ಹೈದರಾಬಾದ್: 2023ರಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ 30ರ ಹರೆಯದ ಕಿರುತರೆ ನಟಿ ಅಪ್ಸರಾ ಅವರ ಹತ್ಯೆ ಪ್ರಕರಣದಲ್ಲಿ ಆರ್ಚಕ ವೆಂಕಟ ಸಾಯಿ ಸೂರ್ಯ ಕೃಷ್ಣ (36) ಅವರಿಗೆ ಹೈದರಾಬಾದ್ ನ್ಯಾಯಾಲಯ ಬುಧವಾರದಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ್ದಕ್ಕಾಗಿ ನ್ಯಾಯಾಲಯವು ಹೆಚ್ಚುವರಿಯಾಗಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಈಗಾಗಲೇ ವಿವಾಹಿತನಾಗಿದ್ದ ಸಾಯಿ ಕೃಷ್ಣ, ಅಪ್ಸರಾ ಎಂಬ ಮಹಿಳೆಯೊಂದಿಗೆ ಮದುವೆಯ ಸುಳ್ಳು ಭರವಸೆ ನೀಡುವ ಮೂಲಕ ಸಂಬಂಧ ಬೆಳೆಸಿಕೊಂಡಿದ್ದನು. ಇಬ್ಬರೂ ಸ್ವಲ್ಪ ಸಮಯದವರೆಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಆದರೆ, ಅಪ್ಸರಾ ತನ್ನ ಭರವಸೆಯನ್ನು ಈಡೇರಿಸುವಂತೆ ಮತ್ತು ತನ್ನನ್ನು ಮದುವೆಯಾಗುವಂತೆ ಆರ್ಚಕನಿಗೆ ಒತ್ತಡ ಹೇರಲು ಪ್ರಾರಂಭಿಸಿದಾಗ, ಸಾಯಿ ಕೃಷ್ಣ ಅವಳನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದನು.
ಜೂನ್ 3, 2023ರಂದು ಆರ್ಚಕನು ಕೊಯಮತ್ತೂರಿಗೆ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಅಪ್ಸರಾಳನ್ನು ಮನವೊಲಿಸಿದನು. ಆ ರಾತ್ರಿ ಅವರು ರಲ್ಲಾಗುಡದಲ್ಲಿ ಊಟ ಮಾಡಿದರು ಮತ್ತು ಸುಲ್ತಾನಪಲ್ಲಿಯಲ್ಲಿರುವ ಗೋಶಾಲೆಗೆ ಭೇಟಿ ನೀಡಿದರು. ಆದಾಗ್ಯೂ ಜೂನ್ 4ರ ಮುಂಜಾನೆ ಆರ್ಚಕನು ಅಪ್ಸರಳನ್ನು ಶಂಷಾಬಾದ್ ಬಳಿಯ ನರ್ಖೋಡಾ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಲ್ಲಿನಿಂದ ಜಜ್ಜಿ ಹತ್ಯೆಗೈದ್ದಿದ್ದನು.
ನಂತರ ಅವನು ಆಕೆಯ ದೇಹವನ್ನು ಸರೂರ್ ನಗರಕ್ಕೆ ಸಾಗಿಸಿ, ಎಸ್‌ಆರ್‌ಒ ಕಚೇರಿ ಬಳಿಯ ಒಳಚರಂಡಿ ಮ್ಯಾನ್‌ಹೋಲ್‌ನೊಳಗೆ ಹಾಕಿ ಅದನ್ನು ಸಿಮೆಂಟ್‌ನಿಂದ ಮುಚ್ಚಿದ್ದನು. ನಂತರ ಜನರ ಗಮನವನ್ನು ಬೇರೆಡೆ ಸೆಳೆಯಲು ಮಹಿಳೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದನು.
ಅನುಮಾನದಿಂದ ತಪ್ಪಿಸಿಕೊಳ್ಳುವ ಆಶಯದೊಂದಿಗೆ ಕೃಷ್ಣ ದಿನಚರಿ ಮುಂದುವರಿಸಿದನು. ಆದಾಗ್ಯೂ ಕಾಣೆಯಾದ ವ್ಯಕ್ತಿಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅಂತಿಮವಾಗಿ ಕೊಲೆಯ ಪುರಾವೆಗಳು ಸಿಗದಂತೆ ಹೇಗೆ ತಪ್ಪಿಸಿಕೊಳ್ಳುವುದು. ಹತ್ಯೆಯನ್ನು ಹೇಗೆ ನಡೆಸುವುದು ಮತ್ತು ಶವವನ್ನು ವಿಲೇವಾರಿ ಮಾಡುವುದು ಹೇಗೆ ಎಂಬುದರ ಕುರಿತು ಕೃಷ್ಣ ಗೂಗಲ್ ನಲ್ಲಿಯೂ ಸಹ ಸರ್ಫ್ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸಾಯಿ ಕೃಷ್ಣನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ಪೂರ್ವಯೋಜಿತ ಕೊಲೆ ಮತ್ತು ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನಗಳ ಬಲವಾದ ಪುರಾವೆಗಳು ನ್ಯಾಯಾಲಯಕ್ಕೆ ಕಂಡುಬಂದವು, ಇದು ಬುಧವಾರದ ತೀರ್ಪಿಗೆ ಕಾರಣವಾಯಿತು.
ಪ್ರಾಸಿಕ್ಯೂಷನ್ ಪ್ರಕಾರ, ಈಗಾಗಲೇ ವಿವಾಹಿತನಾಗಿದ್ದ ಸಾಯಿ ಕೃಷ್ಣ, 30 ವರ್ಷದ ಮಹಿಳೆಯನ್ನು ತಾನು ಮದುವೆಯಾಗುತ್ತೇನೆ ಮತ್ತು ಅವಳೊಂದಿಗೆ ಸಂಬಂಧ ಬೆಳೆಸುತ್ತೇನೆ ಎಂದು ನಂಬಿಸಿದ್ದನು. ಅಪ್ಸರಾ ಅವರ ತಾಯಿ ಆರೋಪಿ ಅರ್ಚಕರಾಗಿದ್ದ ದೇವಸ್ಥಾನಕ್ಕೆ ಆಗಾಗ್ಗೆ ಹೋಗುತ್ತಿದ್ದರಿಂದ ಸಾಯಿ ಕೃಷ್ಣ ಬಲಿಪಶುವಿನ ಪರಿಚಯವಾಯಿತು. ಇದು 2023ರ ಆರಂಭದಲ್ಲಿ ಸಂಬಂಧಕ್ಕೆ ನಾಂದಿ ಹಾಡಿತು.
ಕೊಲೆಯ ನಂತರ ಆರ್ಚಕನು ತನ್ನ ಕಾರನ್ನು ತೊಳೆದು ತನ್ನ ಅಪಾರ್ಟ್ಮೆಂಟ್ ನಲ್ಲಿ ನಿಲ್ಲಿಸಿದನು. ಮರುದಿನ ಅವನು ಸ್ಥಳಕ್ಕೆ ಭೇಟಿ ನೀಡಿದನು ಮತ್ತು ಕೆಟ್ಟವಾಸನೆ ಬರುತ್ತಿರುವುದನ್ನು ಗಮನಿಸಿದ ನಂತರ, ಅವನು ಕೆಲವು ಕಾರ್ಮಿಕರನ್ನು ಕರೆದುಕೊಂಡು ಮ್ಯಾನ್‌ಹೋಲ್ ಅನ್ನು ಕಾಂಕ್ರೀಟ್‌ನಿಂದ ಮುಚ್ಚಿದನು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ಇದೆಲ್ಲದರ ನಂತರ ಸಾಯಿ ಕೃಷ್ಣ ಸಂತ್ರಸ್ತೆಯ ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದನು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ನಂತರ ಆರೋಪಿಯ ಹೇಳಿಕೆಯಲ್ಲಿ ವಿರೋಧಾಭಾಸಗಳಿವೆ ಎಂದು ಪೊಲೀಸರು ಕಂಡುಕೊಂಡರು. ಇದೇ ಕಾರಣಕ್ಕಾಗಿ ಆರ್ಚಕನನ್ನು ವಿಚಾರಣೆ ನಡೆಸಿದಾಗ ಅವನು ನಟಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು ಮತ್ತು ಬಂಧಿಸಲ್ಪಟ್ಟನು ಎಂದು ಶಂಷಾಬಾದ್ ಪೊಲೀಸರು ಈ ಹಿಂದೆ ತಿಳಿಸಿದ್ದರು.
ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಹೊಂದಿದೆ: ಜಸ್ಟೀಸ್ ನಾಗಮೋಹನ್ ದಾಸ್


