Homeಸಿನಿಮಾಕ್ರೀಡೆಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶುಭಾರಂಭ: ನೇಪಾಳದ ವಿರುದ್ಧ ಮಹಿಳಾ ಟೇಬಲ್ ಟೆನಿಸ್ ಪಟುಗಳಿಗೆ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶುಭಾರಂಭ: ನೇಪಾಳದ ವಿರುದ್ಧ ಮಹಿಳಾ ಟೇಬಲ್ ಟೆನಿಸ್ ಪಟುಗಳಿಗೆ ಗೆಲುವು

- Advertisement -
- Advertisement -

ಏಷ್ಯನ್ ಗೇಮ್ಸ್ ಗೇಮ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಟೇಬಲ್ ಟೆನಿಸ್ ವಿಭಾಗದಲ್ಲಿ ಶನಿವಾರ ಭಾರತೀಯ ಮಹಿಳಾ ಪಟುಗಳಾದ ದಿಯಾ ಪರಾಗ್ ಚಿತಾಲೆ, ಆಯ್ಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ನೇಪಾಳ ತಂಡದ ವಿರುದ್ಧ 3-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದ್ದಾರೆ.

ಮೊದಲಿಗೆ ಭಾರತದ ದಿಯಾ ನೇಪಾಳದ ಸಿಕ್ಕಾ ಶ್ರೇಷ್ಠ ವಿರುದ್ಧ ಗೆಲುವು ದಾಖಲಿಸಿದರು. ಅವರು ಮೊದಲ ಪಂದ್ಯವನ್ನು 11-1 ಅಂತರದಲ್ಲಿ ಜಯಿಸಿದ್ದರು. ಅದೇ ಆತ್ಮವಿಶ್ವಾಸದಿಂದ ಆಟ ಮುಂದುವರಿಸಿದ ಅವರು, ಪಂದ್ಯವನ್ನು 7-2 ಅಂತರದೊಂದಿಗೆ ಜಯಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನೇಪಾಳದ ಶ್ರೇಷ್ಠ ಅವರು ದಿಯಾಗೆ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ, ದಿಯಾ ಎರಡನೆ ಪಂದ್ಯವನ್ನು 11-6 ಅಂತರದಲ್ಲಿ ಸುಲಭವಾಗಿ ಗೆದ್ದುಕೊಂಡರು. ಮೂರನೆಯ ಪಂದ್ಯದಲ್ಲಿ ಭಾರತದ ದಿಯಾ ಮೇಲೆ ಒತ್ತಡ ಹೇರುವಲ್ಲಿ ವಿಫಲವಾದ ನೇಪಾಳದ ಶ್ರೇಷ್ಠ, ಪಂದ್ಯವನ್ನು 11-8 ಅಂತರದಲ್ಲಿ ಸೋತರು. ಇದರಿಂದ ಭಾರತಕ್ಕೆ ಆರಂಭಿಕ ಮುನ್ನಡೆ ದೊರೆಯಿತು.

ನಬಿತಾ ಶ್ರೇಷ್ಠ ವಿರುದ್ಧ ಎರಡನೆಯ ಪಂದ್ಯವಾಡಿದ ಆಯ್ಹಿಕಾ, ಮೊದಲಿಗೆ 2-1 ಮುನ್ನಡೆ ಸಾಧಿಸಿ, ನಂತರ ಪಂದ್ಯವನ್ನು 5-3 ಅಂತರಕ್ಕೆ ಕೊಂಡೊಯ್ದರು. ನಂತರ 11-3 ಅಂತರದಲ್ಲಿ ಮೊದಲ ಪಂದ್ಯವನ್ನು ಜಯಿಸಿದರು.

ಆಯ್ಹಿಕಾಗೆ ಎರಡನೆ ಪಂದ್ಯದಲ್ಲಿ ಪ್ರಬಲ ಪೈಪೋಟಿ ಒಡ್ಡಿದ ನಬಿತಾ, ಪ್ರತಿ ಪಾಯಿಂಟ್‌ಗೂ ಆಯ್ಹಿಕಾ ಹೋರಾಟ ನಡೆಸುವಂತೆ ಮಾಡಿದರು. ಹೀಗಿದ್ದೂ ಆಯ್ಹಿಕಾ ಎರಡನೆ ಪಂದ್ಯವನ್ನು 11-7 ಅಂತರದಲ್ಲಿ ಗೆದ್ದುಕೊಂಡರು. ಮೂರನೆಯ ಪಂದ್ಯದಲ್ಲಿ ನಬಿತಾ ಪೇಲವ ಆಟ ಪ್ರದರ್ಶಿಸಿದ್ದರಿಂದ ಆಯ್ಹಿಕಾ ಆ ಪಂದ್ಯವನ್ನು 11-2 ಅಂತರದಲ್ಲಿ ಜಯಿಸಿದರು. ಇದರಿಂದ ಭಾರತಕ್ಕೆ ನೇಪಾಳದ ವಿರುದ್ಧ 2-0 ಮುನ್ನಡೆ ದೊರೆಯಿತು.

ಮೂರನೆಯ ಪಂದ್ಯದಲ್ಲಿ ನೇಪಾಳದ ಇವಾನಾ ಥಾಪಾ ಮಗರ್ ಅವರನ್ನು ಎದುರಿಸಿದ ಸುತೀರ್ಥ, ಪಂದ್ಯವನ್ನು ಆದಷ್ಟೂ ಬೇಗ ಮುಗಿಸುವ ಧಾವಂತ ಪ್ರದರ್ಶಿಸಿದರು. ಇವಾನಾಗೆ ಯಾವುದೇ ಸಣ್ಣ ಅವಕಾಶವನ್ನೂ ನೀಡದ ಸುತೀರ್ಥ, ಮೊದಲ ಸುತ್ತಿನಲ್ಲಿ 8-0 ಅಂತರದ ಗೆಲುವು ಸಾಧಿಸಿದರು. ನಂತರ ಎರಡು ಮತ್ತು ಮೂರನೆಯ ಸುತ್ತನ್ನು ಕ್ರಮವಾಗಿ 11-5 ಹಾಗೂ 11-2ರ ಅಂತರದಲ್ಲಿ ಜಯಿಸಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್: ಅರುಣಾಚಲದ ಮೂವರು ವೂಶೂ ಆಟಗಾರ್ತಿಯರಿಗೆ ಚೀನಾ ಪ್ರವೇಶ ನಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ : ಸಚಿವ ಹೆಚ್‌.ಸಿ ಮಹದೇವಪ್ಪ

ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದರು. ಮರ್ಯಾದೆಗೇಡು ಹತ್ಯೆ ನಡೆದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮಕ್ಕೆ...

ತಮಿಳುನಾಡು: ಪ್ರತಿಭಟನಾ ನಿರತ ಶಿಕ್ಷಕರು, ನೈರ್ಮಲ್ಯ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಪ್ರೇಮಲತಾ ವಿಜಯಕಾಂತ್

ತಮಿಳುನಾಡು ಸರ್ಕಾರವು ಪ್ರತಿಭಟನಾ ನಿರತ ಮಾಧ್ಯಮಿಕ ದರ್ಜೆಯ ಶಿಕ್ಷಕರು ಮತ್ತು ನೈರ್ಮಲ್ಯ ಕಾರ್ಮಿಕರ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಗುರುವಾರ ಹೇಳಿದ್ದಾರೆ.  ತಮ್ಮ...

ಸ್ವಿಟ್ಜರ್‌ಲ್ಯಾಂಡ್‌ನ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 40 ಮಂದಿ ಸಾವನ್ನಪ್ಪಿರುವ ಶಂಕೆ, ಹಲವರಿಗೆ ಗಾಯ

ನೈಋತ್ಯ ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್-ಮೊಂಟಾನಾದ ಸ್ಕೀ ರೆಸಾರ್ಟ್‌ನಲ್ಲಿರುವ "ಲೆ ಕಾನ್ಸ್ಟೆಲೇಷನ್" ಎಂಬ ಬಾರ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಗುರುವಾರ ತಿಳಿಸಿರುವುದಾಗಿ...

ಭಾರತದ ನಾಲ್ವರು ಸೇರಿ 2025ರಲ್ಲಿ ಜಾಗತಿಕವಾಗಿ 128 ಪತ್ರಕರ್ತರ ಹತ್ಯೆ : ವರದಿ

ಜಾಗತಿಕವಾಗಿ 2025ರಲ್ಲಿ ನೂರಾ ಇಪ್ಪತ್ತೆಂಟು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ (ಡಿ.31) ತಿಳಿಸಿದೆ. ಪತ್ರಕರ್ತರ ಹತ್ಯೆಗಳಲ್ಲಿ ಅರ್ಧಕ್ಕಿಂತ ಹೆಚ್ಚು (74) ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿವೆ ಎಂದು ಬೆಲ್ಜಿಯಂ ಮೂಲದ ಒಕ್ಕೂಟ...

ಸನಾತನ ರಾಷ್ಟ್ರ ಮಹೋತ್ಸವ : ಕೇಂದ್ರ ಸಂಸ್ಕೃತಿ ಸಚಿವಾಲಯ, ದೆಹಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದ ಇಸ್ಲಾಮೋಫೋಬಿಯಾ ಕಾರ್ಯಕ್ರಮ

ಹಿಂದುತ್ವ ಗುಂಪುಗಳು ಹಿಂದೂ ರಾಷ್ಟ್ರ ರಚನೆಗೆ ಕರೆ ನೀಡುವ ಮತ್ತು ಅಲ್ಪಸಂಖ್ಯಾತರಿಗೆ ನೇರ ಅಥವಾ ಪರೋಕ್ಷ ಬೆದರಿಕೆಗಳನ್ನು ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಆದರೆ, ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 'ಸನಾತನ...

ಜಮ್ಮು-ಕಾಶ್ಮೀರ| 17 ಹಳ್ಳಿಗಳ 150 ಜನರಿಗೆ ‘ರಕ್ಷಣಾ ತರಬೇತಿ’ ನೀಡುತ್ತಿರುವ ಸೇನಾ ಪಡೆ

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಚೆನಾಬ್ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಭಾಗವಾಗಿ, ಗ್ರಾಮ ಮಟ್ಟದ ಭದ್ರತೆಯನ್ನು ಬಲಪಡಿಸಲು ಸೇನೆಯು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ದೋಡಾ-ಚಂಬಾ ಗಡಿಯುದ್ದಕ್ಕೂ 17...

ಬೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸ್ಥಿತಿ ಮೇಲ್ವಿಚಾರಣೆಗೆ ಹೊಸ ಮೊಬೈಲ್ ಆ್ಯಪ್ 

ಬೆಂಗಳೂರು: ಬೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಬರುವ ಟ್ರಾನ್ಸ್‌ಫಾರ್ಮರ್‌ಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು 'ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್' (DTLMS) ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕ್ರಮವು...

ಇಂದೋರ್‌ ಕಲುಷಿತ ನೀರು ಸೇವನೆ ಪ್ರಕರಣ: ಹತ್ತಕ್ಕೇರಿದ ಸಾವಿನ ಸಂಖ್ಯೆ; ಇಬ್ಬರು ಅಧಿಕಾರಿಗಳು ಅಮಾನತು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಕನಿಷ್ಠ 10 ಮಂದಿ ಸಾವನ್ನಪ್ಪಿದ ಕಾರಣ ಓರ್ವ ಅಧಿಕಾರಿಯನ್ನು ವಜಾಗೊಳಿಸಲಾಗಿದ್ದು, ಇತರ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಪುರಸಭೆಯಿಂದ ಸರಬರಾಜು ಮಾಡಲಾದ ಕಲುಷಿತ ಕುಡಿಯುವ ನೀರನ್ನು ಸೇವಿಸಿ 2,000...

ಪತ್ರಕರ್ತನ ಪ್ರಶ್ನೆಗೆ ಬೇಜವಬ್ದಾರಿ ಉತ್ತರ ಕೊಟ್ಟ ಬಿಜೆಪಿ ಸಚಿವ : ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚನೆ

ಕಲುಷಿತ ನೀರು ಕುಡಿದು ಜನರು ಸಾವನ್ನಪ್ಪಿದ್ದಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ ಎನ್‌ಡಿಟಿವಿಯ ವರದಿಗಾರನನ್ನು ನಿಂದಿಸಿದ ಮತ್ತು ಬೇಜವಬ್ದಾರಿ ಹೇಳಿಕೆ ನೀಡಿದ ಮಧ್ಯಪ್ರದೇಶ ನಗರಾಭಿವೃದ್ದಿ ಮತ್ತು ವಸತಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ...

‘ಚೀನೀ-ಮೋಮೋ ಎಂದು ನಿಂದಿಸುತ್ತಾರೆ..’; ನೋವು ತೋಡಿಕೊಂಡ ಈಶಾನ್ಯ ಭಾರತದ ವಿದ್ಯಾರ್ಥಿಗಳು

ತ್ರಿಪುರಾ ವಿದ್ಯಾರ್ಥಿ ಅಂಜೆಲ್ ಚಕ್ಮಾ ಅವರ ಜನಾಂಗೀಯ ದ್ವೇಷದ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಮತ್ತು ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಸುರಕ್ಷತೆಗೆ ಒತ್ತಾಯಿಸಲು ಬುಧವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ನೂರಾರು ಜನರು ಮೇಣದಬತ್ತಿ...