ಚಾಕು ಹಿಡಿದಿರುವ ದುಷ್ಕರ್ಮಿ ಮಹಿಳೆಯೊಬ್ಬರ ಕೂದಲನ್ನು ಹಿಡಿದು ನಿಂದಿಸುತ್ತಾ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ವಿಡಿಯೊ ದೆಹಲಿಯದ್ದು ಎಂದು ಪ್ರತಿಪಾದಿಸಿದ್ದು, ದುಷ್ಕರ್ಮಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬುಧವಾರ ರಾಜ್ಯದ ಪೊಲೀಸರನ್ನು ಒತ್ತಾಯಿಸಿದ್ದಾರೆ.
ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಲಿವಾಲ್, ರಾಜಧಾನಿಯ ನಾಸಿರ್‌ಪುರ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಈ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವೈರಲ್ ಆಗಿರುವ ವೀಡಿಯೋದಲ್ಲಿ ದುಷ್ಕರ್ಮಿ ಕೈಯಲ್ಲಿ ಚಾ ಹಿಡಿದಿದ್ದು ಕಾಣಿಸುತ್ತಿದೆ. ಮಹಿಳೆಗೆ ಅಶ್ಲೀಲ ಶಬ್ದಗಳಿಂದ ಬೈಯ್ಯುತ್ತಾ, ಕೂದಲು ಹಿಡಿದು ಎಳೆದು ಅವರ ಹೊಟ್ಟೆಗೆ ಒದೆಯುತ್ತಾನೆ.
ಚಾಕು ಹಿಡಿದಿರುವ ದುಷ್ಕರ್ಮಿ ಮಹಿಳೆಯೊಬ್ಬರ ಕೂದಲನ್ನು ಹಿಡಿದು ನಿಂದಿಸುತ್ತಾ ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ವಿಡಿಯೊ ದೆಹಲಿಯದ್ದು ಎಂದು ಪ್ರತಿಪಾದಿಸಿದ್ದು, ದುಷ್ಕರ್ಮಿಯ ವಿರುದ್ಧ FIR ದಾಖಲಿಸುವಂತೆ ಬುಧವಾರ ರಾಜ್ಯದ ಪೊಲೀಸರನ್ನು ಒತ್ತಾಯಿಸಿದ್ದಾರೆ.#Delhi #Women pic.twitter.com/xryHNP1Ks8
— Naanu Gauri (@naanugauri) September 15, 2022
ಜುಲೈ ತಿಂಗಳಲ್ಲಿ ದೆಹಲಿಯ ನೆರೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಇದೇ ರೀತಿಯ ಮತ್ತೊಂದು ಮನಕಲಕುವ ಘಟನೆ ನಡೆದಿತ್ತು. ಆಗ್ರಾ ಸಮೀಪದ ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೇನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಘಟನೆಯ ಬಳಿಕ ಮಹಿಳೆಯ ಪತಿ ಮತ್ತು ಆತನ ತಾಯಿ ನಾಪತ್ತೆಯಾಗಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: 53 ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಮಹಾರಾಷ್ಟ್ರ ಡಿಸಿಎಂ ಪತ್ನಿ ಅಮೃತಾ ಫಡ್ನವಿಸ್ ಅವರ ನಿಂದನೆ: 50 ವರ್ಷದ ಮಹಿಳೆ ಬಂಧನ
ಅವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು), 342 (ಅಕ್ರಮ ಬಂಧನ) ಮತ್ತು 354 (ಮಹಿಳೆಯರ ಘನೆತೆಗೆ ಧಕ್ಕೆ ತರುವುದು) ಅಡಿಯಲ್ಲಿ ದಾಖಲಿಸಲಾಗಿದೆ.
ಪತಿ ಮತ್ತು ಅತ್ತೆ ತನಗೆ ಥಳಿಸಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ದೂರಿದ್ದಾರೆ.


