Homeಮುಖಪುಟಯುದ್ಧ ಮತ್ತು ಅಧಿಕಾರದಾಹದ ತೀವ್ರತೆ ಬಿಚ್ಚಿಡುವ ನಾಟಕ ’ಬಾಹುಬಲಿ ವಿಜಯಂ’

ಯುದ್ಧ ಮತ್ತು ಅಧಿಕಾರದಾಹದ ತೀವ್ರತೆ ಬಿಚ್ಚಿಡುವ ನಾಟಕ ’ಬಾಹುಬಲಿ ವಿಜಯಂ’

- Advertisement -
- Advertisement -

ನಮ್ಮ ಇತಿಹಾಸದ ಪುಟಗಳಲ್ಲಿ ನೂರಾರು ಯುದ್ದಗಳ ರಕ್ತಸಿಕ್ತ ಕಲೆ ಎದ್ದು ಕಾಣುತ್ತದೆ. ಈ ಯುದ್ಧಗಳ ಭೀಕರತೆ, ಕೋಟ್ಯಾಂತರ ಸಾವು-ನೋವುಗಳು ಅಚ್ಚಳಿಯದೆ ಉಳಿದಿವೆ. ಯುದ್ಧ ಬೇಡ ಬುದ್ಧ ಬೇಕು ಎಂದು ಸಾರಿ ಸಾರಿ ಹೇಳಿದರು ಸಹ ಜಾಗತಿಕ ಬಂಡವಾಳಶಾಹಿಗಳು, ಶಸ್ತ್ರಾಸ್ತ್ರ ಮಾರಾಟಗಾರರು, ಯಾಜಮಾನ್ಯ ಬಯಸುವ ಬಲಾಢ್ಯ ದೇಶಗಳು ಇಂದಿಗೂ ಯುದ್ದಗಳಿಗೆ ಕಾರಣರಾಗುತ್ತಿದ್ದಾರೆ ಎಂಬ ಆರೋಪವಿದೆ. ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಹೊಡೆದಾಟ, ಬಡಿದಾಟಕ್ಕೆ ಅಚ್ಚಿ ರಾಜಕೀಯ ಅಧಿಕಾರವಿಡಿಯುವ ಹುನ್ನಾರ ನಡೆಯುತ್ತಿದೆ. ಯುದ್ಧೋನ್ಮಾದವನ್ನು ಎಲ್ಲರ ಮನದಲ್ಲಿ ಬಿತ್ತಲಾಗುತ್ತಿದೆ. ಹೀಗಾಗಿ ಯುದ್ದ ಮುಗಿದ ಮೇಲೆ ಶಾಂತಿಯ ಬಗ್ಗೆ ಮಾತನಾಡುವ ಬದಲು ಯುದ್ದದ ವಾತಾವರಣವೇ ಸೃಷ್ಟಿಯಾಗದಂತೆ ತಡೆಯುವ ಜವಾಬ್ದಾರಿ ಕಲೆಯದು ಕೂಡ ಹಾಗಿದೆ. ಯುದ್ದದ ಕ್ರೌರ್ಯತೆ ಯಾವ ರೀತಿ ಸಹೋದರತ್ವನ್ನು ನಾಶ ಮಾಡುತ್ತದೆ, ಅಣ್ಣ ತಮ್ಮಂದಿರೆ ಕಾದಾಡುವಂತೆ ಮಾಡುತ್ತದೆ ಎಂಬುದನ್ನು ವಿವರವಾಗಿ ಬಿಚ್ಚಿಡುವ ನಾಟಕವೇ ’ಬಾಹುಬಲಿ ವಿಜಯಂ’.  

ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಹಮ್ಮಿಕೊಂಡಿದ್ದ ’ರಂಗಸಂಗಮ ಮತ್ತು ಗುರುವಂದನೆ’  ಎಲ್ಲಾ ಹಿಂದಿನ ಮತ್ತು ಇಂದಿನ ವಿದ್ಯಾರ್ಥಿಗಳ ಸಮಾಗಮದಲ್ಲಿ ಬಾಹುಬಲಿ ವಿಜಯಂ ನಾಟಕವನ್ನು ಧಾತ್ರಿ ಸಂಸ್ಥೆಯಿಂದ ಪ್ರದರ್ಶಿಸಲಾಯಿತು. ಭರತ ಮತ್ತು ಬಾಹುಬಲಿಯ ಕಥೆ ಮೊದಲಿನಿಂದಲೂ ಸಹ ಜನಜನಿತವಾಗಿರುವ ಕಥೆ. ಅಧಿಕಾರದ ಅಮಲು ಪ್ರೀತಿಯನ್ನು ಅಳಿಸಿ ಬರೀ ದ್ವೇಷವನ್ನು ಮಾತ್ರ ಉಳಿಸುತ್ತದೆ ಎಂಬುದನ್ನು ಬಾಹುಬಲಿಯು ಗೆದ್ದನಂತರ ತಾಳುವ ವೈರಾಗ್ಯ ಜಗಜ್ಜಾಹಿರು ಮಾಡುತ್ತದೆ. ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಮಾತ್ರ ಅಲ್ಲದೇ , ಮಾಧ್ಯಮಗಳು ಸಹ ಇನ್ನೊಂದು ದೇಶದ ಮೇಲಿನ ದ್ವೇಷವೇ ಪ್ರಧಾನವಾಗಿ ಕೊಚ್ಚಿ ಕೊಲ್ಲಿ ಎನ್ನುವ ಭಾಷೆ ಬಳಸುತ್ತಾ ಮಾಧ್ಯಮಗಳ ನಿರ್ವಹಿಸಬೇಕಾದ ಮೌಲ್ಯವನ್ನು ಮರೆತಿರುವುದು ದುರಂತ.

ಬಾಹುಬಲಿ ವಿಜಯಂ ಪಂಪನ ಆದಿಪುರಾಣ ಮಹಾಕಾವ್ಯದ ಆಯ್ದ ಭಾಗವಾದ ಭರತ ಮತ್ತು ಬಾಹುಬಲಿಯ ದಾಯಾದಿ ಕಲಹವಾಗಿದ್ದು, ಜೊತೆಗೆ ಜಿ.ಪಿ.ರಾಜರತ್ನಂ ರವರ ಬಾಹುಬಲಿ ವಿಜಯ ನಾಟಕದ ಕೆಲವು  ಆಯಾಮಗಳನ್ನು  ಬಳಸಿ ಶ್ರೀರಂಗ ಪಾರ್ವತೀಕರವರು ರಂಗ ಪಠ್ಯವಾಗಿಸಿದ್ದಾರೆ. ಯುವ ರಂಗಕರ್ಮಿ ಭೀಮೇಶ್.ಹೆಚ್.ಎನ್ ರವರು ಈ ನಾಟಕವನ್ನು ಪ್ರೇಕ್ಷಕರಿಗೆ ಆಪ್ತವಾಗುವಂತೆ ನಿರ್ದೇಶನ ಮಾಡಿದ್ದಾರೆ.  ಇದು ಹತ್ತನೇ ಶತಮಾನದ ಕಥೆಯಾದರೂ ಪ್ರಸ್ತುತ ರಾಜಕೀಯ, ಮನುಷ್ಯನ ದುರಾಸೆಯನ್ನು ಎತ್ತಿ ತೋರಿಸುತ್ತದೆ. 

ಈ ನಾಟಕವನ್ನು ಧಾತ್ರಿ ಸಂಸ್ಥೆಯ ಕಲಾವಿದರು ಅಭಿನಯಿಸಿದ್ದು, ಅರುಣ್‌ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜ್ ಬಳ್ಳಾರಿ, ಭರತ್ ಡಿಂಗ್ರಿ ಸಂಗೀತ ನಿರ್ವಹಣೆ ಮಾಡಿದ್ದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸಿರಿಗೆರೆಯೆಂಬ ಗ್ರಾಮದಲ್ಲಿ ಯುವ ಗೆಳೆಯರು ಕಟ್ಟಿರುವ ಈ ಸಂಸ್ಥೆ ಹಲವು ವರ್ಷಗಳಿಂದ ರಾಜ್ಯದ್ಯಾಂತ ರಂಗಸಂಚಾರ  ಮಾಡುತ್ತಿದ್ದಾರೆ. ಯುವರಂಗಕರ್ಮಿಗಳೇ ಸೇರಿ ಹೊಸ ಹೊಸ ನಾಟಕಗಳನ್ನು ಕಟ್ಟಿ  ಬಾಹುಬಲಿ ವಿಜಯಂ ಜೊತೆಗೆ ’ಮುದ್ದಣ್ಣನ ಪ್ರಮೋಷನ್ ಪ್ರಸಂ” ಎಂಬ ನಾಟಕದ ಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದಾರೆ. ಇದರ ತಿರುಗಾಟ ಆರಂಭವಾಗಿದ್ದು ಈ ನಾಟಕ ಪ್ರದರ್ಶನಗಳನ್ನು ಆಯೋಜಿಸುವವರು 9902617950, 7899018729 ಈ ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ. 


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...