ಭಾರತದ ಮುಖ್ಯ ನ್ಯಾಯಮೂರ್ತಿ ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ ಯಾಕೆ ಭಾಗಿಯಾಗಬೇಕು ಎಂದು ಆಶ್ಚರ್ಯವ್ಯಕ್ತಪಡಿಸಿದ್ದು, ಅಂತಹ ನಿಯಮಗಳನ್ನು “ಮರುಪರಿಶೀಲಿಸುವ” ಸಮಯ ಬಂದಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಶುಕ್ರವಾರ ಹೇಳಿದ್ದಾರೆ. ಸಿಬಿಐ ನಿರ್ದೇಶಕರ
ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಮಾತನಾಡಿದ ಅವರು, ತಮ್ಮ ಅಭಿಪ್ರಾಯದಲ್ಲಿ, ‘ಮೂಲ ರಚನೆಯ ಸಿದ್ಧಾಂತ’ವು ಬಹಳ “ಚರ್ಚಾಸ್ಪದ ನ್ಯಾಯಶಾಸ್ತ್ರದ ಆಧಾರ”ವನ್ನು ಹೊಂದಿದೆ ಎಂದು ಹೇಳಿದ್ದಾರೆ. ಸಿಬಿಐ ನಿರ್ದೇಶಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಿಮಗೆ ತಿಳಿಯಲು ಹೇಳುತ್ತಿದ್ದೇನೆ, ನಮ್ಮಂತಹ ದೇಶದಲ್ಲಿ ಅಥವಾ ಯಾವುದೇ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಕಾನೂನಿನ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಯಾಕೆ ಭಾಗವಹಿಸಬೇಕು?” ಎಂದು ಧನಕರ್ ಸಭೆಯನ್ನು ಕೇಳಿದ್ದಾರೆ.
“ಇದಕ್ಕೆ ಯಾವುದಾದರೂ ಕಾನೂನು ತಾರ್ಕಿಕತೆ ಇದೆಯೆ? ಅಂದಿನ ಕಾರ್ಯನಿರ್ವಾಹಕರು ನ್ಯಾಯಾಂಗ ತೀರ್ಪಿಗೆ ಮಣಿದ ಕಾರಣ ಶಾಸನಬದ್ಧ ಕಾನೂನು ರೂಪುಗೊಂಡಿದೆ ಎಂದು ನಾನು ಪ್ರಶಂಸಿಸಬಲ್ಲೆ. ಆದರೆ ಇದೀಗ ಇದನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಇದು ಖಂಡಿತವಾಗಿಯೂ ಪ್ರಜಾಪ್ರಭುತ್ವವಲ್ಲ. ಯಾವುದೇ ಕಾರ್ಯನಿರ್ವಾಹಕ ನೇಮಕಾತಿಯಲ್ಲಿ ನಾವು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೇಗೆ ಒಳಗೊಳ್ಳಲು ಸಾಧ್ಯ” ಅವರು ಹೇಳಿದ್ದಾರೆ.
ನ್ಯಾಯಾಂಗ ತೀರ್ಪಿನ ಮೂಲಕ ಕಾರ್ಯಾಂಗ ಆಡಳಿತ ನಡೆಸುವುದು ಈ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಇನ್ನು ಮುಂದೆ ಭರಿಸಲಾಗದ ಸಾಂವಿಧಾನಿಕ ವಿರೋಧಾಭಾಸವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಶಾಸಕಾಂಗ ಅಥವಾ ನ್ಯಾಯಾಂಗದಿಂದ ಆಡಳಿತದಲ್ಲಿನ ಯಾವುದೇ ಹಸ್ತಕ್ಷೇಪವು “ಸಾಂವಿಧಾನಿಕತೆಗೆ ವಿರುದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
ನ್ಯಾಯಾಂಗ ಪರಿಶೀಲನೆಯ ಶಕ್ತಿಯ ಕುರಿತು ಮಾತನಾಡಿದ ಅವರು, ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು “ಒಳ್ಳೆಯ ವಿಷಯ”, ಆದರೆ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಬಂದಾಗ, ಅಂತಿಮ ಅಧಿಕಾರ ಸಂಸತ್ತಿಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಇದನ್ನೂಓದಿ: ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ಸಭೆ ಸೇರಲಿರುವ ಮೋದಿ, ರಾಹುಲ್!


