Homeಮುಖಪುಟಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು.

- Advertisement -
- Advertisement -

ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಮುಸ್ಲಿಮರ ಭಾವನೆಗಳನ್ನು ನೋಯಿಸಿದ ಆರೋಪದ ನಂತರ ಅಪರೂಪಕ್ಕೆ ಬೇಷರತ್‌ ಕ್ಷಮೆಯಾಚಿಸಿದೆ. ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿಯಾದ ಸುದ್ದಿ ಪ್ರಸಾರ ಮಾಡಿ ಸಿಕ್ಕಿಬಿದ್ದ ನಂತರ ಅರ್ನಬ್‌ ಗೋಸ್ವಾಮಿಯ ಚಾನೆಲ್‌ನ ಅಸಾಧಾರಣ ಕ್ಷಮೆಯಾಚನೆಯು ಹೊರಬಿದ್ದಿದೆ.

ರಿಪಬ್ಲಿಕ್‌ ಟಿವಿಯಲ್ಲಿ ಜಮಾತ್-ಇ-ಇಸ್ಲಾಮಿ ಭಾರತದ ಮುಖ್ಯಸ್ಥ ಮೌಲಾನಾ ಜಲಾಲುದ್ದೀನ್ ಉಮ್ರಿ ಭಯೋತ್ಪಾದಕ ಎಂದು ಸುಳ್ಳು ಆರೋಪವನ್ನು ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ನಂತರ ರಿಪಬ್ಲಿಕ್ ಟಿವಿಯು ಕ್ಷಮೆಯಾಚಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವಾರು ಮುಸ್ಲಿಂ ಗುಂಪುಗಳು ರಿಪಬ್ಲಿಕ್‌ ಮತ್ತು ಸಿಎನ್‌ಎನ್-ನ್ಯೂಸ್ 18 ಚಾನೆಲ್‌‌ಗಳ ಸುಳ್ಳು ಸುದ್ದಿ ಹರಡುವ ಕೃತ್ಯವನ್ನು ಖಂಡಿಸಿ ಪತ್ರವೊಂದನ್ನು ಬರೆದಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ. ಎಐಎಂಪಿಎಲ್‌ಬಿಯ ಪತ್ರದಲ್ಲಿ “ಸಿಎನ್‌ಎನ್-ನ್ಯೂಸ್ 18 ಚಾನೆಲ್‌ ಮುಸ್ಲಿಮರಿಗೆ ಪವಿತ್ರವಾದ ಮೂರು ತಾಣಗಳನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ‘ಭಯೋತ್ಪಾದಕ ಕಾರ್ಖಾನೆ’ಗೆ ಸಂಬಂಧಿಸಿವೆ ಎಂದು ತೋರಿಸುವ ಮೂಲಕ ಧರ್ಮನಿಂದನೆ ಮಾಡಿದ್ದನ್ನು ಖಂಡಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಕುರಿತು ಟ್ವಿಟ್ಟರ್‌ನಲ್ಲಿ “ಎಐಎಂಪಿಎಲ್‌ಬಿಯ ಉಪಾಧ್ಯಕ್ಷ ಎಂ.ಎಲ್.ಜಲಾಲುದ್ದೀನ್ ಉಮ್ರಿಯವರನ್ನು ರಿಪಬ್ಲಿಕ್‌ ಟಿವಿಯು ಭಯೋತ್ಪಾದಕನೆಂದು ಸುಳ್ಳು ಆರೋಪಿಸಿದ್ದಕ್ಕಾಗಿ ತೀವ್ರವಾಗಿ ಖಂಡಿಸುತ್ತೇವೆ. ಮೆಕ್ಕಾ, ಮದೀನಾ ಮತ್ತು ಕುಡ್ಸ್‌ನ ಕುರಿತು ಧರ್ಮನಿಂದನೆ ಮಾಡಿದ್ದಕ್ಕೆ CNNnews18 ನ ಕ್ರಮವನ್ನು ಖಂಡಿಸುತ್ತೇವೆ. ಈ ಕುರಿತು ಸಾರ್ವಜನಿಕವಾಗಿ ಎರಡು ಚಾನೆಲ್‌ಗಳು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು. ಅದರ ಟ್ವೀಟ್‌ನಲ್ಲಿ, “ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವನ್ನು ತಪ್ಪಾಗಿ ಪ್ರಸಾರ ಮಾಡಿದ್ದಕ್ಕಾಗಿ ಸ್ಪಷ್ಟೀಕರಣ ಮತ್ತು ಕ್ಷಮೆಯಾಚನೆಯನ್ನು ರಿಪಬ್ಲಿಕ್ ಟಿವಿಯಲ್ಲಿ ಸಂಜೆ 4:03 ಕ್ಕೆ ಪ್ರಸಾರ ಮಾಡಲಾಯಿತು. ಇದು ಅಜಾಗರೂಕ ದೋಷವಾಗಿದ್ದು, ಸಂಬಂಧಪಟ್ಟ ವೀಡಿಯೊದಲ್ಲಿ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವು ನಮ್ಮ ತಪ್ಪಾಗಿ ಪ್ರಸಾರವಾಯಿತು ಮತ್ತು ತಕ್ಷಣ ಸರಿಪಡಿಸಲಾಗಿದೆ”

ಅದರ ನಂತರದ ಟ್ವೀಟ್‌ನಲ್ಲಿ, “ರಿಪಬ್ಲಿಕ್ ಟಿವಿ ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತದೆ” ಎಂದು ಬರೆದಿದೆ.

ರಿಪಬ್ಲಿಕ್ ಟಿವಿ ತನ್ನ ವೆಬ್‌ಸೈಟ್‌ನಿಂದ ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿರುವಂತೆ ತೋರುತ್ತಿದೆ ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ವಿರುದ್ಧ ಸರಕಾರದ ದಬ್ಬಾಳಿಕೆಯ ಕುರಿತಾದ ತನ್ನ ವರದಿಯನ್ನು ನವೀಕರಿಸಿದೆ. ಕಣಿವೆಯ ಜಮಾತೆ-ಇ-ಇಸ್ಲಾಮಿ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಿಎನ್ಎನ್-ನ್ಯೂಸ್ 18 ಚಾನೆಲ್‌ನ ಅವಾಂತರಗಳು

ಮತ್ತೊಂದೆಡೆ, ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಒಡೆತನದ ಚಾನೆಲ್ ಸಿಎನ್ಎನ್-ನ್ಯೂಸ್ 18 ಚಾನೆಲ್‌ ಇನ್ನಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಚಾನೆಲ್‌ ವಿಶ್ವದಾದ್ಯಂತ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಎಐಎಂಪಿಎಲ್‌ಬಿಯು ಆರೋಪಿಸಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಆಸ್ತಿ ವಿವರಗಳನ್ನು ಚಾನೆಲ್ ಶನಿವಾರ ತನ್ನ ಪ್ರಸಾರದಲ್ಲಿ ತಿಳಿಸಿದೆ. ಆಗ ಅದು ‘ಬಹವಾಲ್‌ಪುರದ ಜೆಎಂ ಭಯೋತ್ಪಾದಕ ಕಾರ್ಖಾನೆ’ ಎಂಬ ಮುಖ್ಯಾಂಶಗಳನ್ನು ಪ್ರಸಾರ ಮಾಡುತ್ತಿರುವಾಗ, ಮೆಕ್ಕಾದ ಬೃಹತ್‌ ಮಸೀದಿಯ ಫೋಟೋಗಳನ್ನು ತೋರಿಸಿದೆ. ಮದೀನಾದ ಮಸೀದಿ ಮತ್ತು ಅಲ್-ಅಕ್ಸಾವನ್ನು ಕೂಡ ಅಜರ್‌ನ ಭಯೋತ್ಪಾದಕ ಕಾರ್ಖಾನೆಯ ಭಾಗವೆಂದು ಪ್ರಸಾರ ಮಾಡಿದೆ. ಈ ಮಸೀದಿಗಳನ್ನು ವಿಶ್ವದಾದ್ಯಂತ ಮುಸ್ಲಿಮರಿಗೆ ಮೂರು ಅತ್ಯಂತ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ.

ಎಐಎಂಪಿಎಲ್‌ಬಿಯ ಪತ್ರವು ಸಿಎನ್ಎನ್-ನ್ಯೂಸ್ 18 ರ ನ್ಯೂಸ್ ಫ್ಲ್ಯಾಷ್ ಅನ್ನು ಚೇಷ್ಟೆಯೆಂದು, ಇಸ್ಲಾಂ ಧರ್ಮವನ್ನು ಕೆಣಕಲು ಮತ್ತು ಮುಸ್ಲಿಮರನ್ನು ಕೆರಳಿಸಲು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದೆ. ಜಗತ್ತಿನಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಂಬಲಾಗದಷ್ಟು ಕೋಮುಪ್ರಚೋದನೆಯ ಪ್ರಸಾರಕ್ಕಾಗಿ ಚಾನೆಲ್ ಇನ್ನೂ ಕ್ಷಮೆಯಾಚಿಸಿಲ್ಲ. ಇಸ್ಲಾಂ ಧರ್ಮದ ಮೂರು ಪವಿತ್ರ ತಾಣಗಳ ಚಿತ್ರಗಳನ್ನು ‘ಜೆಎಂ ಭಯೋತ್ಪಾದಕ ಅಂಶ’ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರ ಮಾಡುವ ಮೂಲಕ, ಚಾನೆಲ್ ಮುಸ್ಲಿಮರನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸಿದೆ.

ಒಟ್ಟಿನಲ್ಲಿ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಸುದ್ದಿ ಹರಡುವಲ್ಲಿ ನಿರತವಾಗಿವೆ. ಆ ಮೂಲಕ ಪತ್ರಿಕೋದ್ಯಮದ ಮೂಲ ಆಶಯಗಳನ್ನು ಮಣ್ಣು ಮಾಡುತ್ತಿವೆ. ಆದರೆ ಇದರ ವಿರುದ್ಧ ದೂರು ನೀಡುವ, ಸುಳ್ಳುಗಳನ್ನು ಬಯಲು ಮಾಡುವ ಕೆಲಸವೂ ಕೂಡ ನಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.

ಕೃಪೆ: ಜನತಕಾರಿಪೋರ್ಟರ್‌

(ಈ ಲೇಖನ 2019ರ ಮಾರ್ಚ್‌ 3 ರಂದು ಜನತಕಾರಿಪೋರ್ಟರ್‌ನಲ್ಲಿ ಪ್ರಕಟವಾಗಿದ್ದು. ಮಾಧ್ಯಮಗಳು ಹೇಗೆ ಸುಳ್ಳು ಹಬ್ಬಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿದ್ದರಿಂದ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ)


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಭಾರತದ ದೇಶದಲ್ಲಿನ ಮಾಧ್ಯಮದ ಸೂ……ಮಕ್ಕಳು ಹೀಗೆ ಸುಮ್ಮನೆ ಸುಳ್ಳಿನ ಸುದ್ದಿ ಹರಡಿ ಭಾರತದ ದೇಶವನ್ನು ಛಿದ್ರ ಛಿದ್ರ ಛಿದ್ರವಾಗಿ ಮಾಡಿದರೆ……ಇದಕ್ಕೆ ಮೂಲ ಪುರುಷನೇ ನರೇಂದ್ರ ಮೋದಿ ಅವನು ಗೆಲ್ಲಲು ಮುಖ್ಯ ಕಾರಣ 2 ಜಿ ಸ್ಪ್ರೆಕ್ಟ್ರಂ ಅದು ನಮಗೆ ಮಹಾನಾಯಕ ಸುಳ್ಳು ಎಂದೂ ಅಂದೇ ಅದರ ಬಗ್ಗೆ ಲೇಖನವೇ ಬರೆದಿದ್ದೇ, ಒಬ್ಬ ಸಾಮಾನ್ಯ ದಲಿತ ನಾಯಕನು ಅಷ್ಟು ದೊಡ್ಡ ಹಗರಣವನ್ನು ಮಾಡಲು 1,76,000 ಲಕ್ಷ ಕೋಟಿ ರೂ ಹಗರಣವನ್ನು ಸಾಧ್ಯವಿಲ್ಲವೆಂದು, ಆ ಹಣವನ್ನು ಇಡಲೂ ಸಹ ದಾರಿ ಅರಿಯಲು ಸಾಧ್ಯವಿಲ್ಲವೆಂದು. ಜೊತೆಗೆ ಆತ ಹೊಸಬ ಬಡತನದಿಂದಲೀ ಕುಗ್ರಾಮದಿಂದಲೀ ಬಂದವನು. ಜೊತೆಗೆ ಹಾಗೆಯೇ ಕದ್ದದ್ದು ನಿಜವೇ ಆದರೇ, ತನ್ನ ಗ್ರಾಮದಲ್ಲಿ ಜಮೀನನ್ನು ಕೆಲವೇ ಕೆಲವರು ಬೆರಳೆಣಿಕೆಯಷ್ಟು ಆಸ್ತಿ ಮಾಡಲೇ ಬೇಕಿತ್ತು. ಹೋಗಲೀ ಅವನದು ಜೀವನ ಬಾಳ್ವೇ ಐದು ಪೈಸೆಯಾದರು ಬದಲಾಗಲೇಬೇಕಿತ್ತು. ಜೊತೆಗೆ ಅಗಾಧವಾದ ಜ್ಞಾನವು ಚತುರತೆಯೂ ಮೋಸವು ಗೊತ್ತಿರಬೇಕಿತ್ತು. ಹೋಗಲೀ ಮನ ಮೋಹನ್ ಸಿಂಗ್ ರವರನ್ನು ಹೆದರಿಯಿರಬೇಕಿತ್ತು. ಆದರೇ, ಪ್ರಧಾನಿಗೇ ಗೌರವಿಸದ ಅಹಂ ಇರಬೇಕಾದರೇ ಅದರಲ್ಲಿ ಸತ್ಯ ನ್ಯಾಯ ಧರ್ಮ ನೀತಿ ನಿಯಮ ಇತ್ತು. ಅದಕ್ಕೆ ಮೊದಲು ಸ್ವಾಭಿಮಾನ ಸ್ವಂತಿಕೆಯೇ ತುಂಬಿದ್ದೇ ಕಂಡಿದ್ದೇವು.

    ಬರೆಯಲು ಬಹಳಷ್ಟು ಇದೇ ಸದ್ಯಕ್ಕೆ ಬೇಡ ನಿಲ್ಲಿಸುವೇ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...