Homeಅಂಕಣಗಳುನಾಗಸುಧೆ ಜಗಲಿಯಿಂದನಮಿಸುವ ಹೃದಯದ ನಂದೂರ

ನಮಿಸುವ ಹೃದಯದ ನಂದೂರ

ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ 'ಬೆರಗು' ಎನಿಸುವರು.

- Advertisement -
- Advertisement -

ನನ್ನ ಮನೆಯಲ್ಲೊಂದು ಹೂಗಿಡ
ಬೆಳೆಸಿದ್ದೇನೆ ; ಅದು
ನಿತ್ಯ ನಗುತ್ತದೆ
ಅರಳಿಸುತ್ತದೆ ಹೂ
ಮರಳಿಸುತ್ತದೆ ಮನಸ್ಸು
ಅದರೆಡೆಗೆ ಮತ್ತೆ ಮತ್ತೆ ;
ನಾನದನ್ನು ಪ್ರೀತಿಸುತ್ತೇನೆ
ಹೆಸರು ಗೊತ್ತಿಲ್ಲದಿದ್ದರೂ…..

ಎಂಬ ಹೂ ಮನಸ್ಸಿನ, ಮನುಷ್ಯ ಪ್ರೀತಿಯ, ಪ್ರಗತಿ ಪರ ಚಿಂತನೆಯ, ಜನಪರ ಕಾಳಜಿಯ ಕವಿ ಮಹಾಂತಪ್ಪ ನಂದೂರ ಮೂಲತಃ ಕಲ್ಬುರ್ಗಿ ಜಿಲ್ಲೆಯ ‘ಪಟ್ಟಣ’ ಎಂಬ ಊರಿನವರು. ಬಡತನದ ನಡುವೆ ಅರಳಿದ ಪ್ರತಿಭಾವಂತ ನಂದೂರ. ಹೊಟ್ಟೆಪಾಡಿಗಾಗಿ ಮುಂಜಾನೆ ದುಡಿದು, ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಬಾಕಿ ಸಮಯದಲ್ಲಿ ಟ್ಯೂಷನ್ ಹೇಳಿ ತಮ್ಮ ಮೂಲ ನೆಲದಲ್ಲೇ ವಿದ್ಯಾಭ್ಯಾಸ ಮುಗಿಸಿ ಅರ್ಥಶಾಸ್ತ್ರದಲ್ಲಿ ಎಂ.ಎ. ಬಿ.ಎಡ್ ಪದವಿ ಪಡೆದವರು. ನಂತರ ಕೆಲ ಸಮಯ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸಿ ಈಗ ಬಹು ವರ್ಷಗಳಿಂದ ಹುಬ್ಬಳ್ಳಿಯ ನೈರುತ್ಯ ರೇಲ್ವೆಯ ಲೆಕ್ಕ ಪತ್ರ ವಿಭಾಗದಲ್ಲಿ ಹಿರಿಯ ‘ಅನುಭಾವ’ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದವಿಯ ಹಂತದಲ್ಲೇ ಕವಿತೆ ಬರೆದು ಜನ ಮನ್ನಣೆ ಪಡೆದ ನಂದೂರ, ನಂತರದ ದಿನಗಳಲ್ಲಿ ಸಾಹಿತ್ಯವೇ ತಮ್ಮ ಉಸಿರೆಂದು ತಿಳಿದು ಕನ್ನಡಮ್ಮನ ಸೇವೆಯಲ್ಲಿ ತೊಡಗಿ, ತಮ್ಮ ನೌಕರಿಗೆ ಎಂದೂ ಚ್ಯುತಿ ಬಾರದಂತೆ ವೃತ್ತಿ ಮತು ಪ್ರವೃತ್ತಿಯಲ್ಲಿ ಸಮಾನತೆಯ ಮಂತ್ರದೊಂದಿಗೆ ಬದುಕಿನಲಿ ಬೆಳಕು ಕಂಡವರು. ಮತ್ತೊಬ್ಬರ ಮನಸ್ಸಿಗೆ ಎಂದೂ ನೋವಾಗದಂತೆ ಎಲ್ಲರೊಳಗೊಂದಾಗುವ ನಗುಮೊಗದ ನಂದೂರ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕಲ್ಬುರ್ಗಿಯಿಂದ ಹುಬ್ಬಳ್ಳಿಗೆ ನೌಕರಿಗೆ ಬಂದ ಮಹಾಂತಪ್ಪ ನಂದೂರರಿಗೆ ಹುಬ್ಬಳ್ಳಿಯ ಪರಿಸರ ತುಂಬಾ ಹಿಡಿಸಿತು. ತಮಗೊಪ್ಪುವ ನೌಕರಿಯೊಂದಿಗೆ ಸಾಹಿತ್ಯದ ಅಭಿಮಾನಿಗಳೂ ಮಾರ್ಗದರ್ಶಕರೂ ಸ್ನೇಹಿತರೂ ದೊರೆತಿದ್ದರಿಂದ ಹುಬ್ಬಳ್ಳಿಯಲ್ಲಿ ಸದ್ದು ಗದ್ದಲವಿಲ್ಲದೇ ತಮ್ಮ ಬರವಣಿಗೆ ಪ್ರಾರಂಭಿಸಿದರು. ಡಾ. ಪ್ರಹ್ಲಾದ ಅಗಸನಕಟ್ಟೆ, ಜಗದೀಶ ಮಂಗಳೂರ ಮಠ ಮತ್ತು ಆರೂರು ಲಕ್ಷ್ಮಣ ಶೇಟ್‌ರಂತಹ ಹಿರಿಯರೊಂದಿಗಿನ ಚರ್ಚೆಯ ಫಲವಾಗಿ ಇವರ ಸಾಹಿತ್ಯದ ನೆಲೆ ಬಲಗೊಂಡಿತು ; ಗೆಳೆಯ ಮುನಿಸ್ವಾಮಿಯ ಸಾಂಗತ್ಯದಿಂದಲೂ ಸಹ. ಇದೇ ಸಂದರ್ಭದಲ್ಲಿ ವಾಣಿಜ್ಯ ನಗರಿ ಎಂದು ಹೆಸರು ಪಡೆದ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಚಟುವಟಿಕೆಗಳು ನವಿಲಿನಂತೆ ಗರಿಗೆದರಿದವು. ಅನ್ವೇಷಣಾ ಸಾಹಿತ್ಯ, ಅಕ್ಷರ ಸಾಹಿತ್ಯ ವೇದಿಕೆ ಮತ್ತು ನೈರುತ್ಯ ರೇಲ್ವೆ ಕನ್ನಡ ಸಂಘಗಳು ಮೂಲಕ ಮಹಾಂತಪ್ಪ, ಕನ್ನಡದ ಮನಸ್ಸುಗಳೊಳಗೂಡಿ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಕಂಪು ಇಂಪಾಗಿಸಿದರು. ಮನೆ ಮನೆ ಕವಿಗೋಷ್ಠಿ, ತಿಂಗಳಿಗೊಮ್ಮೆಯ ಸಾಹಿತ್ಯಿಕ ಚರ್ಚೆ, ಪುಸ್ತಕ ಬಿಡುಗಡೆ ಮತ್ತು ಇನ್ನಿತರ ಸಾಹಿತ್ಯದ ಕಾರ್ಯಕ್ರಮಗಳಿಗೆ ಸುನಂದಾ ಕಡಮೆಯವರನ್ನು ಒಳಗೊಂಡಂತೆ ಇಲ್ಲೊಂದು ಸಮಾನ ಮನಸ್ಸಿನ ಪಡೆಯೇ ಸಿದ್ಧವಾಯಿತು. ಅಧ್ಯಯನ ಅಧ್ಯಾಪನಗಳ ಮೂಲಕ ಸಾಹಿತ್ಯಿಕ ನೆಲೆಗಟ್ಟು ಭದ್ರವಾಗುತ್ತಾ ನಂದೂರರು, ಅಲ್ಲಿ ರೇಲ್ವೆಯಲ್ಲಿಯೂ ಸಹ ತಮ್ಮದೇ ಛಾಪಿನಿಂದ ದಕ್ಷ ಅಧಿಕಾರಿ ಎಂದೆನಿಸಿಕೊಳ್ಳುತ್ತಾ, ಇಲ್ಲಿ ವೈಶಿಷ್ಟ್ಯಪೂರ್ಣ ಬರವಣಿಗೆಯ ಮೂಲಕ ಸಾಹಿತ್ಯಾಭಿಮಾನಿಗಳ ಗಮನ ಸೆಳೆದರು.

ಉದಕದೊಳಗಣ ಬೆಂಕಿ (ಕವಿತೆ)
ಅಯಿತಾರ ಅಮಾಸಿ (ಕಥಾ ಸಂಕಲನ)
ದೂರದ ಪದ (ಕವಿತೆ)
ಜೀವ ಕೊಳಲು (ಕವಿತೆ)
ಕಲ್ಯಾಣವೆಂಬ ಪ್ರಣತಿ (ಸುನೀತ ಸಂಗ್ರಹ)
ಪುಟ್ಟರಾಜ ಗವಾಯಿ (ಜೀವನ ಚರಿತ್ರೆ)
ಅರಿವೇ ಪ್ರಮಾಣು (ಜೀವನ ಕಾವ್ಯ)
ಆನಂದ ನಿನಾದ (ವಿಮರ್ಶಾ ಲೇಖನ)

ಇವು ಮಹಾಂತಪ್ಪ ನಂದೂರರ ಪ್ರಮುಖ ಪ್ರಕಟಿತ ವೈವಿಧ್ಯಮಯ ಸಾಹಿತ್ಯದ ಕೃತಿಗಳು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯವಾಗಿದೆ. ಜನಪರ ಮತ್ತು ಜೀವ ಪರ ಕಾಳಜಿ ಇವರ ನಿಲುವು. ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ ‘ಬೆರಗು’ ಎನಿಸುವರು. ಸಮಾಜದಲ್ಲಿಯ ಅಸಮಾನತೆ, ಅನ್ಯಾಯ, ಭ್ರಷ್ಟಾಚಾರದ ಜೊತೆ ಪ್ರೀತಿ ಪ್ರೇಮದ ಕವನಗಳೂ ಬರೆದ ಇವರು, ಕವಿತೆಗೆ ಒಂದು ಶಾಂತವಾದ ಸುನಾದವನ್ನು ಕೇಳುವ-ಕೇಳಿಸುವ ದನಿಯೂ ಇರಬೇಕು ಎಂದು ನಂಬಿದವರಿವರು. ಸೃಜನಶೀಲ ಬರಹದಲ್ಲಿ ಪ್ರಯೋಗ ಶೀಲತೆ ಇರಬೇಕು ಎನ್ನುವ ಇವರ ಕಥೆಗಳಲ್ಲಿ ಕಲ್ಬುರ್ಗಿ ನೆಲದ ಸೊಗಡು, ಅಲ್ಲಿಯ ಪರಿಸರ, ಜೀವನ, ನಂಬಿಕೆ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಕಥೆಯಾಗಿಸಿರುವರು. ಶರಣು ಸಾಹಿತ್ಯವನ್ನು ಪ್ರೀತಿಸುವ ಮಹಾಂತಪ್ಪ ಬದುಕಿನುದ್ದಕ್ಕೂ ಅಸಮಾನತೆ ಮತ್ತು ಅಸ್ಪ್ರಶ್ಯತೆಗಳಿಗೆ ನೊಂದು ಬೆಂದವರು.

ಸಂಬೋಳಿ ! ಸಂಬೊಳಿ ! ಸಂಬೋಳಿ
ಬಸವಣ್ಣ ಬರುತಿಹರು ಬೀದಿಯಲಿ
ಬಾಗಿಲು ತೆರೆದು ಹೊರ ಬನ್ನಿರಿ
ಬಲದ ಕೈಯಲ್ಲಿ ಭವದ ಬಟ್ಟಲು
ಎಡದ ಕೈಯಲಿ ಅನುಭಾವದ ತೊಟ್ಟಿಲು
ಬರುವ ದಾರಿಯ ತುಂಬಾ ದಯದ ಮೆಟ್ಟಿಲು

ಇದು ಬಸವಣ್ಣನವರ ಕುರಿತಾಗಿ ಇವರು ಬರೆದ ಮತ್ತು ಇವರಿಗೆ ಹೆಸರು ತಂದುಕೊಟ್ಟ ಜನಜನಿತವಾದ ಕವಿತೆ. ಸಮಾನತೆಯ ಪ್ರಣತಿ ಹಿಡಿದು, ಶುಭ್ರ ಬಿಳಿ ಉಡುಗೆ, ಸಹಜ ನಡಿಗೆ, ನಗುಮೊಗಕೆ ನೊಸಲ ವಿಭೂತಿ ತೊಟ್ಟು ನುಡಿದಂತೆ ನಡೆಯುವ ಬಸವ ಪ್ರಭು ಬರುತ್ತಿರುವರು. ಅದಕ್ಕಾಗಿ ಒಳಗೆ ಕೂತಿದ್ದ ಜನರೆಲ್ಲಾ ಎದೆಯ ಕದವ ತೆರೆದು, ಕುಲದ ಕೀಲಿಯ ಕಳಚಿ, ಮಠ ಮಂದಿರ ತೊರೆದು, ಮುಟ್ಟು ಮೈಲಿಗೆಯ ಮಡಿ ಇಲ್ಲದೇ ಮನೆಯ ಹೊಸಿಲ ದಾಟಿ ಹೊರಬನ್ನಿ ಎನ್ನುವಾಗ ಇವರ ಪ್ರಗತಿ ಪರ ನಿಲುವು ಬಸವಣ್ಣನ ಕವಿತೆಯಿಂದ ಸ್ಪಷ್ಟವಾಗಿ ಗೋಚರಿಸುವದು.

ಮಹಾಂತಪ್ಪ ನಂದೂರರ ಬರವಣಿಗೆ-ಬೆಳವಣಿಗೆಗಳನ್ನು ಅತ್ಯಂತ ಪ್ರೀತಿ ಹಾಗೂ ಕುತೂಹಲದಿಂದ ಗಮನಿಸುತ್ತಿರುವ ನಾಡಿನ ಖ್ಯಾತ ಸಾಹಿತಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿಯವರು ‘ಕಲ್ಯಾಣವೆಂಬ ಪ್ರಣತಿ’ಯು ಕುರಿತು ಬರೆಯುತ್ತಾ “ಇದೊಂದು ಅಪರೂಪದ ಕಾವ್ಯ ಪ್ರಯೋಗ. ನೀರಿನ ಮೂಲಕವೇ ನೀರಿನ ಧರ್ಮವನ್ನು ಅರಿಯಬಹುದು ಎನ್ನುವಂತೆ, ಇಲ್ಲಿ ವಚನಕಾರರು ಭಾಷೆಯ ಸಮ್ಮರ್ಧದಿಂದಲೇ ಅವರು ಜೀವಿತದ ಅನನ್ಯವಾದ ಅನುಭೂತಿ- ಯನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಕಾವ್ಯಾನುಸಂಧಾನವಿದೆ. ಈ ರಚನೆಗಳಿಂದ ನಾವು ಪಡೆಯುವ ಕಾವ್ಯಾನುಭೂತಿಯು, ಮೂಲದ ಭಾಷಾ ಸಮ್ಮರ್ದದೊಂದಿಗೇ ನಾವು ಮುಳುಗಾಟ ನಡೆಸಿದ್ದಲ್ಲಿ ಪಡೆಯಬಹುದಾಗಿದ್ದ ಅನುಭೂತಿಗಿಂತ ಯಾವ ಬಗೆಯ ಭಿನ್ನತೆಯನ್ನು ಪಡೆದಿದೆ ಎಂಬುದು ನಾವೀಗ ಚಿಂತಿಸಬೇಕಾದ ಸಂಗತಿ. ಸದ್ಯಕ್ಕಂತೂ ಹರಿಯುವ ಹೊಳೆಯಲ್ಲಿ ಮುಳುಗಿ ಈಗಷ್ಟೇ ಹೊರಗೆ ಬಂದವನ ಮೈನಡುಕದಂತಿದೆ ಈ ಹೃದಯಸ್ಪರ್ಶಿ ರಚನೆಗಳು” ಎಂದಿರುವರು. ಒಟ್ಟೂ 63 ಶರಣರ ಕುರಿತಾಗಿ 75 ಸುನೀತಗಳು ‘ಕಲ್ಯಾಣವೆಂಬ ಪ್ರಣತಿ’ಯಲ್ಲಿದೆ ಎಂಬುದನ್ನು ನಾವಿಲ್ಲಿ ನೆನೆಯಬಹುದಾಗಿದೆ.

‘ಅರಿವೇ ಪ್ರಮಾಣು’ ಇದು ಅಕ್ಕನಾಗಮ್ಮನ ಜೀವನ ಕಾವ್ಯ ಹದಿನಾಲ್ಕು ಸಾಲಿನ 375 ಸುನಿತಗಳು ಈ ಪುಸ್ತಕದಲ್ಲಿ ಒಳಗೊಂಡಿರುತ್ತದೆ. ಅಕ್ಕ ನಾಗಮ್ಮನ ಬದುಕೇ ಈ ಪುಸ್ತಕದ ಕೇಂದ್ರ ಬಿಂದು. ಆಕೆಯ ಸುತ್ತಲೂ ಶರಣ ಸಂಕುಲದ ಬದುಕು ಮತ್ತು ಅಂದಿನ ಸಾಮಾಜಿಕ, ಜೀವನ ಮೌಲ್ಯಗಳು, ಕಾಯಕ, ಸಮತೆ, ಪುರುಷ ಪ್ರಧಾನ ಅಸಮಾನತೆಯ ಅಂಶಗಳೂ ಒಳಗೊಂಡಿದೆ. ಹನ್ನೆರಡನೇ ಶತಮಾನದಲ್ಲಿ ಮೂಡಿ ಬಂದ ಶರಣ ಸಾಹಿತ್ಯ ವಿಶ್ವಮಾನ್ಯವಾಗಿದೆ. ಅಲಕ್ಷಿತ ವಚನಕಾರ್ತಿ ಅಕ್ಕನಾಗಮ್ಮನವರ ಬದುಕು ಮತ್ತು ಚಿಂತನೆಗಳು ಒಳನೋಟವನ್ನು ನಂದೂರರು ಹೃದಯಂಗಮವಾಗಿ ಚಿತ್ರಿಸಿರುವರು.

ಒಂದು ಸುನಿತ ಇಂತಿದೆ ;

ಪುಣ್ಯವೇನು ಪಾಪವೇನು ಭುವಿಯ ಮೇಲೆ
ಹೆಣ್ಣೆಂದು ಶುರು ಶಾಪವೇನೋ… ಹಿಡಿ ಮುಚ್ಚಿ ತೂರಿ
ಮಣ್ಣು ತುಟಿ ಕಚ್ಚಿ ನಿತ್ಯ ಬಾಳು. ಮೊಗದಲಿ ಬರಿ
ತೋರು ನಗು ಮುಗುಳು. ಅಹಾ ! ತಾನು ಮಹಾ ದೇವಿ
ಮನೆ ಬೆಳಗು ಸಿರಿ ದೇವಿ ಸಂತಾನ ಲಕ್ಷ್ಮಿ ಪುರುಷ
ಫಲ ಕೊಟ್ಟು ಪಡೆವ ಪದವಿ. ಅಧಿಕಾರ ಅಂತಸ್ತು
ವಿದ್ಯೆ ಪೂಜೆ ದೇವರು ದರ್ಶನ ಪುರುಷ ಪಾಲು
ತನ್ನ ಪಾಲಿನ ಭಾಗ್ಯ ತಾನೂಡಿಸುವ ಎದೆ ಹಾಲು
ಅಂತಃಕರಣ ಬೆರಳು ನೇವರಿಸುತಿತ್ತು ತನ್ನದೇ
ಕರುಳು ಕುಡಿ ತನ್ನದುರಿಗಿದ್ದ ಮುದ್ದು ಮಗಳು….
ಗಂಡನಾಸೆ ಗಂಡಿನಾಸೆ ಹೊತ್ತು ಬಸಿರು ಮಾದಲಾಂಬೆ
ಕಣ್ಣು ಮುಂದೆ ತಾಯಿ ಭೂಮಿ ರೂಪ ತಾಯ್ಗರುಳು
ಬೆಳೆ ಬೆಳೆವ ಮಹಾ ತಾಯಿ ಮುತ್ತಬ್ಬೆ ತಂಪು ತವರು
ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು…

ನಂದೂರರ ಕಾವ್ಯ ಸೃಷ್ಟಿಯೇ ಅಪೂರ್ವ ವಾದುದು. ಪದಗಳ ಲಾಲಿತ್ಯ, ಶಬ್ದ ಜೋಡಣೆ, ಹಾಡಲು ತಂಪು ಕಿವಿಗಳಿಗೂ ಇಂಪು. ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು… ಇಂತಹ ಶಬ್ದ ಪ್ರಯೋಗಗಳು ಓದುಗರ ಮನಸೂರೆಗೊಳ್ಳುತ್ತದೆ. ಇವೆಲ್ಲಾ ಸಾಲುಗಳು ನಂದೂರರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಪರೂಪದ ಕೊಡುಗೆಯಾಗಿರುತ್ತದೆ.

ಸಹೃದಯತೆ ಇದ್ದರೆ ಮಾತ್ರ ಸಾಹಿತ್ಯ ರಚನೆ ಸಾಧ್ಯ ಎಂಬ ನಂಬಿಕೆಯ ಮಹಾಂತಪ್ಪ ನಂದೂರ, ಚೆನ್ನವೀರ ಕಣವಿ ಮತ್ತು ಎಚ್.ಎಸ್. ವೆಂಕಟೇಶಮೂರ್ತಿಯವರ ಸಾಹಿತ್ಯದಿಂದ ಪ್ರೇರಿತರಾಗಿ ತಾನು ಅಕ್ಷರಗಳನ್ನು ಬರೆದೆ ಎನ್ನುವಾಗ ಅವರ ಮುಖದಲ್ಲಿ ಧನ್ಯತಾ ಭಾವ ಹೊರಹೊಮ್ಮುವದು. ನಯ, ವಿನಯ, ವಿಧೇಯತೆ, ಗಾಂಭೀರ್ಯಗಳನ್ನು ಮೈಗೂಡಿಸಿಕೊಂಡ ಇವರು ಬದುಕು ಮತ್ತು ಬರಹದಲ್ಲಿ ಸಮನ್ವಯತೆ ಸಾಧಿಸಿದವರು. ಸಂಕ್ರಮಣ ಕಥೆ ಮತ್ತು ಕಾವ್ಯ ಬಹುಮಾನ, ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಸೇಡಂನ ಅಮ್ಮ ಪ್ರಶಸ್ತಿ, ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ, ಬೆಟ್ಟದೂರು ಪ್ರತಿಷ್ಟಾನದ ಪ್ರಶಸ್ತಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಾಹಿತ್ಯ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ ಹೀಗೆ ಹತ್ತು ಹಲವು ಸಾಹಿತ್ಯಿಕ ಪ್ರಶಸ್ತಿಗಳು ಇವರ ಪುಸ್ತಕಗಳನ್ನು ಹುಡುಕಿಕೊಂಡು ಬಂದಿದೆ.

ಕಾವ್ಯಕ್ಕೆ ಹೂ ಮುಡಿಸುವ ಮನದನ್ನೆ ಪುಷ್ಪಾ, ಬೆರಗಿನ ಅಕ್ಷರಗಳನ್ನು ಮೂಡಿಸುವ ಮಗಳು ದೀಕ್ಷಾ ಮತ್ತು ವೈದ್ಯಕೀಯ ವ್ಯಾಸಂಗದ ಮಗ ಅಭಿಷೇಕ್ ಇವರಿಂದೊಡಗೂಡಿದ ತುಂಬು ಸಂಸಾರದ ಮಹಾಂತಪ್ಪ ನಂದೂರರಿಗೆ ಶುಭ ಕೋರಿ “ನಾಗಸುಧೆ”ಯಿಂದ ಅಭಿನಂದಿಸಿ, ಮುಂಬರುವ ದಿನಗಳಲ್ಲಿ ಇವರಿಂದ ಇನ್ನೂ ಹೆಚ್ಚು ಹೆಚ್ಚು ಮಾನವೀಯ ಮೌಲ್ಯದ ಪುಸ್ತಕಗಳು ಹುಟ್ಟಲಿ ಎಂದು ಆಶಿಸುವೆನು.

-ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...