‘‘ತಾಲಿಬಾನ್‌ಗಳ ಪರವಾಗಿ ಪಂಜ್‌ಶೀರ್‌ನಲ್ಲಿ ‘ಏರ್‌ಸ್ಟ್ರೈಕ್’ ನಡೆಸುತ್ತಿರುವ ಪಾಕಿಸ್ತಾನ’’ ಎಂದು ಹೇಳಿ, ವಿಡಿಯೊ ಗೇಮ್ ಒಂದರ ವಿಡಿಯೊ ಇಟ್ಟುಕೊಂಡು ಸುದ್ದಿ ಮಾಡಿದ್ದ ರಿಪಬ್ಲಿಕ್ ಟವಿ, ಇದೀಗ ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದೇ ರೀತಿಯ ಸುಳ್ಳು ಹೇಳಿ ಸಿಕ್ಕಿಹಾಕಿಹೊಂಡಿದೆ. ಈ ಬಾರಿ, ಪಾಕಿಸ್ತಾನದ ಆಡಳಿತ ಪಕ್ಷವಾದ ‘ಪಾಕಿಸ್ತಾನ್ ತಹ್ರೀಕೆ ಇನ್ಸಫ್’ ವಕ್ತಾರ ಅಬ್ದುಲ್ ಸಮದ್ ಯಾಕೂಬ್ ಅವರು, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಸುಳ್ಳನ್ನು ಬಹಿರಂಗ ಪಡಿಸಿದ್ದಾರೆ.
ಸೆಪ್ಟೆಂಬರ್ 15 ರಂದು ಪ್ರಸಾರವಾದ “ದಿ ಡಿಬೇಟ್” ಕಾರ್ಯಕ್ರಮದಲ್ಲಿ ಅರ್ನಾಬ್ ಗೋಸ್ವಾಮಿ ಅವರು, “ತನ್ನಲ್ಲಿ ಇಂಟಲಿಜನ್ಸ್ ಮಾಹಿತಿಯಿದ್ದು, ಅಫ್ಘಾನ್‌ನ ಕಾಬೂಲ್‌ನಲ್ಲಿರುವ ಸೆರೆನಾ ಹೋಟೆಲ್(ಫೇಸ್‌ಬುಕ್ ಪೇಜ್) ನಲ್ಲಿ ಎಷ್ಟು ಮಂದಿ ಪಾಕಿಸ್ತಾನಿ ಅಧಿಕಾರಿಗಳು ತಂಗಿದ್ದಾರೆ ಎಂದು ತಿಳಿದಿದೆ” ಎಂದು ಹೇಳಿದ್ದರು. ಈ ಬಗ್ಗೆ ಬೇಕಾದರೆ ಪರಿಶೀಲಿಸುವಂತೆ ಅಬ್ದುಲ್ ಸಮದ್ ಅವರಿಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ: ತಾಲಿಬಾನ್ ಪರ ಪಾಕ್ ಆರ್ಮಿ ದಾಳಿ ಎಂದು ವಿಡಿಯೊ ಗೇಮ್ ಕ್ಲಿಪ್ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ
ಇಷ್ಟಕ್ಕೆ ಸುಮ್ಮನಿರದ ಅರ್ನಾಬ್ ಗೋಸ್ವಾಮಿ, “ಪಾಕಿಸ್ತಾನಿ ಅಧಿಕಾರಿಗಳು ಸೆರೆನಾ ಹೊಟೇಲ್‌ನ ಯಾವ ರೂಂನಲ್ಲಿ ಇದ್ದಾರೆ, ಅವರು ತಿನ್ನಲು ಏನು ಕೇಳಿದ್ದರು ಎಂಬುವುದು ನಾನು ಹೇಳಬಲ್ಲೆ. ನನ್ನ ಇಂಟಲಿಜೆನ್ಸ್ ಮಾಹಿತಿಯನ್ನು ಪ್ರಶ್ನಿಸಬೇಡಿ. ನಿಮ್ಮ ಮೇಲೆ ನಮಗೆ ವೈಮಾನಿಕ ಕಣ್ಗಾವಲು ಇದೆ” ಎಂದು ಹೇಳಿದ್ದರು.
ಅರ್ನಾಬ್ ಗೋಸ್ವಾಮಿ ಸುಳ್ಳನ್ನು ಬಹಿರಂಗ ಪಡಿಸಿದ ಪಾಕಿಸ್ತಾನದ ಆಡಳಿತ ಪಕ್ಷದ ವಕ್ತಾರ. ಈ ಹೇಳಿಕೆಯ ಬಗ್ಗೆ ಅರ್ನಾಬ್ ಅವರನ್ನು ಪಾಕಿಸ್ತಾನಿಗಳು ಟ್ರಾಲ್ ಮಾಡುತ್ತಿದ್ದಾರೆ
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ https://t.co/BpezAh3T6U pic.twitter.com/wVn5iHmmUI
— Naanu Gauri (@naanugauri) September 20, 2021
ಆದರೆ ಮರುದಿನ ಕೂಡಾ ಅರ್ನಾಬ್ ಗೋಸ್ವಾಮಿ ಅವರು ಅಬ್ದುಲ್ ಸಮದ್ ಅವರನ್ನು ತನ್ನ ಚಾನೆಲ್‌ಗೆ ಕರೆಸಿಕೊಂಡಿದ್ದಾರೆ.
ಈ ವೇಳೆ ಹಿಂದಿನ ದಿನದ ಮಾತನ್ನು ಅರ್ನಾಬ್‌ಗೆ ನೆನಪಿಸಿದ ಅಬ್ದುಲ್ ಸಮದ್, “ನಿನ್ನೆ ನೀವು ಸೆರೆನಾ ಹೋಟೆಲ್‌ನ ಐದನೇ ಮಹಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಇದ್ದಾರೆ ಎಂದು ಹೇಳಿದ್ದೀರಿ, ಈ ಬಗ್ಗೆ ನಾನು ಪರಿಶೀಲಿಸಿದ್ದೇನೆ. ನನ್ನ ಮಾಹಿತಿಗಳ ಪ್ರಕಾರ ಸೆರೆನಾ ಹೋಟೆಲ್‌ನಲ್ಲಿ ಇರುವುದೇ ಕೇವಲ ಎರಡು ಮಹಡಿ. ಅಲ್ಲಿ ಮೂರನೇ, ನಾಲ್ಕನೇ ಮತ್ತು ಐದನೆ ಮಹಡಿ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ವರದಿ: ರಿಪಬ್ಲಿಕ್ ಮತ್ತು ಟೈಮ್ಸ್ ನೌಗೆ ಛೀಮಾರಿ ಹಾಕಿದ ಬಾಂಬೆ ಹೈಕೋರ್ಟ್
ಇದಕ್ಕೆ ಯಾವುದೆ ತಾರ್ಕಿಕ ಉತ್ತರ ನೀಡದ ಅರ್ನಾಬ್ ಗೋಸ್ವಾಮಿ, ನಗುತ್ತಾ, “ಇದು ನೀವು ಮಾಡುವ ಕೆಲಸದ ಮಟ್ಟ… ಇದು ತಮಾಷೆಯಾಗಿದೆ. ಹಾಗಾದರೆ, ಪಾಕಿಸ್ತಾನಿ ಅಧಿಕಾರಿಗಳು ಸೆರೆನಾ ಹೋಟೆಲ್‌ನಲ್ಲಿದ್ದಾರೆ ಎಂದು ನಿಮಗೆ ತಿಳಿದಿದೆ. ನೀವು ಹೋಟೆಲ್‌ಗೆ ಕರೆ ಮಾಡಿ ಅದನ್ನು ದೃಡೀಕರಿಸಿದ್ದೀರಿ. ನಾನು ನಿಮ್ಮ ಮೇಲೆ ಒಂದು ತಂತ್ರ ಹೂಡಿ, ಐದನೆ ಮಹಡಿ ಎಂದು ಹೇಳಿದೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಸಿದ ಅಬ್ದುಲ್ ಸಮದ್, ನಾನು ಗೂಗಲ್‌ನಲ್ಲಿ ಮಾಹಿತಿ ಹುಡುಕಿದ್ದೇನೆ ಎಂದು ಹೇಳಿದ್ದಾರೆ.
ಅರ್ನಾಬ್ ಗೋಸ್ವಾಮಿ ಅವರ ಈ ಹೇಳಿಕೆಯನ್ನು ಪಾಕಿಸ್ತಾನಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್‌ಪಿ ದಾಹಕ್ಕೆ ಕಂಗನಾ ಬಲಿಪಶು?


