ಎಎಪಿ ಶಾಸಕ ಋತುರಾಜ್ ಝಾ ಅವರ ಉಪನಾಮದ ಬಗ್ಗೆ ವಿವಾದಾತ್ಮಕ ಉಲ್ಲೇಖ ಮಾಡಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಶುಕ್ರವಾರ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ಬಿಜೆಪಿ ಈ ವಿವಾದವನ್ನು ತಣ್ಣಗೆ ಮಾಡಲು ಪ್ರಯತ್ನಿಸಿದೆ. ಎಎಪಿ ನಾಯಕನನ್ನು ನಿಂದಿಸಿ
ಬುಧವಾರ ದೂರದರ್ಶನ ಸುದ್ದಿ ವಾಹಿನಿಯ ಚರ್ಚೆಯ ಸಂದರ್ಭದಲ್ಲಿ ನಡೆದ ಬಿರುಸಿನ ಚರ್ಚೆಯಲ್ಲಿ, ಬಿಜೆಪಿ ನಾಯಕ ಪೂನವಾಲ್ಲಾ ಅವರು ಎಎಪಿ ನಾಯಕ ಋತುರಾಜ್ ಅವರನ್ನು ಟೀಕಿಸಲು ಅವರ ಉಪನಾಮವನ್ನು ಬಳಸಿದ್ದರು. ಅವರ ಈ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ನಿಂದನೀಯ ಎಂದು ಟೀಕಿಸಿತ್ತು.
ಈ ಹೇಳಿಕೆಗೆಳ ಬಗ್ಗೆ ಪತ್ರಿಕ್ರಿಯಿಸಿರುವ ಪೂನಾವಾಲ್ಲಾ, “ನನ್ನ ಎಲ್ಲಾ ಪೂರ್ವಾಂಚಲಿ ಸಹೋದರ ಸಹೋದರಿಯರಿಗೆ ನಾನು ಕೈಜೋಡಿಸಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಅವರಿಗೆ ನೋವುಂಟು ಮಾಡಿವೆ. ನಾನು ಯಾವುದೇ ಸಮರ್ಥನೆಯನ್ನು ನೀಡಲು ಬಯಸುವುದಿಲ್ಲ” ಎಂದು ಪೂನವಾಲ್ಲಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಎಎಪಿ ನಾಯಕನನ್ನು ನಿಂದಿಸಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಉತ್ತರ ಪ್ರದೇಶ ಮತ್ತು ಬಿಹಾರದ ಶ್ರಮಜೀವಿ ಜನರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಪೂನಾವಾಲ್ಲಾ ಅವರು ವಿಡಿಯೊದಲ್ಲಿ ಹೇಳಿದ್ದಾರೆ.
Main sabhi poorvanchali bhai behenon se pure dil se maafi maangta hoon ki mere shabdon se unhe dukh hua peeda hui.
Isme koi justification nahi dena chahta hoon.
UP Bihar ke sabhi log mere bahut sammanit hai aur main phir se maafi mangta hoon 🙏 pic.twitter.com/etyrUMijdN
— Shehzad Jai Hind (Modi Ka Parivar) (@Shehzad_Ind) January 17, 2025
ಋತುರಾಜ್ ಝಾ ಅವರನ್ನು ಟೀಕಿಸಲು ಪೂನಾವಾಲ್ಲಾ ಅವರು ಉಪನಾಮವನ್ನು ಬಳಸಿದ್ದರು. ಅವರ ಈ ಕೃತ್ಯದ ವಿರುದ್ಧ ಎಎಪಿ ಮಾತ್ರವಲ್ಲದೆ, ಬಿಜೆಪಿಯ ಮಿತ್ರ ಪಕ್ಷವಾದ ಜನತಾದಳ (ಯುನೈಟೆಡ್) ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ದೆಹಲಿ ರಾಜಕೀಯ ವಲಯದಲ್ಲಿ, ‘ಪೂರ್ವಾಂಚಲ್’ ಎಂಬುದು ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರವನ್ನು ಒಟ್ಟಾಗಿ ಉಲ್ಲೇಖಿಸುವ ಪದವಾಗಿದೆ. ಈ ಪ್ರದೇಶದ ಮತದಾರರು ರಾಷ್ಟ್ರ ರಾಜಧಾನಿ ದೆಹಲಿಯ ನಿರ್ಣಾಯಕ ಮತದಾರರಾಗಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಚುನಾವಣಾ ದೃಷ್ಟಿಯಿಂದ ಈ ಸಮುದಾಯವು ಹೆಚ್ಚು ಪ್ರಭಾವಶಾಲಿಯಾಗಿದೆ.
ದೆಹಲಿಯಲ್ಲಿ ಫೆಬ್ರವರಿ 5 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಮತಗಳ ಎಣಿಕೆ ನಡೆಯಲಿದೆ. ಈ ಸ್ಪರ್ಧೆಯನ್ನು 2015 ರಿಂದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಮತ್ತು ಬಿಜೆಪಿ ನಡುವೆ ನೇರ ಹೋರಾಟವೆಂದು ಪರಿಗಣಿಸಲಾಗುತ್ತಿದೆ. ಈ ನಡುವೆ ಕಾಂಗ್ರೆಸ್, 2013 ರವರೆಗೆ 15 ವರ್ಷಗಳ ಕಾಲ ನಿರಂತರವಾಗಿ ಆಳಿದ ನಗರವನ್ನು ಮರಳಿ ಪಡೆಯಲು ಶ್ರಮಿಸುತ್ತಿದೆ.
ಇದನ್ನೂಓದಿ: ಹೇಮಾ ಸಮಿತಿ ವರದಿ ಸಂಬಂಧ 40 ಎಫ್‌ಐಆರ್ ದಾಖಲು : ಹೈಕೋರ್ಟ್‌ಗೆ ತಿಳಿಸಿದ ಕೇರಳ ಸರ್ಕಾರ
ಹೇಮಾ ಸಮಿತಿ ವರದಿ ಸಂಬಂಧ 40 ಎಫ್‌ಐಆರ್ ದಾಖಲು : ಹೈಕೋರ್ಟ್‌ಗೆ ತಿಳಿಸಿದ ಕೇರಳ ಸರ್ಕಾರ


