ಶನಿವಾರ ರಾತ್ರಿ ರಾಜ್ಯಾದ್ಯಂತ ನಡೆದ ದಾಳಿಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳ 416 ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ಒಟ್ಟು 335 ಪ್ರಕರಣಗಳು ದಾಖಲಾಗಿದ್ದು, ಬಂಧಿತರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಸ್ಸಾಂ
“ಈ ಸಾಮಾಜಿಕ ಅನಿಷ್ಟವನ್ನು ಕೊನೆಗೊಳಿಸಲು ನಾವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಆಪಾದಿತ ಬಾಲ್ಯವಿವಾಹಗಳ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಪ್ರಾರಂಭಿಸಿದ ಮೂರನೇ ಕ್ರಮ ಇದಾಗಿದೆ. ಅಸ್ಸಾಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸೆಪ್ಟೆಂಬರ್ 11, 2023 ರಂದು, ಮೊದಲ ಸುತ್ತಿನ ದಾಳಿಯಲ್ಲಿ ಆ ವರ್ಷದ ಫೆಬ್ರವರಿಯಿಂದ 3,907 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರವು ವಿಧಾನಸಭೆಗೆ ತಿಳಿಸಿತ್ತು. ಇವರಲ್ಲಿ 3,319 ಮಂದಿಯನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.
#Assam continues its fight against child marriage.
In Phase 3 operations launched on the night of Dec 21-22, 416 arrests were made and 335 cases registered.
The arrested individuals will be produced in court today.We will continue to take bold steps to end this social evil!…
— Himanta Biswa Sarma (@himantabiswa) December 22, 2024
ಜನವರಿ 2023 ರಲ್ಲಿ, ಅಸ್ಸಾಂ ಸರ್ಕಾರವು ಬಾಲ್ಯ ವಿವಾಹಗಳ ವಿರುದ್ಧ ರಾಜ್ಯಾದ್ಯಂತ ಅಭಿಯಾನವನ್ನು ಪ್ರಾರಂಭಿಸುತ್ತಿದೆ ಮತ್ತು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಮತ್ತು 14 ರಿಂದ 18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವವರನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಬಂಧಿಸುತ್ತೇವೆ ಎಂದು ಶರ್ಮಾ ಘೋಷಿಸಿದ್ದರು.
ಫೆಬ್ರವರಿಯಲ್ಲಿ, 4,004 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದು, ಅಧಿಕಾರಿಗಳ ಮುಖ್ಯ ಗುರಿ ಬಾಲ್ಯ ವಿವಾಹಗಳನ್ನು ಪ್ರೋತ್ಸಾಹಿಸುವ “ಮುಲ್ಲಾಗಳು, ಕಾಜಿಗಳು ಮತ್ತು ಪೂಜಾರಿಗಳು” ಎಂದು ಹೇಳಿದ್ದಾರೆ. ಇದತ ತರುವಾಯ, ಗುವಾಹಟಿ ಹೈಕೋರ್ಟ್ ಪೊಲೀಸರ ಕ್ರಮವು ರಾಜ್ಯದಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ ಎಂದು ಹೇಳಿದೆ. ಬಾಲ್ಯವಿವಾಹದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು ಈ ಹೇಳಿಕೆ ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಗಳನ್ನು ಸಮರ್ಥಿಸಲಾಗುವುದಿಲ್ಲ ಎಂದು ಹೇಳಿದೆ.
ಆಗಸ್ಟ್‌ನಲ್ಲಿ, ರಾಜ್ಯ ಅಸೆಂಬ್ಲಿಯು ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ಕಡ್ಡಾಯ ನೋಂದಣಿ ಮಸೂದೆಯನ್ನು ಅಂಗೀಕರಿಸಿತು. ಈ ಕಾಯ್ದೆಯು ಮುಸ್ಲಿಮರ ವಿವಾಹಗಳನ್ನು ಸರ್ಕಾರದಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸುತ್ತದೆ. ಈ ಮಸೂದೆಯು ಬ್ರಿಟಿಷರ ಕಾಲದ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯಿದೆ, 1935 ಅನ್ನು ಬದಲಿಸಿ ಜಾರಿಗೆ ತರಲಾಗಿದ್ದು, ಕಾಯಿದೆ ಬದಲಾಗುವವರೆಗೆ ಬ್ರಿಟೀಷ್ ಕಾನೂನು ಜಾರಿಯಲ್ಲಿತ್ತು.
ಬಾಲ್ಯವಿವಾಹದ ವಿರುದ್ಧದ ಹೋರಾಟದಲ್ಲಿ ಮಸೂದೆಯ ಅಂಗೀಕಾರವು “ಐತಿಹಾಸಿಕ ದಿನ” ಎಂದು ಗುರುತಿಸಲಾಗಿದೆ ಎಂದು ಶರ್ಮಾ ಆ ಸಮಯದಲ್ಲಿ ಹೇಳಿದ್ದರು. “ಇದು ಹದಿಹರೆಯದ ಗರ್ಭಧಾರಣೆಯ ವಿರುದ್ಧ ಕಟ್ಟುನಿಟ್ಟಾದ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಹುಡುಗಿಯರ ಒಟ್ಟಾರೆ ಬೆಳವಣಿಗೆಯನ್ನು ಸುಧಾರಿಸುತ್ತದೆ” ಎಂದು ಶರ್ಮಾ ಹೇಳಿದ್ದರು. ಇದೇ ವೇಳೆ ಅವರು, ಬಹುಪತ್ನಿತ್ವವನ್ನು ನಿಷೇಧಿಸುವುದು ತಮ್ಮ ಮುಂದಿನ ಗುರಿ ಎಂದು ಹೇಳಿದ್ದರು.
ಇದನ್ನೂ ಓದಿ: ಶೇಖ್ ಹಸೀನಾ ಆಡಳಿತದಲ್ಲಿ ನಡೆದ ಬಲವಂತದ ಕಣ್ಮರೆ ಪ್ರಕರಣಗಳಲ್ಲಿ ಭಾರತದ ಕೈವಾಡ – ಬಾಂಗ್ಲಾದೇಶ ಆರೋಪ
ಶೇಖ್ ಹಸೀನಾ ಆಡಳಿತದಲ್ಲಿ ನಡೆದ ಬಲವಂತದ ಕಣ್ಮರೆ ಪ್ರಕರಣಗಳಲ್ಲಿ ಭಾರತದ ಕೈವಾಡ – ಬಾಂಗ್ಲಾದೇಶ ಆರೋಪ


