Homeಮುಖಪುಟಆ ದಿನಗಳು: ಬಿರುಬಿಸಿಲಿನ ನೆಲದಲ್ಲಿ ಪ್ರಭುತ್ವಕ್ಕೆ ಸವಾಲಾಗಿದ್ದ ಬಾಬಾಗೌಡ ಪಾಟೀಲರು

ಆ ದಿನಗಳು: ಬಿರುಬಿಸಿಲಿನ ನೆಲದಲ್ಲಿ ಪ್ರಭುತ್ವಕ್ಕೆ ಸವಾಲಾಗಿದ್ದ ಬಾಬಾಗೌಡ ಪಾಟೀಲರು

ಆಗಿನ್ನೂ ಬೆಳೆಯುತ್ತಿದ್ದ ಸಂಘಟನೆಯ ಎರಡನೇ ಹಂತದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಒಂದೇ ಸಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ.

- Advertisement -
- Advertisement -

ಬಾಬಾಗೌಡ ಪಾಟೀಲರು 1998ರ ಸುಮಾರಿಗೆ ಬಿಜೆಪಿ ಸೇರಿದರು, ಸಚಿವರಾದರು ಮತ್ತು ಈ ನಂತರದಲ್ಲಿ ಮತ್ತೆ ರೈತ ಹೋರಾಟಕ್ಕೆ ಬೆಂಬಲವಾಗಿ ಓಡಾಡಿದರು ಎಂಬುದನ್ನು ಬದಿಗಿಟ್ಟು, ಅವರ ಆರಂಭಿಕ ಹೋರಾಟಗಳ ಬಗ್ಗೆ ನೋಡೋಣ.

ಕರ್ನಾಟಕದಲ್ಲಿ ಚಳುವಳಿ ಕಟ್ಟುತ್ತಿರುವ ಎಲ್ಲ ಸಂಘಟನೆಗಳಿಗೂ ಇದರಲ್ಲಿ ಒಂದಿಷ್ಟು ವಿಷಯ ಇವೆ ಅನಿಸುತ್ತದೆ.

‘ಅಲ್ರೀ, ಟೊಮಾಟೋ ಸಾಸ್‌ಗೆ ಅವರೇ ರೇಟ್ ಫಿಕ್ಸ್ ಮಾಡ್ತಾರ. ಅದಕ್ಕ ಜನ ಮಾತಿಲ್ಲದ ರೊಕ್ಕ ಕೊಟ್ ತಗೋತಾರ. ಇನ್ಮ್ಯಾಲ ಟೊಮೆಟೊಕ್ಕೆ ನಾವಾ ರೇಟು ಫಿಕ್ಸ್ ಮಾಡೋ ಹಂಗಾಗಬೇಕು’ ಹೀಗೆ ಉತ್ತರ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಮುಂಬೈ ಕರ್ನಾಟಕದಲ್ಲಿ ಬಾಬಾಗೌಡರು ಅಂದು ಕೆಂಡದುಂಡೆಯಂತೆ ಗುಡುಗುತ್ತಿದ್ದರು. ಶಾಲಾ ಬಾಲಕರಾಗಿದ್ದಾಗ ಮತ್ತು ‘ವಕ್ಕಲ್ತನ’ ಹಿನ್ನೆಲೆಯ ನಮಗೆಲ್ಲ ಇದು ರೋಮಾಂಚನ ಸೃಷ್ಟಿಸಿದ್ದಲ್ಲದೇ, ಕ್ರಮೇಣ ಗ್ರಾಮೀಣ ಭಾರತಕ್ಕೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಿತ್ತು.

ನೀವು ಗಮನಿಸಿ ನೋಡಿ, ಈಗೆಲ್ಲಾದರೂ ರಾಕೇಶ್ ಟಿಕಾಯತ್‌ರು ಚುನಾವಣೆಗೆ ನಿಂತರೆ ಗೆಲ್ಲಬಹುದಾ ಎಂಬ ಪ್ರಶ್ನೆಯನ್ನು ಊಹಿಸಿಕೊಳ್ಳಿ. ಉತ್ತರ ಕನ್ನಡದ ಸಂಸತ್ ಚುನಾವಣೆಗೆ ನಿಂತಾಗ ಶಿವರಾಮ ಕಾರಂತರ ಪರ ಎಲ್ಲ ಪ್ರಗತಿಪರ ಸಂಘಟನೆಗಳ ಬೆಂಬಲವಿತ್ತು. ಆದರೆ, ಫಲಿತಾಂಶ ಬಂದಾಗ ಕಾರಂತರು ಮೂರನೇ ಸ್ಥಾನದಲ್ಲಿದ್ದರು.

ಮತ್ತೆ ಸಂಘಟನೆಗಳ ವಿಷಯಕ್ಕೆ ಬರೋಣ, ಈ ಸಲ ಆಮ್ ಆದ್ಮಿ, ಎಸ್‌ಡಿಪಿಐ, ಕರ್ಮಾಟಕ ರಾಷ್ಟ್ರೀಯ ಸಮಿತಿ ಮುಂತಾದ ಸಂಘಟನೆಗಳು ಇತ್ತೀಚಿನ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರಿ ಅಲ್ಲದಿದ್ದರೂ ಗಮನಾರ್ಹ ಸಾಧನೆ ಮಾಡಿವೆ.

ಆದರೆ, ಆಗಿನ್ನೂ ಬೆಳೆಯುತ್ತಿದ್ದ ಸಂಘಟನೆಯ ಎರಡನೇ ಹಂತದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಒಂದೇ ಸಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ.

ಬೆಳಗಾವಿಯ ಬೈಲಹೊಂಗಲದ ಚಿಕ್ಕ ಬಾಗೇವಾಡಿಯ ಪಾಟೀಲರು ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಅದಕ್ಕೆ ಅಂಟಿಕೊಂಡ ಧಾರವಾಡ ಗ್ರಾಮೀಣ ಕ್ಷೇತ್ರ ಎರಡರಲ್ಲೂ ಗೆಲ್ಲುತ್ತಾರೆ! ನಂತರ ಧಾರವಾಡ ಗ್ರಾಮೀಣದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿ ಗೆಲ್ಲುಲು ಸಹಕರಿಸುತ್ತಾರೆ.

ತಾತ್ವಿಕ ರೂಪು ಮತ್ತು ತಳಮಟ್ಟದ ಸಂಘಟನೆ

ಪ್ರೊಫೆಸರ್ ನಂಜುಂಡಸ್ವಾಮಿ ರಾಜ್ಯದಲ್ಲಿ ರೈತ ರೈತ ಸಂಘಟನೆ ಕಟ್ಟಿದ ಪಿತಾಮಹ ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ಇರಲೇಬಾರದು. ಆದರೆ ಸಂಘಟನೆ ಮಾಡುವ ಹೊಣೆ ಕೆಳಮಟ್ಟದ ಕಾರ್ಯಕರ್ತರ ಮೇಲಿರುತ್ತದೆ. ‘ಬೈಲಹೊಂಗಲದ ಚಿಕ್ಕ ಬಾಗೆವಾಡಿಯ ಭೂ ಮಾಲೀಕ ಕುಟುಂಬದ ಹಿನ್ನೆಲೆಯ ಬಾಬಾಗೌಡ ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಅದ್ಭುತವಾಗಿ ರೈತರನ್ನು ಸಂಘಟಿಸಿದರು’ ಎನ್ನುತ್ತಾರೆ ಪತ್ರಕರ್ತ ರುಷಿಕೇಶ್ ದೇಸಾಯಿ.

‘ತಾಲೂಕು ಕಚೇರಿಗಳಿಗೇ ಜನ ಹೋಗಲು ಹೆದರುತ್ತಿದ್ದ ಕಾಲವದು. ಬಾಬಾಗೌಡರ ಗುಡುಗು ಹೇಗಿತ್ತೆಂದರೆ ಜನ ಸೀದಾ ತಹಸೀಲ್ದಾರ್ ಎದುರು ನಿಂತು ಪ್ರಶ್ನೆ ಕೇಳಲು ಆರಂಭಿಸಿದರು. ಊರೂರಲ್ಲಿ ‘ಗ್ರಾಮದ ಜನರ ಅನುಮತಿ ಇಲ್ಲದೇ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡುಗಳು ಕಾಣಿಸಿಕೊಂಡವು ಎನ್ನುತ್ತಾರೆ ಬೆಳಗಾವಿ- ಧಾರವಾಡಗಳಲ್ಲಿ ಹಿಂದೆಲ್ಲ ಅನೇಕ ಚಳುವಳಿಗಳನ್ನು ನಡೆಸಿದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲರು.

“ಒಂದು ನೋಟು, ಒಂದು ರೊಟ್ಟಿ, ಒಂದು ವೋಟು” ಎಂದು ಚುನಾವಣೆ ಮಾಡಿ ಅವರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರು ಎಂಬುದು ಈಗಿನ ಚಳವಳಿಗಳಿಗೆ ಸ್ಫೂರ್ತಿ ಆಗುತ್ತದೆ ಎನ್ನುತ್ತಾರೆ ಚಳುವಳಿ ಹಿನ್ನೆಲೆಯ ಡಾ. ಪಾಟೀಲ್…

ರೈತ ಸಂಘಟನೆಯಲ್ಲಿ ಉಂಟಾದ ಭಿನ್ನಮತಗಳು, ಮುಂದೆ ಬಾಬಾಗೌಡರು ಬಿಜೆಪಿ ಸೇರಿದ ಸ್ಥಿತಿ ಈ ಬಗ್ಗೆ ಬೇಕೆಂತಲೇ ಇಲ್ಲಿ ಚರ್ಚೆ ಮಾಡಿಲ್ಲ. ಅದು ಈಗಿನ ಅಗತ್ಯವೂ ಅಲ್ಲ. ಬಾಬಾಗೌಡ ಪಾಲೀಲರಿಗೆ ಶ್ರಧ್ದಾಂಜಲಿ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...