Homeಡೇಟಾ ಖೋಲಿಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

ಪೀಕ ವಿಮೆ ದಂಧೀ ಒಳಗಾ ಲಾಭ ನಷ್ಟದ ಕತಿ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ನಾವು ಕಷ್ಟಪಟ್ಟು ಬೆಳೆದ ಪೀಕ ‘ದೇವರ ಕೈ’ ಆಟದಿಂದ ಹಾಳಾಗಿ ಹೋದರ ಸರಕಾರನೋ, ಖಾಸಗಿ ಕಂಪನಿನೋ ನಮ್ಮ ನಷ್ಟ ಭರ್ತಿ ಮಾಡಿಕೊಡೋ ವ್ಯವಸ್ಥೆಗೆ ಬೆಳೆವಿಮೆ ಅಂತ ಹೆಸರು. (ಈ ‘ದೇವರ ಕೈ’ ಅನ್ನೋದು ರಾಷ್ಟ್ರೀಯ ಬೆಳೆವಿಮೆ ಯೋಜನೆಯ ತಾಕೀತುಗಳಲ್ಲಿ ಒಂದು.)

ಹಂಗಾರ ಇತರ ತಾಕೀತುಗಳೇನು? ಈ ಯೋಜನೆಯ ವಿವರಗಳು ಏನು?

ಮೊದಲಿಗೆ ಈ ಯೋಜನೆ ಬಂದಿದ್ದು ಇಂದಿರಾಗಾಂಧಿಯವರ ನಿಧನದ ನಂತರ ಬಂದ ಕಾಂಗ್ರೆಸ್ ಸರಕಾರದ ತಲಿಯೊಳಗ. 1985ರಾಗ ಈ ಯೋಜನೆ ತಂದಾಗ ಬರೇ 7 ಶೇಕಡಾ ರೈತರು ಇದರ ಉಪಯೋಗ ಪಡದರು. ನಂತರ 2000ದೊಳಗ 10 ಶೇಕಡಾ ಹಾಗೂ 2018ರೊಳಗ 26 ಶೇಕಡಾ ರೈತರು ಇದರೊಳಗ ಇದ್ದಾರ. 2016ಕ್ಕೆ ಹೋಲಿಸಿದರ ಶೇಕಡಾ 15 ರೈತರು ಈ ಯೋಜನೆಯಿಂದ ಹಿಂದ ಸರದಾರ. ಭಾರತದ ಶೇಕಡಾ 30ಕ್ಕೂ ಕಮ್ಮಿ ಕೃಷಿಭೂಮಿ ಇಂತಹ ಯೋಜನೆಗಳ ಕೆಳಗ ಅದ.

ನಮಗೆಲ್ಲಾರಿಗೂ ಗೊತ್ತಿರೋ ಎಲ್‍ಐಸಿ ಹಂಗನ, ಬೆಳೆ ವಿಮೆಗೆ ಏಐಸಿ (ಅಗ್ರಿಕಲ್ಚರ್ ಇನ್ಷುರನ್ಸ ಕಾರ್ಪೊರೇಷನ್ನು ‘ಕೃವಿನಿ’) ಅಂತ ಒಂದು ಅದ. ನರೇಂದ್ರ ಅವತಾರದ ಸರಕಾರ ಬರೋವರೆಗೂ ಇಡೀ ದೇಶದ ಕೃಷಿವಿಮೆ ಜವಾಬುದಾರಿ ಅದಕ್ಕ ಇತ್ತು. ಹಂಗ ಇರಬಾರದು ಖಾಸಗಿ ಕಂಪನಿಗಳಿಗೂ ಸೇವೆಯ ಅವಕಾಶ ಸಿಗಲಿ ಅಂತಹೇಳಿ ಅವರನ್ನು ಇದರೊಳಗ ಬರಮಾಡಲಾಯಿತು. ಸುಮಾರು ಹತ್ತು ಖಾಸಗಿ ಕಂಪನಿಗಳಿಗೆ ದೇಶವನ್ನು ಕೃಷಿ -ಹವಾಮಾನ ಘಟಕಗಳಾಗಿ ಹಂಚಿಕೊಡಲಾಯಿತು. ಅದರೊಳಗ ಐಸಿಐಸಿಐ, ಇಫ್ಕೋ ಟೋಕಿಯೋ, ಎಚ್‍ಡಿಎಫ್‍ಸಿ, ಚೋಲಮಂಡಲಂ, ಬಜಾಜು, ರಿಲೈಯನ್ಸ್, ಟಾಟಾ, ಎಸ್‍ಬಿಐ, ಫ್ಯೂಚರ್, ಯುನಿವರ್ಸಲ್ ಸೊಂಪೋ ಮುಂತಾದ ಸಂಪಾದ ಕಂಪನಿಗಳು ಇದ್ದವು.

ರೈತರು ಕೇವಲ ಶೇಕಡಾ ಎರಡು ವಿಮೆ ಕಂತು ತುಂಬಬೇಕು, ಕೇಂದ್ರ ಹಾಗೂ ರಾಜ್ಯ ತಲಾ ಶೇಕಡಾ 49 ತುಂಬಬೇಕು. ನಷ್ಟದ ಅಂದಾಜನ್ನು ರಾಜ್ಯ ಸರಕಾರ ಮಾಡಬೇಕು. ಪರಿಹಾರಧನವನ್ನು ರೈತರಿಗೆ ವಿಮಾ ಕಂಪನಿಗಳು ನೀಡಬೇಕು ಅಂತ ಯೋಜನೆ ತಯಾರಿಸಿ ಅದನ್ನು ಪ್ರಧಾನಮಂತ್ರಿಗಳ ಬ್ರ್ಯಾಂಡಿನ ಮ್ಯಾಲೆ ಹಾರಿ ಬಿಡಲಾಯಿತು. ರಾಮಾಯಣದಾಗ ಕಲ್ಲಿನ ಮ್ಯಾಲೆ ರಾಮ ಅಂತ ಬರದರ ಅವು ನೀರಾಗ ತೇಲತಿದ್ದವಂತ. ನಾಮ ಬಲ ಅಂದರ ಅಷ್ಟು ದೊಡ್ಡದು. ಹಿಂತಾ ಚಮತ್ಕಾರ ಈ ಕಲಿಯುಗದೊಳಗ ನಡೀಲೀ ಅಂತ ಅದರ ಹೆಸರು ಬದಲಾವಣೆ ಆತು. ಆ ಯೋಜನೆ ತೇಲಿತೋ ಮುಳುಗಿತೋ, ಪ್ರವಾಹದಾಗ ಬೆಳಿ ಕಳಕೊಂಡ ರೈತರ ಹೇಳಬೇಕು.

ಕಂತಿನ ಹಣ ಕೃಷಿ, ನೀರಾವರಿ ಹಾಗೂ ತೋಟಗಾರಿಕೆ ಭೂಮಿಯೊಳಗ ಪರಿಹಾರದ ಶೇಕಡಾ 1.5, 2 ಹಾಗೂ 5 ಅಂತ ನಿಗದಿ ಮಾಡಲಾಯಿತು. ಆದರ ಅದರಾಗ ಕೆಲವು ಸಮಸ್ಯಾ ಇದ್ದವು. ಉದಾಹರಣೆಗೆ ರೈತ ಹಾನಿಯಾದ 48 ಗಂಟೆಯೊಳಗ ವಿಮಾ ಕಂಪನಿಗೆ ಫೋನು ಮಾಡಿ ತಿಳಿಸಬೇಕು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರವಾಹ ಬಂದಾಗ ರೈತರು 28 ಗಂಟೆ ಮಟಾ ಗಿಡದ ಕೊಂಬಿಗೆ ಜೋತಾಡುತ್ತಾ ಇದ್ದರು. ಅವರು ಹೆಂಗ ಫೋನು ಮಾಡ್ಯಾರು? ಆದರೂ ಈ ಮೂರು ವರ್ಷದೊಳಗ ಕಂಪನಿಗಳು ಬಂಗಾರದ ಅದಿರಿನ ಹಿಂದೆ ಬಿದ್ದ ದಾಹಿಗಳಂಗ ನಿರಾಸೆ ವ್ಯಕ್ತ ಪಡಿಸಿದರು.

‘ಇದು ನಮಗ ಲಾಭದಾಯಕ ಅಲ್ಲ, ನಮ್ಮ ಮರು ವಿಮೆ ಹಾಗೂ ಆಡಳಿತ ವೆಚ್ಚಗಳು ಭಾಳ ಆಗತಾವ. ಲಾಭಾಂಶ ಕಮ್ಮಿ. ಇದು ನಮಗ ಬ್ಯಾಡ ಅಂತ ಹೇಳಿದರು. ಸರಕಾರಿ ಸಂಸ್ಥೆಗಳಿಗೆನ ಇದರ ನೊಗ ಹೊರಸರಿ ನಾವು ಒಲ್ಲಿವಿ, ಅಂತ ಆಟ ಗೂಟ ಜೈ’ ಅಂದರು.

ಹಿಂಗಾರ ಅವರಿಗೆ ಆದ ನಷ್ಟ ಏನು ನೋಡುಣು ಬನ್ರಿಪಾ.

ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆ ಆರಂಭವಾದ ಮೂರು ವರ್ಷದಾಗ (ನಂತರದ ವರ್ಷಗಳ ಡೇಟಾ ಸರಕಾರದಿಂದ ಇನ್ನೂ ಲಭ್ಯ ಆಗಿಲ್ಲ)- ಈ ಕಂಪನಿಗಳು ಸುಮಾರು 76 ಸಾವಿರ ಕೋಟಿ ಕಂತು ವಸೂಲು ಮಾಡ್ಯಾವು. ಇದರೊಳಗ ಸುಮಾರು 75 ಸಾವಿರ ಕೋಟಿ ತೆರಿಗೆದಾರರ ದುಡ್ಡು. ಬೆಳೆ ನಾಶ, ಬರ, ಪ್ರವಾಹ ಮುಂತಾದ ವೈಪರೀತ್ಯಗಳಾಗಿದ್ದಕ್ಕ ರೈತರಿಗೆ ಸಿಕ್ಕ ಪರಿಹಾರ ಸುಮಾರು 56 ಸಾವಿರ ಕೋಟಿ. ಅಂದರ ಈ ಕಂಪನಿಗಳು ನಿವ್ವಳ 27 ಶೇಕಡಾ ಲಾಭದಾಗ ಇದ್ದಾವು. ಅವು ಮರು ವಿಮೆ ಮೊತ್ತ ಶೇಕಡಾ 10 ಹಾಗೂ ಆಡಳಿತ ವೆಚ್ಚ ಶೇಕಡಾ 5 ಇದ್ದದ್ದರಿಂದ ಶೇಕಡಾ 12 ಲಾಭ ಗಳಿಸಿದಂಗ. ಆದರ ಇದು ಅವುಗಳ ಶೇರುದಾರರಿಗೆ ಕಮ್ಮಿ ಅನ್ನಿಸಿದ್ದಕ್ಕ ಆ ಮೊದಲಿನ ಹತ್ತು ಕಂಪನಿಗಳಲ್ಲಿ ಕೆಲವು ಈ ಯೋಜನೆಯಿಂದ ಹಿಂದ ಸರದಾವ. ಇನ್ನೂ ಸುಮಾರು ನಾಕು ಸಾವಿರ ಕೋಟಿ ಪರಿಹಾರ ಧನ ಕೊಡೋ ಬಾಕಿ ಉಳದೈತಿ.

ಹಂಗಾರ ಈ ಧಂದೇನ ಹಿಂಗೇನು ಮತ್ತ? ಹಂಗೇನಿಲ್ಲ. ಸರಕಾರಿ ವಿಮಾ ಕಂಪನಿಯ ಲೆಕ್ಕ ಪಟ್ಟಿ ನೋಡಿದರ ಇದು ಗೊತ್ತಾಗತದ. ಏಐಸಿ ಅಥವಾ ‘ಕೃವಿನಿ’ ಕಳೆದ ವರ್ಷ ಸುಮಾರು 7893 ಕೋಟಿ ರೂಪಾಯಿ ಕಂತು ಪಡೆದು 7040 ಕೋಟಿ ರೂಪಾಯಿ ಪರಿಹಾರ ಕೊಟ್ಟದ. ಇದು ಸುಮಾರು ಶೇಕಡಾ 90ರಷ್ಟು. ಇವರಿಗೂ ಮರುವಿಮೆ ಹಾಗೂ ಆಡಳಿತ ವೆಚ್ಚ ಅಂತ ಅದಾವು. ಸರಕಾರಿ ಸಂಸ್ಥೆ ಆದ್ದರಿಂದ ಸಿಬ್ಬಂದಿ ವೆಚ್ಚನೂ ಅದಾನಿ- ಅಂಬಾನಿಗಿಂತ ಹೆಚ್ಚು. ಆದರೂ ಇವರು ಯಾಕ ಹೆಚ್ಚು ಕೊಡಲಿಕ್ಕೆ ಆಯಿತು. ಅವರು ಇಷ್ಟೇ ಮೊತ್ತದ ಪರಿಹಾರ ಕೊಡತಿದ್ದರು ಅಂದರ ಇವರನ್ನ ತಗದು ಖಾಸಗಿ ಕಂಪನಿಗಳನ್ನು ಕರದು ಕರದು ಕೊಟ್ಟಿದ್ದು ಯಾಕೆ? ಮೊದಲ ಮೂರು ವರ್ಷ 76 ಸಾವಿರ ಕೋಟಿ ಹಣ ಹೊಡದುಕೊಂಡು ಆಮ್ಯಾಲೆ ನಾವಲ್ಲ ಅಂದರಲ್ಲಾ, ಅದನ್ನು ಮೊದಲೇ ಯಾಕೆ ಊಹಿಸಲಿಲ್ಲ? ಐದು ವರ್ಷ- ಹತ್ತು ವರ್ಷದ ದೀರ್ಘಕಾಲೀನ ಕರಾರಿನ ಕಂಟ್ರಾಕ್ಟಗಳನ್ನ ಯಾಕೆ ಕರೀಲಿಲ್ಲ? ಸರಕಾರಿ ಸಂಸ್ಥೆಗೆ ಕೇವಲ ಶೇಕಡಾ 10 ರಷ್ಟು ಕೃಷಿಭೂಮಿಯನ್ನ ಮಾತ್ರ ಬಿಟ್ಟು ಕೊಟ್ಟರು?

ಇಲಿಗಳ ರಾಜ್ಯದಲ್ಲಿ ಬೆಕ್ಕಿಗೆ ಗಂಟೀ ಕಟ್ಟೂದಲ್ಲಾ, ಅದಕ್ಕ ಸವಾಲು ಕೇಳೋದೂ ಸಹಿತ ಸಾಧ್ಯವಿಲ್ಲ.

ವಿವರಗಳಿಗೆ:mhttps://pmfby.gov.inwww.aicofindia.com

ಪೀಕ (ಹೆಚ್ಚು ಕಡಿಮೆ ಪೀಕ್ ಎಂದು ಉಚ್ಚರಿಸುವ ಪೀಕ ಅಂದ್ರ ಬೆಳಿ – ಬೆಳೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...