುವಂತೆ ತೋರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
“ಇದು ರೈತರ ಧ್ವನಿಯನ್ನು ನಿಗ್ರಹಿಸಲು ಒಂದು ನಿರ್ದಿಷ್ಟ ರಾಜಕೀಯ ಪಕ್ಷದಿಂದ ನಡೆಸಲ್ಪಟ್ಟ ಪಿತೂರಿಯಾಗಿದೆ. ಕೆಲವು ಯುವಕರನ್ನು ಉದ್ದೇಶಪೂರ್ವಕವಾಗಿ ರ‍್ಯಾಲಿಯನ್ನು ಅಡ್ಡಿಪಡಿಸಲು ಕಳುಹಿಸಲಾಗಿದೆ” ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬಿಕೆಯು ಟ್ರ್ಯಾಕ್ಟರ್ ಮೆರವಣಿಗೆಯನ್ನು ಆಯೋಜಿಸುವುದಾಗಿ ಟಿಕಾಯತ್ ಘೋಷಿಸಿದ್ದಾರೆ. ಮೆರವಣಿಗೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಸಾರ್ವಜನಿಕರ ಆಕ್ರೋಶವನ್ನು ಶಾಂತಗೊಳಿಸಲು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭಯೋತ್ಪಾದನಾ ವಿರೋಧಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಂಟ್ವಾಳ | ಮುಸ್ಲಿಮರು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ಮುಗಿಬಿದ್ದ ಸಂಘಪರಿವಾರದ ಕಾರ್ಯಕರ್ತರು!: ವೀಡಿಯೊ
ಬಂಟ್ವಾಳ | ಮುಸ್ಲಿಮರು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ಮುಗಿಬಿದ್ದ ಸಂಘಪರಿವಾರದ ಕಾರ್ಯಕರ್ತರು!: ವೀಡಿಯೊ

