Homeಮುಖಪುಟಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್!: ಪ್ರವಾಹ ಪರಿಹಾರಕ್ಕೆ ಪ್ರತಾಪ್, ತೇಜಸ್ವಿ ಗೆದ್ದ 12 ಲಕ್ಷ ಸಾಕೇ?

ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್!: ಪ್ರವಾಹ ಪರಿಹಾರಕ್ಕೆ ಪ್ರತಾಪ್, ತೇಜಸ್ವಿ ಗೆದ್ದ 12 ಲಕ್ಷ ಸಾಕೇ?

ರವಿವಾರ ಕಲರ್ಸ್ ಕನ್ನಡ ಟಿವಿಯ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಪಾಲ್ಗೊಂಡಿದ್ದರು. ಒಂಥರಾ ಇವರಿಬ್ಬರ ನಾಟಕೀಯತ ನೋಡಿದಾಗ ‘ಡ್ರಾಮಾ ಜ್ಯೂನಿಯರ್ಸ್’ ನೆನಪಾಗಿತು.

- Advertisement -
- Advertisement -

ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ! – ಹೆಡ್ಡಿಂಗ್ ನೋಡಿ ನಿಮಗೆ ಅನಿಸಬಹುದು: ಇದೇನಿದು ಕಲರ್ಸ್ ಟಿವಿ ಕಾರ್ಯಕ್ರಮಕ್ಕೆ ಝೀ ಟಿವಿಯ ಕಾರ್ಯಕ್ರಮದ ಟೈಟಲ್ಲು ಸೇರಿಸಿದ್ದಾರೆಂದು? ಕಲರ್ಸ್, ಝೀ ಎಲ್ಲ ಮೋದಿಯ ಆರಾಧಕರೇ ಎಂಬುದನ್ನು ಸೂಚ್ಯವಾಗಿ ಹೇಳಲಷ್ಟೇ ಇದನ್ನು ಬಳಸಿದ್ದೇವೆ ಅಷ್ಟೇ.

ಈಗ ವಿಷಯಕ್ಕೆ ಬರೋಣ. ಮೈಸೂರು-ಕೊಡಗಿನ ಸಂಸದ ಪ್ರತಾಪ್‍ಸಿಂಹ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ನಿನ್ನೆ ರವಿವಾರ ಕಲರ್ಸ್ ಟಿವಿಯ ಕೋಟ್ಯಧಿಪತಿಯಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟ್ ತೋರಿಸಿ ಹನ್ನೆರಡೂವರೆ ಲಕ್ಷ ಗೆದ್ದಿದ್ದಾರೆ ಮತ್ತು ಅದನ್ನು ನೆರೆಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿ ನಿಧಿಗೆ ಕೊಡುವುದಾಗಿ ಘೋಷಿಸಿದ್ದಾರೆ. ಓಕ, ವೆಲ್ ಡನ್!

ಆದರೆ, ನಾವು ಇಲ್ಲಿ ಪ್ರಸ್ತಾಪಿಸುತ್ತಿರುವುದು ಇಡೀ ಕಾರ್ಯಕ್ರಮದ ಹಿಂದೆ ಒಂದು ಹಿಡನ್ ಅಜೆಂಡಾ ಇತ್ತು ಮತ್ತು ಈ ಇಬ್ಬರು ಸಂಸದರು ಕಾರ್ಯಕ್ರಮದ ಉದ್ದಕ್ಕೂ ಡ್ರಾಮಾ ಮಾಡುತ್ತಲೇ ಬಂದರು ಎನ್ನುವುದು. ಇಲ್ಲಿ ಕಾರ್ಯಕ್ರಮದ ಸಂಯೋಜಕ ಪುನೀತ್ ರಾಜಕುಮಾರ್ ಕೇವಲ ಒಬ್ಬ ನಿರೂಪಕರಷ್ಟೇ. ಇಡೀ ಕಾರ್ಯಕ್ರಮದ ಸ್ಕ್ರಿಪ್ಟ್ ಮೊದಲೇ ರೆಡಿ ಆಗಿತ್ತು (ಸೆಲೆಬ್ರಿಟಿಗಳು ಭಾಗವಹಿಸುವ ಎಲ್ಲ ರಿಯಾಲಿಟಿ ಶೋ ಗಳ ಸ್ಕ್ರಿಪ್ಟ್ ಕೂಡ ಮೊದಲೇ ಸಿದ್ದವಾಗಿರುತ್ತವೆ).

ಹಾಳಾಗಿ ಹೋಗಲಿ ಇವರೆಲ್ಲ. ನಮ್ಮ ಪ್ರಶ್ನೆಗಳಿಷ್ಟೇ:
1. ನೆರೆಪೀಡಿತರಿಗೆ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಉದಾಸೀನ ತೋರುತ್ತಿರುವಾಗ ಈ ಇಬ್ಬರು ಸಂಸದರು ಕೋಟ್ಯಧಿಪತಿಯಲ್ಲಿ ಬಂದು 12 ಚಿಲ್ಲರೆ ಲಕ್ಷ ಗೆಲ್ಲುವುದು ಸಾಕೇ? ತಮ್ಮದೇ ಕೇಂದ್ರ ಸರ್ಕಾರದ ಮೇಲೆ, ಅದೂ ನಮ್ಮದೇ ರಾಜ್ಯದ ನಾಲ್ಕು ಕೇಂದ್ರ ಸಚಿವರಿರುವ ಕೇಂದ್ರಕ್ಕೆ ಮನವಿ ಮಾಡಿ ಅನುದಾನ ತರಲು ಇಲ್ಲಿವರೆಗೂ ಶ್ರಮಿಸಲಿಲ್ಲವೇಕೆ?

2. ಕಾರ್ಯಕ್ರಮದ ಒಂದು ಹಂತದಲ್ಲಿ ಸಂಸದ ಪ್ರತಾಪಸಿಂಹ ಹೇಳಿದರು: ‘ಪ್ರಾಮಾಣಿಕ ಮತ್ತು ಗೌರವಾನ್ವಿತ ಸಂಸದರಿಗೆ ನೀಡುವ ಸಂಬಳ ಯಾತಕ್ಕೂ ಸಾಲುತ್ತಿರಲಿಲ್ಲ. ಆಗ 2.09 ಲಕ್ಷವಿತ್ತು. ನಾನು ಇದನ್ನು ಹೆಚ್ಚಿಸಬೇಕೆಂದು 85 ಸಂಸದರ ಸಹಿ ಮಾಡಿಸಿ ಮೋದಿಯವರಿಗೆ ಸಲ್ಲಿಸಿದ್ದೆ. ಅವರು 80 ಸಾವಿರ ಹೆಚ್ಚುವರಿ ಮಾಡಿದರು. ಈಗ ಸಂಸದರ ಸಂಭಾವನೆ 2.89 ಲಕ್ಷ.  ಅಯ್ಯೋ ಪ್ರತಾಪ ಮತ್ತು ತೇಜಸ್ವಿ 85 ಸಂಸದರನ್ನು ಬಿಡಿ, ನೀವಿಬ್ದರು ಸೇರಿದಂತೆ ಕರ್ನಾಟದಕ 28 ಸಂಸದರ ಸಹಿ ಮಾಡಿಸಿಕೊಂಡು ನೆರೆ ಪರಿಹಾರಕ್ಕೆ ‘ಚಂದ್ರಮುಖಿ’ ಪ್ರಧಾನಿಯ ಮುಂದೆ ಒಂದು ಪ್ರಸ್ತಾಪ ಇಡಬಹುದಿತ್ತಲ್ಲ? ಇಂತಹ ಪ್ರಶ್ನೆಯನ್ನು ಕೋಟ್ಯಾಧಿಪತಿಯ ತೆರೆ ಹಿಂದೆ ಕೆಲಸ ಮಾಡುವವವರು ಸೃಷ್ಟಿಸಲಿಲ್ಲವೇಕೆ?

3. ಕಲರ್ಸ್ ಕನ್ನಡದವರೇ, ನಿಮಗೆ ನಿಜಕ್ಕೂ ಕರ್ನಾಟಕದ ನೆರಪೀಡಿತರಿಗೆ ಸಹಾಯ ಮಾಡುವ ಉದ್ದೇಶವಿದ್ದರೆ ಇಡೀ ಬಹುಮಾನದ ಮೊತ್ತ ಒಂದು ಕೋಟಿಯನ್ನೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬಹುದಿತ್ತು ಅಲ್ಲವಾ? ಆದರೆ, ನಿಮ್ಮ ಉದ್ದೇಶ ಇಬ್ಬರು ಹೋಪ್‍ ಲೆಸ್ ಸಂಸದರು ಮತ್ತು ಅವರ ಗುರು ಮೋದಿಗೆ ಪ್ರಚಾರ ಕೊಡುವುದೇ ಆಗಿತ್ತಲ್ಲವಾ?

ಒಟ್ಟಿನಲ್ಲಿ ಇಬ್ಬರು ಸಂಸದರನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡಲು ಹೋಗಿ ಕಲರ್ಸ್ ಬಣ್ಣ ಬಯಲಾಗಿದೆ. ಝೀ ಟಿವಿ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಹಲವಾದರೂ ಪುಟ್ಟ ಮಕ್ಕಳ ಟ್ಯಾಲೆಂಟು ಗುರುತಿಸಲ್ಪಡುತ್ತಿದೆ. ಆದರೆ, ಕಲರ್ಸ್‍ನವರೇ ನೀವು ಈ ಇಬ್ಬರು ‘ಪಟ್ಟ’ ಸಂಸದರ ಹಿಂದೆ ಬೀಳುವ ಮೂಲಕ ಕೋಟ್ಯಧಿಪತಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ತಂದು ಬಿಟ್ಟಿರಲ್ಲ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...