ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ‘ಲವ್ ಜಿಹಾದ್’ ಮತ್ತು ಬಹುಪತ್ನಿತ್ವದಂತಹ ವಿಷಯಗಳನ್ನು ಒಳಗೊಂಡ ಹಲವಾರು ಮಸೂದೆಗಳನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
ನಾಗಾಂವ್‌ನಲ್ಲಿ ನಡೆದ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ರಾಜ್ಯ ಸಚಿವ ಸಂಪುಟ ಕರಡು ಮಸೂದೆಗಳನ್ನು ಅನುಮೋದಿಸಿದ ನಂತರ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
“ಮುಂಬರುವ ಅಸ್ಸಾಂ ವಿಧಾನಸಭೆಯ ಅಧಿವೇಶನದಲ್ಲಿ, ‘ಲವ್ ಜಿಹಾದ್’, ಬಹುಪತ್ನಿತ್ವ, ಸತ್ರಗಳ (ವೈಷ್ಣವ ಮಠ) ಸಂರಕ್ಷಣೆ ಮತ್ತು ಚಹಾ ಬುಡಕಟ್ಟು ಜನಾಂಗದವರಿಗೆ ಭೂ ಹಕ್ಕುಗಳಂತಹ ವಿಷಯಗಳ ಕುರಿತು ಕೆಲವು ಪ್ರಮುಖ ಮತ್ತು ಐತಿಹಾಸಿಕ ಮಸೂದೆಗಳನ್ನು ನಾವು ಮಂಡಿಸುತ್ತೇವೆ” ಎಂದು ಅವರು ಹೇಳಿದರು.
“ಸಚಿವ ಸಂಪುಟವು ಅದನ್ನು ಅನುಮೋದಿಸಿದಾಗ ನಾವು ನಿಮಗೆ ವಿವರಗಳನ್ನು ಹೇಳಲು ಸಾಧ್ಯವಾಗುತ್ತದೆ” ಎಂದು ಶರ್ಮಾ ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೆ ಹೇಳಿದರು.
ವಸಾಹತುಶಾಹಿಗಿಂತ ‘ರಾಜಕೀಯ ಇಸ್ಲಾಂ’ ಸನಾತನಕ್ಕೆ ದೊಡ್ಡ ಹೊಡೆತ ನೀಡಿದೆ: ಯೋಗಿ ಆದಿತ್ಯನಾಥ್


