ರಾಷ್ಟ್ರ ರಾಜಧಾನಿ ದೆಹಲಿಯ ಮಹಿಳೆಯರಿಗೆ ಮಾಸಿಕ 1000 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆ’ಗೆ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ (ಡಿ.12) ಚಾಲನೆ ನೀಡಿದ್ದಾರೆ.
ದೆಹಲಿ ವಿಧಾನಸಭೆಗೆ ಮುಂದಿನ ವರ್ಷದ(2025) ಫೆಬ್ರವರಿಯಲ್ಲಿ ಅಥವಾ ಅದಕ್ಕಿಂತ ಮೊದಲು ಚುನಾವಣೆಯ ನಡೆಯುವ ಸಾಧ್ಯತೆ ಇದೆ. ಆ ಬಳಿಕ ಆರ್ಥಿಕ ನೆರವನ್ನು 2,100 ರೂ.ಗೆ ಹೆಚ್ಚಿಸಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
दिल्ली सरकार ने आज अपना वादा पूरा किया। दिल्ली सरकार की कैबिनेट ने हर महीने महिलाओं को 1000 रुपये देने का प्रस्ताव पास किया। https://t.co/HBVssCOZmr
— Arvind Kejriwal (@ArvindKejriwal) December 12, 2024
ಅದಾಗ್ಯೂ, ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆ, ಮತದಾನದ ಬಳಿಕವಷ್ಟೇ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಗುರುವಾರ ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, “ಮುಂದಿನ 15 ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಹಣ ಜಮೆ ಮಾಡುವುದು ಅಸಾಧ್ಯ. ಹೆಚ್ಚುತ್ತಿರುವ ಹಣದುಬ್ಬರದ ನಡುವೆ 1000 ಸಾವಿರ ರೂ.ಆರ್ಥಿಕ ನೆರವು ಬಹಳ ಕಡಿಮೆ ಆಯಿತು ಎಂದು ಹಲವು ಮಹಿಳೆಯರು ನನ್ನ ಬಳಿ ಬಂದು ಹೇಳಿದ್ದಾರೆ. ನಾಳೆಯಿಂದ ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆಯ ನೋಂದಣಿ ಪ್ರಾರಂಭವಾಗಲಿದೆ. 2,100 ರೂ.ಗೆ ನೋಂದಣಿ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
आज हमारी सरकार ने दिल्ली की हर महिला को हज़ार रुपए देने की योजना शुरु कर दी है।
चुनाव के बाद हम दिल्ली की हमारी सभी माताओं-बहनों को हर महीने 2100 रुपए उनके अकाउंट में देंगे। https://t.co/1KX72pLNDC pic.twitter.com/kOb4mwJngd
— Arvind Kejriwal (@ArvindKejriwal) December 12, 2024
“ಮುಂದಿನ ಎರಡ್ಮೂರು ದಿನಗಳಲ್ಲಿ ಎಎಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮಹಿಳೆಯರ ಮಾಹಿತಿ ಪಡೆದು, ನೋಂದಣಿ ಕಾರ್ಡ್‌ಗಳನ್ನು ನೀಡಲಿದ್ದಾರೆ. ನೋಂದಣಿ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಇರಿಸಿ. ದೆಹಲಿ ಚುನಾವಣೆಯ ನಂತರ, ತಿಂಗಳಿಗೆ 1000 ರೂ. ಯೋಜನೆಯನ್ನು 2100 ರೂ. ಯೋಜನೆಯಾಗಿ ಬದಲಾಯಿಸಲಾಗುತ್ತದೆ.ನೀವು ತಿಂಗಳಿಗೆ 2,100 ರೂ.ಪಡೆಯಲಿದ್ದೀರಿ” ಎಂದು ಮುಖ್ಯಮಂತ್ರಿ ಅತಿಥಿ ಇದ್ದ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಅಥವಾ ಪಿಂಚಣಿದಾರರಲ್ಲದಂತಹ ಕೆಲ ಷರತ್ತುಗಳನ್ನು ಪೂರೈಸುವ ದೆಹಲಿಯಲ್ಲಿರುವ ಎಲ್ಲಾ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ವರದಿಗಳು ಹೇಳಿವೆ.
ಈ ವರ್ಷದ ಆರಂಭದಲ್ಲಿ ವಾರ್ಷಿಕ ಬಜೆಟ್ ಭಾಷಣದಲ್ಲಿ 1,000 ರೂ.ನೀಡುವ ಯೋಜನೆ ಪ್ರಾರಂಭಿಸಲಾಗುವುದು ಎಂದು ನಾನು ಹೇಳಿದ್ದೆ. ಆದರೆ ‘ಸುಳ್ಳು ಪ್ರಕರಣದಲ್ಲಿ’ ನನ್ನನ್ನು ಜೈಲಿಗೆ ಹಾಕಿದ್ದರಿಂದ ಯೋಜನೆ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ ಎಂದು ಇದೇ ವೇಳೆ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ : ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಯಾವುದೇ ಪ್ರಸ್ತಾವನೆ ಇಲ್ಲ : ಸಂಸತ್ತಿಗೆ ತಿಳಿಸಿದ ಕೇಂದ್ರ


