Homeಮುಖಪುಟನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

- Advertisement -
- Advertisement -

ಜೀವನ ಕಲೆಗಳು ಅಂಕಣ: 8  ಅನುಭೂತಿ (Empathy) -2

ಅನುಭೂತಿ ಎನ್ನುವುದು ಕೇವಲದುಃಖ ಅಥವಾ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲ, ಇದು ದೈನಂದಿನ ಕಲೆ. ಇದು ಮನೆ, ಶಾಲೆ/ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಯಾವಾಗಲೂ ಕಾಣುವಂತಾಗಬೇಕು. ನಿಮ್ಮ ಕೆಲಸ/ಕಲಿಕೆಯ ಸ್ಥಳದಲ್ಲಿ ಅನುಭೂತಿ ಕಾಣುತ್ತಿದೆಯೇ? ಅನುಭೂತಿಯ ವಾತಾವರಣದ ಕೊರತೆಯಿಂದಾಗಿ ಇರುವ ಜನರು ದೂರವಾಗುತ್ತಿದ್ದಾರೆಯೇ? ಶಾಲೆ/ಕಾಲೇಜು/ಕಚೇರಿಯಲ್ಲಿ ಒಬ್ಬರನ್ನೊಬ್ಬರು ಅವರ ಮೊದಲನೇ ಹೆಸರಿನಿಂದ ಸಂಬೋಧಿಸುತ್ತಾರೋ, ಅಡ್ಡನಾಮದಿಂದಲೋ, ಅವರ ಹುದ್ದೆಯಿಂದ ಕರೆಯುತ್ತಾರೋ, ಅವರಿಗೆ ಸ್ವಭಾವಕ್ಕನುಗುಣವಾಗಿ ಇಟ್ಟಿರುವ ಅನ್ವರ್ಥನಾಮದಿಂದಲೋ, ಯೋಚಿಸಿ ನೋಡಿ.

ಶಾಲೆ/ಕಾಲೇಜು/ಕಚೇರಿಗಳಲ್ಲಿ ಅನುಭೂತಿಯನ್ನು ವ್ಯವಸ್ಥಾಪಕ ಮಂಡಳಿಯ ಆದೇಶದಿಂದಾಗಲೀ, ಸರಕಾರದ ಒಂದು ಸುತ್ತೋಲೆಯಿಂದಾಗಲೀ ಸೃಷ್ಟಿಸಲಾಗುವುದಿಲ್ಲ. ಅನುಭೂತಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುವುದಿಲ್ಲ. ಇದನ್ನು ಅಲ್ಲಿಯ ಸಹಪಾಠಿ/ಸಹೋದ್ಯೋಗಿಗಳೇ ಸೇರಿ ನಿರ್ಮಿಸಬೇಕು. ಪ್ರತಿಯೋರ್ವರೂ ವೈಯುಕ್ತಿಕ ಮಟ್ಟದಲ್ಲಿ ಅನುಭೂತಿಯನ್ನು ತೋರಿಸಿದ್ದೇ ಆದರೆ ಕೆಲಸದ ವಾತಾವರಣ ಮಾರನೆಯ ದಿನದಿಂದಲೇ ಬದಲಾಗಲು ಪ್ರಾರಂಭವಾಗುತ್ತದೆ.

“ಬಿಸಿನೆಸ್ ಸಾಲ್ವರ್ಸ್” 2017ರ ವರದಿಯ ಪ್ರಕಾರ ಅನುಭೂತಿ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ, ಕರ್ತವ್ಯ ಹಾಗೂ ಕಂಪನಿಯ ಪರವಾಗಿ ಅವರ ನಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ. ವರದಿಯ ಪ್ರಕಾರ:

ಅನುಭೂತಿಯ ವಾತಾವರಣ ಇರುವಂತಹ ಕಚೇರಿಯಲ್ಲಿ 77% ಕೆಲಸಗಾರರು ಹಣದ ಆಮಿಶ (ಓವರ್ ಟೈಂ) ಇಲ್ಲದೆ ಹೆಚ್ಚಿನ ಸಮಯ ಕೆಲಸಕ್ಕೆ ನೀಡಲು ಸಿದ್ಧರಾಗಿದ್ದರು. 60% ಕೆಲಸಗಾರರು ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದಲ್ಲಿ ಸಂಬಳ ಕಡಿತಕ್ಕೂ ಸಿದ್ಧರಾಗಿದ್ದರು. ಸಂದರ್ಶಿಸಿದ 92% ಮಾನವ ಸಂಪನ್ಮೂಲ ಅಧಿಕಾರಿಗಳು ಅನುಭೂತಿಯ ವಾತಾವರಣ ತಮ್ಮ ಕಂಪನಿಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಕಾರಣ ಎಂದರು. 1980ರಿಂದ 1995ರವರೆಗೆ ಹುಟ್ಟಿದ 80% ಯುವಕರು ತಮ್ಮ ಕಚೇರಿಯಲ್ಲಿ ಅನುಭೂತಿಯ ವಾತಾವರಣವಿಲ್ಲದಿದ್ದರೆ ಕೆಲಸ ಬಿಡುವುದಾಗಿ ಹೇಳಿದರು. ನಿವೃತ್ತಿಯ ಅಂಚಿನಲ್ಲಿರುವ 66% ಜನರೂ ಕೂಡ ಇದೇ ಪ್ರತಿಕ್ರಿಯೆ ನೀಡಿದರು.

ಕಚೇರಿಯಲ್ಲಿ ಅನುಭೂತಿ ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅನುಭೂತಿಯ ವಾತಾವರಣವನ್ನು ಅಳೆಯಲು ಸುಲಭವಾದ ಮಾಪಕಯಂತ್ರಗಳಿಲ್ಲ. ಸರ್ವೇಕ್ಷಣೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಕಾರ್ಯಾಗಾರ/ಪ್ರಶ್ನೆಪತ್ರಿಕೆಗಳಿಂದ ಸ್ವಲ್ಪ ಮಾಹಿತಿ ಸಿಗಬಹುದು ಆದರೆ ಹಲವು ಮುಖ್ಯ ಅಂಶಗಳು ಅಳೆಯಲು ಕೈಗೆ ಸಿಗುವುದಿಲ್ಲ.

ಕೆಳಗಿನ ಕಲೆಗಳು ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ನಡುವಣ ಸಂಬಂಧ ಹೆಚ್ಚಿಸಲು ಸಹಾಯಕವಾಗಬಹುದು.

1. ಕೇಳಿಸಿಕೊಳ್ಳುವ ಕಲೆಯನ್ನು ಬಲಪಡಿಸಿಕೊಳ್ಳಿ: ನಿಮ್ಮ ಸಹೋದ್ಯೋಗಿ/ಸಹಪಾಠಿ ಏನಾದರೂ ಹೇಳಲು ಬಯಸಿದಲ್ಲಿ ನೀವು ನಿಜವಾಗಿಯೂ ಅವರು ಹೇಳಿದ್ದನ್ನು ಕೇವಲ ಆಲಿಸುತ್ತಿದ್ದೀರೋ ಅಥವಾ ಗಮನವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರೋ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇದು ಕೇವಲ ಆಡುವ ಮಾತಿಗೆ/ದೂರಧ್ವನಿ ಸಂಭಾಷಣೆಗೆ ಸೀಮಿತವಾಗಿಲ್ಲ, ಕಚೇರಿಯ ಎಸ್.ಎಂ.ಎಸ್./ಎ-ಮೇಲ್, ವಾಟ್ಸಾಪ್ ವೈಯುಕ್ತಿಕ/ಗುಂಪು ಸಂದೇಶಗಳೂ ಇದರಲ್ಲಿ ಸೇರಿವೆ.

2. ಸರಿಯಾದ ಪ್ರಶ್ನೆ ಕೇಳುವ ಕಲೆ ವೃದ್ಧಿಸಿಕೊಳ್ಳಿ: ಇದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಯ ನಿಜವಾದ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ನೀಡಿದ ಉತ್ತರ ಅಥವಾ ಅವರು ಕೇಳಿದ ಪ್ರಶ್ನೆ ನಿಮಗೆ ಅರ್ಥವಾಗದಿದ್ದಲ್ಲಿ ಅದನ್ನು ಬಿಡಿಸಿ ಹೇಳುವಂತೆ ತಿಳಿಸಿ.

3. ಅವರ ಸ್ಥಳದಲ್ಲಿ ನೀವಿದ್ದರೆ ನಿಮಗೆ ಏನನಿಸುತ್ತಿತ್ತು ಯೋಚಿಸಿ: ಇನ್ನೊಬ್ಬರ ಕಷ್ಟ ಅರಿತುಕೊಳ್ಳುವ ಪ್ರಯತ್ನ ನೀವು ಮಾಡಿತ್ತಿದ್ದೀರೆಂಬ ಸಂದೇಶ ಅವರಿಗೆ ಕೂಡಲೇ ರವಾನಿಸಿ. ಅವರನ್ನು ನೇರ ಮಾತುಕತೆಗೆ ಕರೆಯಿರಿ, ಸಮಯ ಸ್ಥಳ ನಿರ್ಧರಿಸಿ. ಮುಖಾಮುಖಿಯಾಗುವುದರಿಂದ ಹಲವು ಪ್ರಶ್ನೆಗಳು ತಾವಾಗಿಯೇ ಉತ್ತರಿಸಲ್ಪಡುತ್ತವೆ.

4. ಸಹೋದ್ಯೋಗಿ/ಸಹಪಾಠಿಗಳ ಬಗ್ಗೆ ಒಮ್ಮೆಲೇ ನಿಮ್ಮ ಉಹಾಪೋಹದ ನಿರ್ಧಾರಕ್ಕೆ ಬರಬೇಡಿ: ಹೇಳಿದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದಾಗ ಅವರಿಗೆ ಇನ್ಯಾವ ತೊಂದರೆ ಇದೆ ತಿಳಿದುಕೊಳ್ಳಲು ಪ್ರಯತ್ನಿಸಿ.

5. ಸಮಸ್ಯೆಗಳನ್ನು ಬಗೆಹರಿಸುವಾಗ ಆದ್ಯತೆಯ ಮೇಲೆ ಗಮನ ಕೊಡಿ: ಎಲ್ಲಾ ಸಮಸ್ಯೆಗಳಿಗೂ ಒಂದೇ ಸಮನಾದ ತುರ್ತು ಇರುವುದಿಲ್ಲ. ಮೊದಲು ಬಂದ ಸಮಸ್ಯೆಗೆ ಮೊದಲು ಪರಿಹಾರ ಎನ್ನುವುದೂ ಸರಿಯಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಅದರ ಪರಿಹಾರಕ್ಕೆ ಗಮನ/ಸಮಯ ನೀಡಿ.

6. ನಿಮ್ಮ ಸಹೋದ್ಯೋಗಿ/ಸಹಪಾಠಿಗಳನ್ನು ದೂರವಿಡಬೇಡಿ: ಆದರೆ ತೀರಾ ಸನಿಹತೆಯ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ವೈಯುಕ್ತಿಕ, ಕುಟುಂಬದ ಮಾಹಿತಿ ಇರಲಿ ಆದರೆ ನೀವು ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದೀರಿಎಂಬ ಭಾವನೆ ಅವರಿಗೆ ಬರದಿರಲಿ. ಅವರ ಇ-ಮೇಲ್ ಸಂದೇಶಕ್ಕೆ ಉತ್ತರಿಸುವಾಗ ಅವರ ಹೆಸರನ್ನು ಬಳಸಿ, ಅವರ ವಿಭಾಗದ ಹೆಸರಿಗೆ ಉತ್ತರಿಸಬೇಡಿ. ಕಚೇರಿಯಲ್ಲೂ ವೈಯುಕ್ತಿಕ ಮತ್ತು ಸಾಂಸ್ಥಿಕ ವಿಷಯಗಳನ್ನು ಬೆರೆಸಬೇಡಿ.

7. ವ್ಯಕ್ತಿಗಳಿಗೆ ಭಾವನೆಗಳಿರುತ್ತವೆ: ಕಂಪನಿಯ ಟಾರ್ಗೆಟ್, ಡೆಡ್ಲೈನ್, ಲಾಭ-ನಷ್ಟದ ಒತ್ತಡದಲ್ಲಿ ಮುಖ್ಯವಾಗಿ ತಂಡದ ಜನರಿಗೆ ಭಾವನೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ಮೇಲಿನ ಕಟು ಟಿಪ್ಪಣಿಗಳನ್ನು ಮೃದುವಾಗಿರಿಸಿ.

8. ಕೆಲವೊಮ್ಮೆ ತಲೆಯ ಬದಲಿಗೆ ಹೃದಯ ಉಪಯೋಗಿಸಿ: ಇಂಗ್ಲಿಷಿನಲ್ಲಿ ಇದನ್ನು “ಥಿಂಕ್ ವಿತ್ ಯುವರ್ ಹಾರ್ಟ್” ಎನ್ನುತ್ತಾರೆ.

9. ನಿಮ್ಮ ಸ್ವಂತ ಪೂರ್ವಾಗ್ರಹ: ನಿಮ್ಮ ಸಾಂಸ್ಕೃತಿಕ ಪಕ್ಷಪಾತವೇನಾದರೂ ಅನುಭೂತಿಗೆ ಅಡ್ಡ ಬರುತ್ತಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಸಹೋದ್ಯೋಗಿಗಳಿಂದ ಪ್ರತ್ಯಾದಾನ: ಫೀಡ್-ಬ್ಯಾಕ್ ಸ್ವೀಕರಿಸಿ. ಕೆಲವು ನೇರವಾಗಿ ಬರದಿರಬಹುದು, ಅಪ್ರತ್ಯಕ್ಷವಾಗಿ ಬಂದ ಟೀಕೆ ಟಿಪ್ಪಣಿಗಳನ್ನೂ ಗುರುತುಹಾಕಿಕೊಳ್ಳಿ. ಅದೇ ರೀತಿ ನೀವು ನೀಡಿದ ಫೀಡ್-ಬ್ಯಾಕ್/ಟೀಕೆ/ಟಿಪ್ಪಣಿ ಹೇಗೆ ಕೆಲಸ ಮಾಡುತ್ತಿದೆ ಅದನ್ನೂ ತಿಳಿದುಕೊಳ್ಳಿ

11. ಸ್ಥಳ ಬದಲಾಯಿಸಿ: ಸಹೋದ್ಯೋಗಿ/ಸಹಪಾಠಿಗಳೊಂದಿಗೆ ಕಚೇರಿಯಿಂದ ಹೊರಗೆ ಪ್ರವಾಸಕ್ಕೆ ಹೋಗಿ. ಅವರನ್ನು ಅರಿತುಕೊಳ್ಳಲು ಸಮಯ ಮತ್ತು ಅವಕಾಶ ದೊರೆಯುತ್ತದೆ.

12. ಅನುಭೂತಿ ಒಂದು ರಾತ್ರಿಯಲ್ಲಿ ಆಗುವ ಬದಲಾವಣೆ ಅಲ್ಲ: ಇದು ನೂರಡಿಯ ವೇಗದ ಓಟವಲ್ಲ, 26 ಮೈಲಿಯ ಮ್ಯಾರಥಾನ್. ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯಲ್ಲಿ ಆದ ಕಹಿ ನೆನಪಿನಿಂದ ನಿಮ್ಮ ಮುಂದಿನ ಕೆಲಸ ಕೆಡದಂತೆ ಜಾಗೃತೆ ವಹಿಸಿ.

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...