Homeಮುಖಪುಟಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

ಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

- Advertisement -
- Advertisement -

ಭಾರತದ ಮಾನವ ಹಕ್ಕುಗಳ ಆತಂಕಕಾರಿ ಪರಿಸ್ಥಿತಿ ಈಗಾಗಲೇ ಜಗತ್ತಿನ ಮುಂದೆ ಬಯಲಾಗಿರುವಂಥದ್ದು. ಒಂದೆಡೆ ತೀವ್ರ ಬಲಪಂಥೀಯ ದುಷ್ಕರ್ಮಿಗಳಿಂದ ದಲಿತರು, ಅಲ್ಪಸಂಖ್ಯಾತರು ಮತ್ತು ಇನ್ನಿತರ ತಳಸಮುದಾಯಗಳ ಜನರು ಹಲ್ಲೆಗೀಡಾಗುತ್ತಿದ್ದರೆ ಮತ್ತೊಂದೆಡೆ ಪ್ರಭುತ್ವ ಮತ್ತು ನ್ಯಾಯಾಂಗಗಳೂ ಕೂಡಾ ಮಾನವ ಹಕ್ಕುಗಳ ಹರಣಕ್ಕೆ ಕಾರಣವಾಗುತ್ತಿರುವ ದುರಂತಮಯ ಸನ್ನಿವೇಶ ನಮ್ಮೆದುರಿಗಿದೆ. ಭೀಮಾ ಕೋರೆಗಾಂವ್ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ಹಲವು ನ್ಯಾಯವಾದಿಗಳೂ ಸೇರಿದಂತೆ ಹಿರಿಯ ಸಾಮಾಜಿಕ ಕಾರ್ಯಕರ್ತರನ್ನು ಒಂದೆಡೆ ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿರಿಸಲಾಗಿದ್ದರೆ, ರಾಜದ್ರೋಹದ ಪ್ರಕರಣದಡಿ ಅನಗತ್ಯವಾದ ಆರೋಪಗಳನ್ನು ಹೊರಿಸಿ ಬಂಧಿಸಲಾಗಿರುವ ಸಾಹಿತಿಗಳು, ಬುದ್ಧಿಜೀವಿಗಳು, ಹೋರಾಟಗಾರರ ಪಟ್ಟಿಯಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕವಿ, ಹೋರಾಟಗಾರ ವರವರರಾವ್ ಅವರಿಂದ ಹಿಡಿದು (ಈಚೆಗಷ್ಟೇ ಅನಾರೋಗ್ಯದ ಕಾರಣಕ್ಕೆ ಇವರಿಗೆ 6 ತಿಂಗಳ ಜಾಮೀನನ್ನು ನೀಡಲಾಗಿದೆ) ಭಾರತದ ಅತ್ಯಂತ ಪ್ರಖರ ಚಿಂತಕ, ದಲಿತ ಲೇಖಕರಲ್ಲೊಬ್ಬರಾದ ಆನಂದ್ ತೇಲ್ತುಂಬ್ಡೆಯವರ ತನಕ ಎಲ್ಲರನ್ನೂ ಇಂದು ಸರಳುಗಳ ಹಿಂದಿರಿಸಲಾಗಿರುವುದು ಈ ದೇಶದ ಪ್ರಜಾತಂತ್ರದ ದುಸ್ಥಿತಿಗೆ ಸಾಕ್ಷಿಯಾಗಿದೆ.

ಮೊದಲಿಗೂ ಮತ್ತು ಈಗಲೂ ಈ ಪಟ್ಟಿಯಲ್ಲಿ ಹಲವು ಮಹಿಳೆಯರ ಹೆಸರುಗಳೂ ಸೇರಿವೆ. ಭೀಮಾ ಕೋರೆಗಾಂವ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಶೋಮಾ ಸೆನ್, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದವರ ಬಂಧನವಾಗಿ ವರ್ಷಗಳೇ ಕಳೆದವು. ನಾಗರಿಕತ್ವ ತಿದ್ದುಪಡಿ ಕಾಯ್ದೆಯ ಕರಾಳತೆಯ ವಿರುದ್ಧ ದನಿಯೆತ್ತಿದವರು ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆಗಳ ತದನಂತರದ ಬಲಿಪಶುಗಳಾದರೆ, ಇದೀಗ ರೈತ ಹೋರಾಟಗಾರರು ಮತ್ತವರ ಬೆಂಬಲಿಗರ ಸರದಿ.

ಸುಪ್ರಿಯಾ ಶರ್ಮ

ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವಾರ್ಷಿಕ ವರದಿಯ ಪ್ರಕಾರ, 2020-21ರ ನಡುವಿನ ಮಾನವ ಹಕ್ಕುಗಳ ಉಲ್ಲಂಘನೆಯು 2020ರ ವರ್ಷದ ಆರಂಭದಿಂದಲೇ ಶುರುವಾಯಿತು. ಸಿಎಎ ವಿರೋಧಿ ಹೋರಾಟವನ್ನು ಅಮಾನ್ಯಗೊಳಿಸಲು ದೆಹಲಿಯಲ್ಲಿ ಸಂಘಪರಿವಾರ ಪ್ರೇರಿತವಾದ ಗಲಭೆಗಳಲ್ಲಿ ಸುಮಾರು 53 ಜನರು ಸತ್ತು ಅಪಾರ ಆಸ್ತಿಪಾಸ್ತಿ ನಷ್ಟವಾಯಿತು. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಗಲಭೆಯನ್ನು ಸೃಷ್ಟಿಸಿದ ಆರೋಪದಲ್ಲಿ ಹಲವು ತಿಂಗಳುಗಳ ಕಾಲ ಬಂಧನಗಳು ಮತ್ತು ಬಂಧನದ ಭಯಾತಂಕಗಳನ್ನು ಹುಟ್ಟಿಸುವ ಕೆಲಸಗಳು ರಾಜಧಾನಿಯಲ್ಲಿ ಮತ್ತು ಇತರ ಹಲವು ನಗರಗಳಲ್ಲಿ ನಡೆದವು. ಸುಪ್ರಿಯಾ ಶರ್ಮ, ಸಂಗೀತಾ ಬರೂಹಾ, ರಾಣಾ ಅಯೂಬ್ ಮುಂತಾದ ಪತ್ರಕರ್ತೆಯರನ್ನೂ ಒಳಗೊಂಡು ಹಲವರನ್ನು ಆರೋಪಿಸಲಾಯಿತು.

ಕೋವಿಡ್‌ನ ಸಂದರ್ಭದಲ್ಲೂ ಕೂಡಾ ಹಲವು ಬಗೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದವೆಂದು ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಷ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಉಲ್ಲೇಖಿಸುತ್ತಾರೆ. ಹಾಗೆಯೇ ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಲಾದ ಸಂದರ್ಭದಲ್ಲೂ ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿಯಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ನಡೆದ ಕಾನೂನು ಉಲ್ಲಂಘನೆಗಳ ದೊಡ್ಡಪಟ್ಟಿಯನ್ನೇ ನೀಡುತ್ತಾರೆ. ರಾಜಕೀಯ ಪ್ರೇರಿತ ಹಲ್ಲೆಗಳು, ಗೃಹಬಂಧನಗಳಿಂದ ಹಿಡಿದು ಇಂಟರ್ನೆಟ್ ಕಡಿತದ ತನಕ ಇದು ವಿಸ್ತರಿಸುತ್ತದೆ.

ಸಂಗೀತಾ ಬರೂಹಾ

ಈಚೆಗಷ್ಟೇ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಂಗಳೂರಿನ 21 ವರ್ಷದ ಪ್ರಕೃತಿ ಪ್ರೇಮಿ, ಸಾಮಾಜಿಕ ಕಳಕಳಿಯ ಪರಿಸರ ಕಾರ್ಯಕರ್ತೆ, ವಿದ್ಯಾರ್ಥಿನಿ ದಿಶಾ ರವಿಯ ಪ್ರಕರಣ ಈ ಎಲ್ಲದಕ್ಕೆ ಒಂದು ಜ್ವಲಂತ ನಿದರ್ಶನವಾಗಿದ್ದರೆ ಹರ್ಯಾಣದ ದಲಿತ ಸಾಮಾಜಿಕ ಕಾರ್ಯಕರ್ತೆ ನೌದೀಪ್ ಕೌರ್ ಪ್ರಕರಣ ಈ ಬಂಧನದ ಸರಣಿಗಳು ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಗೊಳಿಸುತ್ತಿವೆ. ದಿಶಾ ರವಿ ಪ್ರಕರಣದಲ್ಲಿ ಆಕೆಯ ಜಾಮೀನು ಮತ್ತು ಸುರಕ್ಷತೆಯ ಮನವಿಗಳನ್ನೂ ಪುರಸ್ಕರಿಸದೆ, ಈ ಹಿಂದೆಂದೂ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿಲ್ಲದ ಸರಳವಾದ ವಿದ್ಯಾರ್ಥಿನಿಯೊಬ್ಬಳನ್ನು ನ್ಯಾಯಾಂಗ ಬಂಧನಕ್ಕೂ ನೀಡದೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಅತ್ಯಂತ ಆಘಾತಕಾರಿಯಾಗಿತ್ತು. ಆಕೆಯ ಮೇಲೆ ಹೊರಿಸಲಾದ ಆರೋಪಗಳನ್ನು ನೋಡಿದರೆ, ಯೋಗ, ಚಹಾ ಮತ್ತು ಸರ್ಕಾರದ ರೈತವಿರೋಧಿ ನೀತಿಗಳನ್ನು ವಿಡಂಬನಾತ್ಮಕವಾಗಿ ಬಳಸಿ ಜಾಲತಾಣಗಳಲ್ಲಿ ಆಕೆ ಮಾಡಿದ ಕಮೆಂಟ್‌ಗಳೇ ದೇಶದ ಭದ್ರತೆಗೆ ಈಗಿರುವ ಅತಿದೊಡ್ಡ ಅಪಾಯವೆಂಬಂತೆ ಸರ್ಕಾರ ಬಿಂಬಿಸಲು ನೋಡುತ್ತಿದೆ.

ನೌದೀಪ್ ಕೌರ್

ಇಡೀ ವಿಶ್ವಕ್ಕೆ ಗೊತ್ತಿರುವ ಗ್ರೇಟ್ ಥನ್‌ಬರ್ಗ್ ಅವರ ಟೂಲ್‌ಕಿಟ್ ಟ್ವೀಟನ್ನು ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ಮಟ್ಟಕ್ಕೆ ಮೋದಿ ಸರ್ಕಾರ ತೆಗೆದುಕೊಂಡು ಹೋಗುತ್ತದೆಂದರೆ ಯಾವ ಮಟ್ಟದ ಫ್ಯಾಸಿಸ್ಟ್ ಪ್ರವೃತ್ತಿ ಆಡಳಿತದಲ್ಲಿ ಬೆಳೆದಿದೆಯೆಂಬುದು ತಿಳಿಯುತ್ತದೆ. ಹಾಗೆಯೇ ನೌದೀಪ್ ಎಂಬ ಹರ್ಯಾಣದ ಕುಂಡಲಿಯ ಯುವತಿಯ ಬಂಧನದ ಪ್ರಕರಣವೂ ಕೂಡಾ. ಅಲ್ಲಿನ ದಲಿತ ಮತ್ತು ಕಾರ್ಮಿಕರ ಸಮುದಾಯವನ್ನು ಸಂಘಟಿಸುತ್ತಾ, ಅದರೊಂದಿಗೆ ರೈತ ಆಂದೋಲನವನ್ನು ಬೆಸೆಯಲೆಂದು ಕೆಲಸ ಮಾಡುತ್ತಿದ್ದ ಸಂಘಟನೆಯ ನೌದೀಪ್ ಕೌರ್‌ರನ್ನು ಜನವರಿ ತಿಂಗಳ 12ರಂದು ಬಿಜೆಪಿ ಆಡಳಿತದಲ್ಲಿರುವ ಹರ್ಯಾಣದ ಪೊಲೀಸರು ಬಂಧಿಸಿದ್ದರು. ಆಕೆಯ ಮೇಲೆ ರಾಜದ್ರೋಹ, ದೇಶದ ಭದ್ರತೆಗೆ ಧಕ್ಕೆಯಂತಹವನ್ನೂ ಒಳಗೊಂಡು ಹೊರಿಸಲಾಗಿರುವ ಹಲವು ಆರೋಪಗಳ ಗಹನತೆಗೂ ಆಕೆಯ ಸಾಮಾಜಿಕ ಕೆಲಸಗಳ ಹಿನ್ನೆಲೆಗೂ ಅರ್ಥಾತ್ ಸಂಬಂಧವಿಲ್ಲ. ಇದನ್ನೇ ಆಕೆಯ ತಾಯಿ ಮತ್ತು ಮಗಳ ಹೋರಾಟಕ್ಕೆ ಸದಾ ಬೆಂಗಾವಲಾಗಿ ನಿಂತಿರುವ ಸಬರ್‌ಜೀತ್ ಕೌರ್ ಅವರೂ ಕೂಡಾ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಷ್ಟಾಗಿಯೂ ಆಕೆಗೆ ಜಾಮೀನು ದೊರೆಯಲು ಹೆಚ್ಚೂ ಕಡಿಮೆ ಎರಡು ತಿಂಗಳ ಸಮಯ ಬೇಕಾಯಿತು. ರೈತ ಆಂದೋಲನದ ವಾಸ್ತವಗಳನ್ನು ಬಿಚ್ಚಿಟ್ಟ ಪತ್ರಕರ್ತರ ಬಂಧನಗಳನ್ನೂ ನಾವು ನೋಡುತ್ತಿದ್ದೇವೆ.

ರಾಣಾ ಅಯೂಬ್

ಇದೇ ಸಂದರ್ಭದಲ್ಲಿ, ಇವೆಲ್ಲ ಬಂಧನಗಳ ಕಥೆಗಳಾದರೆ, ಬಂಧನಕ್ಕೊಳಗಾಗದೆ ರಾಜಾರೋಶವಾಗಿ ತಿರುಗಾಡುತ್ತಿರುವವರ ಇನ್ನೊಂದು ಮಗ್ಗುಲಿನ ಹಲವು ಕಥೆಗಳಿವೆ. ನಿಜಕ್ಕೂ ಕಾನೂನು ಉಲ್ಲಂಘನೆಯ ಕೆಲಸ ಮಾಡಿದ, ರೈತ ಆಂದೊಲನದಲ್ಲಿರಲಿ, ಸಿಎಎ ಹೋರಾಟದ ಸಂದರ್ಭದ ಗಲಭೆಯಲ್ಲಿರಲಿ ವಿಡಿಯೋ ಸಾಕ್ಷಾಧಾರಗಳ ಸಮೇತ ಕಂಡಿರುವ ಸಂಘಪರಿವಾರದ ಗೂಂಡಾಗಳು, ಜನಪ್ರತಿನಿಧಿಗಳು, ಅವರ ಬೆಂಬಲಿಗರ ಮೇಲೆ ಬಂಧನವಿರಲಿ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ ಎಂಬುದು ಆತಂಕದ ವಿಚಾರವಲ್ಲವೇ?
ಒಟ್ಟಿನಲ್ಲಿ ಬಂಧನಗಳ ವರಸೆಯಲ್ಲಿ ಸಾಮಾಜಿಕ ಕಾರ್ಯಕರ್ತೆರು, ಪತ್ರಕರ್ತೆಯರನ್ನೂ ಮೊದಲುಗೊಂಡು ಅನೇಕ ಮಹಿಳೆಯರನ್ನೂ ಬಲಿಪಶುವಾಗಿಸಲು ನೋಡುತ್ತಿರುವ ಸರ್ಕಾರದ ಇಂತಹ ಪ್ರಯತ್ನಗಳಿಗೆ ಈ ಎಲ್ಲ ದಿಟ್ಟ ಮಹಿಳೆಯರು ಗಟ್ಟಿಯಾಗಿ ಎದುರು ನಿಂತಿರುವುದು ಮತ್ತು ದಿಶಾ ರವಿ ಪ್ರಕರಣದಲ್ಲಿ ಮತ್ತು ಪ್ರಿಯಾ ರಮಣಿಯವರ ಪ್ರಕರಣಗಳಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ಸ್ಪಷ್ಟವಾದ ಅನಿಸಿಕೆಗಳ ಹಾಗೆ ಅವರನ್ನು ಬೆಂಬಲಿಸುವ ದನಿಗಳೂ ಸಹಾ ಕೇಳಿಬರುತ್ತಿರುವುದು ಸಮಾಧಾನದ ಸಂಗತಿ.

ಮಲ್ಲಿಗೆ

ಮಲ್ಲಿಗೆ
ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ಜನಶಕ್ತಿಯ ಸಕ್ರಿಯ ಸದಸ್ಯರು


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...