Homeಕರ್ನಾಟಕಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ...

ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

- Advertisement -
- Advertisement -

ಸೆಪ್ಟೆಂಬರ್ 6ರಂದು ಗದಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಅದು ನಿವೃತ್ತ ಶಾಲಾ ಶಿಕ್ಷಕರೊಬ್ಬರ ಸಾವಿಗೆ ಗೌರವ ಸಲ್ಲಿಸಲು ಜಿಲ್ಲಾಡಳಿತ ತೆಗೆದುಕೊಂಡ ಸಜ್ಜನಿಕೆಯ ಕ್ರಮವಾಗಿತ್ತು.

‘ಅಣ್ಣಿಗೇರಿ ಮಾಸ್ತರು’ ಎಂದೇ ಗದಗಿನಲ್ಲಿ ಜನಪ್ರಿಯರಾಗಿದ್ದ ಮತ್ತು ಗೌರವಯುತರಾಗಿದ್ದ ಬಸಪ್ಪ ಗುರಪ್ಪ ಅಣ್ಣಿಗೇರಿಯವರು ಸೆಪ್ಟೆಂಬರ್ 5ರಂದು ಶಿಕ್ಷಕ ದಿನಾಚರಣೆಯಂದೇ ನಿಧನರಾಗಿದ್ದು ಕಾಕತಾಳೀಯವೇ ಇರಬಹುದು. ಆದರೆ, ಗದಗಿನಲ್ಲಿ ಅವರೆಂದೂ ಮರೆಯದ ‘ಶಿಕ್ಷಣ ಸಂತ’ ಎಂಬ ಹೆಸರಿನಿಂದ ಸದಾ ಜೀವಂತವಾಗಿರಲಿದ್ದಾರೆ.

ಅವರು ಇಲ್ಲಿ ಸರ್ಕಾರಿ ಶಾಲೆಯ ಮಾಸ್ಟರ್ ಆಗಿದ್ದಾಗ ಆರಂಭಿಸಿದ ಉಚಿತ ಟ್ಯೂಷನ್ ತರಗತಿಗಳನ್ನು ತಮ್ಮ ಕೊನೆಯ ದಿನದವರೆಗೂ ನಡೆಸಿಕೊಂಡು ಬಂದರು. ಅವರ ವಿಶೇಷಾಸಕ್ತಿಯಿಂದ ಪಠ್ಯ ಮತ್ತು ಬದುಕಿನ ಅರಿವು ಪಡೆದ ಸಾವಿರಾರು ಶಿಷ್ಯರು ಇವತ್ತು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಗದಗ ಜಿಲ್ಲೆ ರೋಣ ತಾಲೂಕಿನ ಮುದೇನಗುಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಮಾಸ್ತರರು ಬಡತನದಲ್ಲೇ ಶಿಕ್ಷಣ ಪಡೆದು, ನಂತರ ಧಾರವಾಡದ ಮುರುಘಾಮಠದ ಹಾಸ್ಟೇಲ್ ಸೌಲಭ್ಯದ ಕಾರಣಕ್ಕಾಗಿ ಬಿ.ಎ ಪದವಿ ಮತ್ತು ಶಿಕ್ಷಕ ತರಬೇತಿ ವಿಷಯದಲ್ಲಿ ಪಾಸಾಗುತ್ತಾರೆ. ಗದಗಿನ ಮಾಡೆಲ್ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು, ತಮ್ಮ ಸಂಬಳದ ಹಣ ಉಳಿಸಿ ಮುಂಜಾನೆ ಮತ್ತು ಸಂಜೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತ ಬಂದರು. ಸಾಯುವವರೆಗೂ ಈ ಕಾಯಕ ಮುಂದುವರೆದೇ ಇತ್ತು.

‘ಅವ್ರ ಬಗ್ಗೆ ಏನ್ ಹೇಳೋದ್ ಬಿಡಿ. ಒಂಥರಾ ನಮಗೆಲ್ಲ ಅವ್ರು ದೇವರೇ’ ಎನ್ನುತ್ತಾರೆ ಅವರ ಬಳಿ ಗಣಿತ, ಇಂಗ್ಲಿಷ್ ಪಾಠಗಳನ್ನು ಕಲಿತ ಪಾಲಿಟೆಕ್ನಿಕ್ ಉಪನ್ಯಾಸಕ ವಕ್ಕಲದ. ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಫೀಕ್ ಕೆರೂರ್ ಹೇಳುತ್ತಾರೆ: ‘ಅವರು ಟ್ಯೂಷನ್ ಹೇಳ್ತಿದ್ದ ವಕಾರ ಜಾಗ ನಮ್ಮ ಮನೆಗೆ ದೂರ ಇದ್ದುದರಿಂದ ನಾನು ಕೇವಲ ಒಂದು ತಿಂಗಳು ಮಾತ್ರ ಅವರ ಹತ್ತಿರ ಮ್ಯಾಥ್ಸ್ ಕಲಿಯಲು ಸಾಧ್ಯವಾಯಿತು. ಆದರೆ, ಗದಗಿನ ಎರಡು-ಮೂರು ತಲೆಮಾರುಗಳ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ ಮತ್ತು ಇಂಗ್ಲಿಷ್ ಜ್ಞಾನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ….’

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯ ಹಿರಿಯ ಉದ್ಯೋಗಿ ಸತೀಶ್ ಕುರಿ, ಹುಬ್ಬಳ್ಳಿಯಲ್ಲಿ ವೈದ್ಯ ವೃತ್ತಿ ಮಾಡುವ ಪರಶುರಾಮ ಕಾಂಬಳೆ…. ಹೀಗೆ ಎಲ್ಲರೂ ಅವರು ಕಲಿಸಿದ ವಿಷಯ ಮತ್ತು ಅದಕ್ಕಿಂತ ಮುಖ್ಯವಾಗಿ ಬದುಕಿನ ಪಾಠಗಳನ್ನು ನೆನೆದು ಗದ್ಗದಿತರಾಗುತ್ತಾರೆ….

ಸಾಮಾನ್ಯ ಶಿಕ್ಷಕರೊಬ್ಬರು ಸಹಜ ಪಾಠ ಮತ್ತು ಜೀವನದ ಮೌಲ್ಯಗಳನ್ನು ನಿರಂತರವಾಗಿ ಕಲಿಸುವ ಮೂಲಕ ಅಸಾಮಾನ್ಯ ಬದುಕನ್ನು ಇಲ್ಲಿ ಸವೆಸಿ ಹೋಗಿದ್ದಾರೆ. ಹಿಂದಿನ ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ಅವರಂತೂ ಬಿ.ಜಿ. ಅಣ್ಣಿಗೇರಿಯವರನ್ನು ‘ಶಿಕ್ಷಣ ಸಂತ’ ಎಂದೇ ಕರೆಯುತ್ತಿದ್ದರು. ಮುಂದೆ ಅದೇ ಟೈಟಲ್ಲಿನಲ್ಲಿ ಅಣ್ಣಿಗೇರಿ ಅವರ ಶಿಷ್ಯವೃಂದ ಒಂದು ಅಭಿನಂದನಾ ಗ್ರಂಥವನ್ನು ಪ್ರಕಟಿಸಿತ್ತು. ಅಣ್ಣಿಗೇರಿ ಮಾಸ್ತರು ಹೆಸರಲ್ಲೇ ಅವರ ಕುರಿತಾಗಿಯೇ ಇನ್ನೂ ಮೂರು ಕೃತಿಗಳು ಬಂದಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಸಮಾಜ ಕಲಿಸುತ್ತಿದ್ದ ಅಣ್ಣಿಗೇರಿ ಮಾಸ್ತರು ಕ್ರಮೇಣ ಗಣಿತ ವಿಷಯ ಬೋಧನೆಗಾಗಿಯೇ ಗದಗಿನಲ್ಲಿ ಪ್ರಸಿದ್ಧರಾದುದದರ ಹಿಂದೆ ಒಂದು ರೋಚಕ ಅಂಶ ಇದೆ. ಅವರ ಶಿಷ್ಯನೊಬ್ಬ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಆತನಿಂದ ಹಲವು ತಿಂಗಳು ಕಾಲ ಸರಳ ಗಣಿತ ಕಲಿಕೆಯ ಬಗ್ಗೆ ಪಾಠ ಕಲಿತ ಅವರು, ಕ್ರಮೇಣ ಗದಿನಲ್ಲಿ ಜನಪ್ರಿಯ ಗಣಿತ ಶಿಕ್ಷಕರೆನಿಸಿದರು.
ವಕಾರು ಸಾಲಿನಲ್ಲಿ ಅವರು ಮೂರು ದಶಕಗಳಿಂದ ನಡೆಸುತ್ತ ಬಂದಿರುವ ಶಿಕ್ಷಣ ಆಶ್ರಮಕ್ಕೆ ‘ಗದಗಿನ ಶಾಂತಿನಿಕೇತನ’ ಎಂದೂ ಅವರ ಶಿಷ್ಯರು ಕರೆಯುತ್ತಾರೆ.

ಅವರ ಆಶ್ರಮ ಶಾಲೆಯ ಗೋಡೆಗಳ ಮೇಲಿರುವ ಕೆಲವು ಸಾಲುಗಳು:
‘ಸ್ವಾರ್ಥದಿಂದ ಕೂಡಿದುದು ಅನೈತಿಕ, ಸ್ವಾರ್ಥಶೂನ್ಯವಾದುದು ನೈತಿಕ…’
‘ಪೂರ್ಣತ್ಯಾಗವೇ ಪರಮಾದರ್ಶ, ನಿಸ್ವಾರ್ಥತೆಯೇ ದೇವರು….’
‘ಶಕ್ತಿಯೇ ಜೀವನ, ದುರ್ಬಲತೆಯೇ ಮರಣ…’

ಸಾವೇ ಇಲ್ಲದ ಇಂತಹ ‘ಮಾಸ್ತರು’ಗಳಿಗೆ ನಮ್ಮ ಕಡೆಯಿಂದ ಇದೊಂದು ಶ್ರದ್ಧಾಂಜಲಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...